Uncategorized
ಸಾವೆಹಕ್ಲು ಎಂಬ ಭೂಲೋಕದ ಸ್ವರ್ಗ
ಶಿವಮೊಗ್ಗ: ಶಿವಮೊಗ್ಗ ಎಂದಾಕ್ಷಣ ಪ್ರವಾಸಿಗರಿಗೆ ನೆನಪಾಗುವುದು ಜೋಗಜಲಪಾತ ಹಾಗೂ ಲಿಂಗನಮಕ್ಕಿ ಜಲಾಶಯ. ಆದರೆ ಶಿವಮೊಗ್ಗದಲ್ಲಿ ಹತ್ತಾರು ಜಲಪಾತಗಳು, ಆರೇಳು ಜಲಾಶಯಗಳಿವೆ ಎಂದರೆ ನಿಜಕ್ಕೂ ಆಶ್ಚರ್ಯ ಎನಿಸದೇ ಇರಲಾರದು.
ಅಚ್ಛ ಮಲೆನಾಡಿನ ತಾಲೂಕು ಹೊಸನಗರ ಪ್ರಕೃತಿ ಸೌಂದರ್ಯವನ್ನೇ ಹೊದ್ದು ಮಲಗಿದಂತಿದೆ.
ಹೊಸನಗರ ತಾಲೂಕಿನಲ್ಲಿ ಚಕ್ರಾ ಹಾಗೂ ಸಾವೆಹಕ್ಲು ಎಂಬ ಎರಡು ಅಧ್ಭುತ ಜಲಾಶಯಗಳಿಗವೆ, ಈ ಎರಡೂ ಜಲಾಶಯಗಳನ್ನ ಪಿಕ್‌ಅಪ್ ( ನೀರು ಸಂಗ್ರಹಕ) ಗಳ ರೀತಿ ಶರಾವತಿ ಒಡಲು ಬರಿದಾದರೆ ಈ ನೀರನ್ನ ಬಳಸಲು ಚಕ್ರಾ ನದಿಗೆ ಕಟ್ಟಲಾಗಿದೆ. ಹೊಸನಗರದಿಂದ ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿ ನಗರ ಎಂಬ ಪಟ್ಟಣವಿದೆ ಅಲ್ಲಿಂದ ಕೆಲವೇ ಕಿಲೋಮೀಟರ್ (೨೦) ದೂರದಲ್ಲಿ ಸಾವೆಹಕ್ಲು ಜಲಾಶಯ ಸಿಗುತ್ತೆ. ಇದರ ಪಕ್ಕದಲ್ಲೇ ಆರೇಳು ಕಿಲೋಮೀಟರ್ ದೂರದಲ್ಲಿ ಚಕ್ರಾ ಜಲಪಾತವನ್ನೂ ಕಾಣಬಹುದು. ಬೈಕರ್‌ಗಳಿಗೆ, ಫೋಟೋಗ್ರಫಿ ಹವ್ಯಾಸಿಗಳಿಗಂತೂ ಸ್ವರ್ಗಸಾದೃಶ್ಯ ಜಾಗ.
ವಿದ್ಯುತ್ ನಿಗಮದ ಪರಿಮಿತಿಯಲ್ಲಿ ಹಾಗೂ ಹಿಂದೆ ನಕ್ಸಲ್ ಪ್ರದೇಶವಾದ್ದರಿಂದ ಭದ್ರತೆ ಹೆಚ್ಚಿದೆ. ಜಲಾಶಯದ ಮೇಲೆ ಹಳ್ಳಿಗರ ಸಂಚಾರ ಬಿಟ್ಟರೆ ಪ್ರವಾಸಿಗರಿಗೆ ಹಾಗೂ ಅಪರಿಚಿತರಿಗೆ ಪ್ರವೇಶ ಇಲ್ಲ. ಹಾಗೂ ಓಡಾಡಬೇಕೆಂದರೆ ನಗರದಲ್ಲಿ ಇಲಾಖೆ ಎಂಜೀನಿಯರ್‌ಗಳ ಅನುಮತಿ ಪತ್ರ ತೆಗೆದುಕೊಂಡು ಹೋಗಬೇಕು.
You may like
ಶಿವಮೊಗ್ಗದಿಂದ ಗೀತಕ್ಕ ಚುನಾವಣಾ ರಂಗಪ್ರವೇಶ…ಬೆನ್ನಿಗೆ ನಿಲ್ಲುತ್ತಂತೆ ಸ್ಯಾಂಡಲ್ ವುಡ್.!
ಬಿಜೆಪಿಗೆ ‘ಒಬಿಸಿ’ ಶಾಕ್ : ಫಸ್ಟ್ ಲಿಸ್ಟ್ ಬೆನ್ನಲ್ಲೇ ಬಂಡಾಯ ಸ್ಫೋಟ!
ಶಿವಮೊಗ್ಗದಲ್ಲಿ ಗೀತಕ್ಕಗೆ ಲಾಟರಿ.. BSY ಕುಟುಂಬಕ್ಕೆ ಗುನ್ನಾ..?
ಶಿವರಾತ್ರಿ ಹಬ್ಬ’ಕ್ಕೆ ಊರಿಗೆ ಹೋಗುವವರಿಗೆ ಗುಡ್ ನ್ಯೂಸ್: ‘KSRTC’ಯಿಂದ ‘1,500 ಹೆಚ್ಚುವರಿ ವಿಶೇಷ ಬಸ್’ ವ್ಯವಸ್ಥೆ
Madhu Bangarappa | ಕ್ರೀಡೆ ನಮ್ಮ ಜೀವನದ ಅಗತ್ಯಗಳಲ್ಲಿ ಒಂದು : ಸಚಿವ ಎಸ್.ಮಧು ಬಂಗಾರಪ್ಪ
ಉನ್ನತ ಶಿಕ್ಷಣ ಪಡೆಯುವ ಮಕ್ಕಳ ಕನಸು ಸಾಕಾರಕ್ಕೆ ಸರ್ಕಾರದಿಂದಲೇ ವಿಶೇಷ ಕಲಿಕಾ ತರಬೇತಿ : ಸಚಿವ ಎಸ್ ಮಧು ಬಂಗಾರಪ್ಪ