Featured
ಹೇಗರಲಿದೆ ಈ ಬಾರಿ ಸ್ವಾತಂತ್ರ್ಯ ದಿನಾಚರಣೆ..?- ಕೋವಿಡ್19 ಮಧ್ಯೆ ಸರಳ ಸಮಾರಂಭಕ್ಕೆ ಸಿದ್ಧತೆ

ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
74ನೇ ಸ್ವಾತಂತ್ರ್ಯ ದಿನಾಚಾರಣೆಗೆ ಎರಡೇ ಎರಡು ದಿನ ಮಾತ್ರ ಬಾಕಿ ಉಳಿದಿದೆ. ಕೋವಿಡ್19 ಹಿನ್ನಲೆಯಲ್ಲಿ, ಸರ್ಕಾರದ ಮಾರ್ಗಸೂಚಿ ಪ್ರಕಾರ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಅವಕಾಶವಿಲ್ಲ. ಹೀಗಾಗಿ ಈ ಬಾರಿ ದೇಶದೆಲ್ಲೆಡೆ ಸರಳ ಸ್ವಾತಂತ್ರ್ಯ ದಿನಾಚರಣೆ ಸರಳವಾಗಿ ನಡೆಯಲಿದೆ.
ಪ್ರತಿವರ್ಷದಂತೆ ಈ ಬಾರಿಯೂ ದೆಹಲಿಯ ಕೆಂಪುಕೋಟಿಯಲ್ಲಿ ದ್ವಜಾರೋಹಣ ಮತ್ತು ಪರೇಡ್ ಇದ್ದೇ ಇರುತ್ತದೆ. ಪ್ರಧಾನ ಮಂತ್ರಿಗಳ ಭಾಷಣವೂ ಇರಲಿದೆ. ಆದ್ರೆ ಎಲ್ಲವೂ ಸಾಮಾಜಿಕ ಅಂತರ ಕಾಯ್ದುಕೊಂಡು ಸರಳವಾಗಿ ಇರಲಿದೆ. ಸೀಮಿತ ಸಂಖ್ಯೆಯಲ್ಲಿ ಗಣ್ಯರು ಮತ್ತು 500 ಎನ್ಸಿಸಿ ಕೆಡೆಟ್ಗಳಿರಲಿದ್ದಾರೆ. ಶಾಲಾ ಮಕ್ಕಳು ಇರುವುದಿಲ್ಲ.
ಸಾಮಾಜಿಕ ಅಂತರಕ್ಕೆ ಹೆಚ್ಚು ಒತ್ತು ನೀಡಿರುವುದರಿಂದ ಸಿಬ್ಬಂದಿಗಳು ಪಿಪಿಇ ಕಿಟ್ ಧರಿಸಬೇಕು. ವಾಯುಸೇನೆ, ಭೂ ಸೇನೆ ಮತ್ತು ನೌಕಾ ಸೇನೆಯ ಬ್ಯಾಂಡ್ ಪ್ರದರ್ಶನವಿರಲಿದೆ. ಸುಮಾರು 1,500 ಕೊರೋನಾ ವಾರಿಯರ್ಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಕೆಂಪು ಕೋಟೆಯ ಒಳಗೆ ಸುಮಾರು 300 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ದೆಹಲಿ ಮತ್ತು ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಗೌರವ ಸ್ವೀಕರಿಸಲಿರುವ ಸುಮಾರು 350 ಪೊಲೀಸ್ ಸಿಬ್ಬಂದಿಯನ್ನು ಕೋವಿಡ್-19 ಆರೋಗ್ಯ ಸುರಕ್ಷತೆ ಹಿನ್ನೆಲೆಯಲ್ಲಿ ದೆಹಲಿ ಕಂಟೋನ್ಮೆಂಟ್ ನ ಪೊಲೀಸ್ ಕಾಲೊನಿಯಲ್ಲಿ ಐಸೊಲೇಷನ್ ನಲ್ಲಿರಿಸಲಾಗಿದೆ. ಲೋಹದ ಪತ್ತೆ ಹತ್ತಿರ ನಿಲ್ಲುವ ಸೈನಿಕರು ಪಿಪಿಇ ಕಿಟ್ ಗಳನ್ನು ಧರಿಸಿರುತ್ತಾರೆ. ಹ್ಯಾಂಡ್ ಸ್ಯಾನಿಟೈಸರ್ ನ್ನು ಇರಿಸಲಾಗುತ್ತದೆ. ಎರಡು ಗಜ ಅಂತರದಲ್ಲಿ ಕುಳಿತುಕೊಳ್ಳಲು ಆಸನ ವ್ಯವಸ್ಥೆಯಿರುತ್ತದೆ.
ಕಾರ್ಯಕ್ರಮದಲ್ಲಿ ಭಾಗವಹಿಸುವವರೆಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕಾಗುತ್ತದೆ. ಮೊಬೈಲ್ ನಲ್ಲಿ ಆರೋಗ್ಯ ಸೇತು ಆಪ್ ನ ಸ್ಥಿತಿಗತಿ ನೋಡಿಕೊಂಡು ರೆಡ್ ಫೋರ್ಟ್ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ.
You may like
ಗ್ಯಾನವಾಪಿಯಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ನೀಡಿದ್ದೇಕೆ ಹೈಕೋರ್ಟ್..?
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?