ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ವಿಶ್ವದ ಟಾಪ್ 10 ಸಿರಿವಂತ ನಟರ ಸಾಲಿನಲ್ಲಿ ಬಾಲಿವುಡ್ನಟ ಅಕ್ಷಯ್ ಕುಮಾರ್ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಪ್ರತಿಷ್ಠಿತ ನಿಯತಕಾಲಿಕ ಫೋರ್ಬ್ಸ್ ಹೇಳಿದೆ.
ಅತಿ ಹೆಚ್ಚು ಸಂಭಾವನೆ ಪಡೆಯುವ ಪುರುಷ ಸಿನಿಮಾ ತಾರೆಯರ ಪಟ್ಟಿಯನ್ನ ಪೋರ್ಬ್ಸ್ ಬಿಡುಗಡೆ ಮಾಡಿದ್ದು ನಟ ಅಕ್ಷಯ್ ಕುಮಾರ್ 362 ಕೋಟಿ ಗಳಿಕೆಯೊಂದಿಗೆ 6ನೇ ಸ್ಥಾನ ಪಡೆದಿದ್ದಾರೆ.
ಕಳೆದ ವರ್ಷ 4ನೇ ಸ್ಥಾನ ಪಡೆದಿದ್ದ ಅಕ್ಷಯ್ ಈ ಬಾರಿ ಎರಡು ಸ್ಥಾನ ಇಳಿಕೆ ಕಂಡಿದ್ದಾರೆ. ಆದರೂ ಈ ವರ್ಷ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ. ಅಕ್ಷಯ್ ಕುಮಾರ್ ಒಂದು ಚಿತ್ರಕ್ಕೆ 35ರಿಂದ 75 ಕೋಟಿ ರೂ.ವರೆಗೂ ಸಂಭಾವನೆ ಪಡೆಯುತ್ತಾರೆ ಎಂದು ತಿಳಿದು ಬಂದಿದೆ.
ಹಾಲಿವುಡ್ ನಟ ಡ್ವೇನ್ ಜಾನ್ಸನ್ 656 ಕೋಟಿಯೊಂದಿಗೆ ಮೊದಲ ಸ್ಥಾನ ಪಡೆದರೆ, ಮತ್ತೋರ್ವ ಶ್ರೇಷ್ಠ ನಟ ರಿಯಾನ್ ರೆನಾಲ್ಡ್ಸ್ 536 ಕೋಟಿಯೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ. 2019ರ ಜೂ.1ರಿಂದ 2020ರ ಜೂ.1ರವರೆಗಿನ ಆದಾಯವನ್ನ ಪರಿಗಣಿಸಿ ಈ ಪಟ್ಟಿಯನ್ನ ಫೋರ್ಬ್ಸ್ ಬಿಡುಗಡೆ ಮಾಡಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?