Featured
ವಿಜಯಪುರದಲ್ಲಿ ಭಾರೀ ಮಳೆ: ಮುದ್ದೇಬಿಹಾಳದಲ್ಲಿ ಹಳ್ಳ ದಾಟಿ ವೃದ್ಧನ ಶವ ಸಂಸ್ಕಾರ
![](https://risingkannada.com/wp-content/uploads/2020/08/vijapura-1-1.jpg)
ರೈಸಿಂಗ್ ಕನ್ನಡ:
ವಿಜಯಪುರ:
ವಿಜಯಪುರದಲ್ಲಿ ಭಾರೀ ಮಳೆಯ ಪರಿಣಾಮ ಇಲ್ಲಿನ ಮೃತಪಟ್ಟ ವೃದ್ಧನ ಶವವನ್ನ ಹಳ್ಳದಲ್ಲೆ ನೆಡೆದುಕೊಂಡು ಹೋಗಿ ಶವ ಸಂಸ್ಕಾರ ಮಾಡಿದ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಳವಾಟ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ, ಜಲಾಶಯ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೆ ತುಂಬ ಹರಿಯುತ್ತಿರುವ ಹಳ್ಳದಲ್ಲೇ ನಡೆದುಕೊಂಡು ಹೋಗಿ ಮೃತಪಟ್ಟಿದ್ದ ವೃದ್ಧನ ಶವ ಸಂಸ್ಕಾರ ಮಾಡಿದ ಘಟನೆ ನಡೆದಿದೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಳವಾಟ ಗ್ರಾಮದಲ್ಲಿ ಮೃತಪಟ್ಟಿದ್ದ
ವೃದ್ಧರೊಬ್ಬರ ಶವ ಸಂಸ್ಕಾರಕ್ಕಾಗಿ ತುಂಬಿದ್ದ ಹಳ್ಳ ದಾಟಿಕೊಂಡೇ ಶವ ಪೆಟ್ಟಿಗೆ ಹೊತ್ತೊಯ್ದು ಗ್ರಾಮಸ್ಥರು ಅಂತ್ಯಸಂಸ್ಕಾರ ನಡೆಸಿದ್ದಾರೆ.
ಬಳವಾಟ ಗ್ರಾಮದಲ್ಲಿ ಸೋಮವಾರ 81 ವರ್ಷದ ಕಾಶಿಂಸಾಬ ಮುರ್ತೂಜಸಾಬ ದೊಡಮನಿ ಎಂಬವರು ಮೃತಪಟ್ಟಿದ್ದರು. ಮುಸ್ಲಿಂ ಸಂಪ್ರದಾಯದಂತೆ ಅವರ ಅಂತ್ಯಸಂಸ್ಕಾರ ಮಾಡಬೇಕಾಗಿತ್ತು. ಆದರೆ ಮುಸ್ಲಿಂ ಸಮಾಜದ ಸ್ಮಶಾನ ದೂರವಿದೆ. ಇದರ ನಡುವೆ ಹಳ್ಳವಿದ್ದು ಮಳೆಯಿಂದಾಗಿ ಹಳ್ಳ ತುಂಬಿ ಹರಿಯುತ್ತಿರುತ್ತದೆ. ಹೀಗಾಗಿ ಗ್ರಾಮದಿಂದ ಸ್ಮಶಾನಕ್ಕೆ ಹೋಗಬೇಕಾದರೆ ಈ ಹಳ್ಳ ದಾಟಿಕೊಂಡು ಹೋಗಬೇಕು. ಈ ಸಮುದಾಯದ ಯಾರಾದರೂ ಮೃತಪಟ್ಟರೆ ಅವರ ಶವದ ಪೆಟ್ಟಿಗೆಯನ್ನು ಹೊತ್ತುಕೊಂಡು ಅಪಾಯದಲ್ಲಿ ಜನ ಹಳ್ಳ ದಾಟಬೇಕಾಗಿದೆ.
![Puranik Full](https://risingkannada.com/wp-content/uploads/2020/07/full-plate.jpg)
ಬಳವಾಟ ಗ್ರಾಮದಿಂದ ಸ್ಮಶಾನ ತಲುಪಲು 1 ಕಿ.ಮೀ ದಾರಿ ಕ್ರಮಿಸಬೇಕು. ಇದರ ಮಧ್ಯೆ ಈ ಹಳ್ಳವಿದ್ದು ಮಳೆ ಬಂದರೆ ಹಳ್ಳ ತುಂಬಿ ಹರಿಯುತ್ತದೆ. ಈ ಹಳ್ಳ ದಾಟಲು ಕನಿಷ್ಠ 100 ಮೀಟರ ನೀರಿನಲ್ಲಿ ಹೋಗಬೇಕಾದ ಅನಿವಾರ್ಯ ತೆ ಇದೆ. ಇದು ಸಾಕಷ್ಟು ತೊಂದರೆಯಾಗುತ್ತಿದೆ.
ಇಲ್ಲಿಯೇ ಭೋವಿ ಸಮಾಜದ ಸ್ಮಶಾನ ಭೂಮಿ ಇರುವ ಕಾರಣ ಮುಸ್ಲಿಂ ಹಾಗೂ ಬೋವಿ ಸಮಾಜದ ಜನತೆ ಯಾರಾದರು ಮೃತಪಟ್ಟರೆ ಪ್ರತಿ ಬಾರಿ ಹಳ್ಳದ ನೀರು ದಾಟುವ ಅನಿರ್ವಾಯವಿದೆ. ಸರ್ಕಾರ ಈ ಹಳ್ಳಕ್ಕೆ ಸೇತುವೆ ನಿರ್ಮಿಸಬೇಕು ಎನ್ನುವ ಬೇಡಿಕೆ ಮೊದಲಿನಿಂದಲೂ ಇದೆ. ಆದರೆ ಸರ್ಕಾರ ಸ್ಪಂದಿಸುತ್ತಿಲ್ಲ ಎನ್ನುವ ನೋವು ಅವರಲ್ಲಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?