Featured
ಸೋಂಕಿನಿಂದ ಹೃದಯಾಘಾತ, ಪಾರ್ಶ್ವವಾಯು ಬರಬಹುದು ಎಚ್ಚರ ಎಚ್ಚರ..!
![](https://risingkannada.com/wp-content/uploads/2019/08/heart-01.jpg)
ಸಾಮಾನ್ಯವಾಗಿ ಸಕ್ಕರೆ ಕಾಯಿಲೆ ( ಮಧುಮೇಹ), ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮುಂತಾದವು ಹೃದಯಾಘಾತಕ್ಕೆ ಕಾರಣವಾಗುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೆ, ಇದಕ್ಕೆ ಇನ್ಫೆಕ್ಷನ್ (ಸೋಂಕು ) ಕೂಡ ಕಾರಣವಾಗುತ್ತವೆ ಎಂಬುದು ಆಶ್ಚರ್ಯ ಎನಿಸಿದರೂ ಸತ್ಯ. ನ್ಯೂಮೋನಿಯಾ, ಮೂತ್ರಕೋಶ ಇನ್ಫೆಕ್ಷನ್ (ಸೋಂಕು) ಗಳಂತಹ ಸಮಸ್ಯೆಗಳು ಕಾಣಿಸಿಕೊಂಡ ನಂತರ (ಸಾಧಾರಣವಾಗಿ ಮೂರು ತಿಂಗಳ ನಂತರ ) ಹೃದಯಾಘಾತ ಸಂಬಂಧಿ ಕಾಯಿಲೆಗಳ ಸಾಧ್ಯತೆ ಶೇ.37ರಷ್ಟು ಇರುತ್ತೆ. ಜೊತೆಗೆ ಪಾರ್ಶ್ವವಾಯು ಕಾಯಿಲೆಯ ಸಂಭವನೀಯತೆ ಶೇ.30ರಷ್ಟು ಹೆಚ್ಚುತ್ತವೆ ಎಂದು ಮಿನ್ನೆಸೋಟಾ ಮೆಡಿಕಲ್ ಸ್ಕೂಲ್ ನಡೆಸಿರುವ ಅಧ್ಯಯನದ ವರದಿಯಲ್ಲಿ ಮಾಹಿತಿ ನೀಡಲಾಗಿದೆ.
ಸಾಮಾನ್ಯವಾಗಿ ಸೋಂಕು ಮನುಷ್ಯನ ಮೇಲೆ ದಾಳಿ ಮಾಡಿದಾಗ ಅವುಗಳನ್ನು ಎದುರಿಸುವುದಕ್ಕೆ ಸಿದ್ಧವಿರುವಂತೆ ರೋಗ ನಿರೋಧಕ ಶಕ್ತಿ ವ್ಯವಸ್ಥೆ ಅಧಿಕ ಪ್ರಮಾಣದಲ್ಲಿ ಬಿಳಿಯ ರಕ್ತಕಣಗಳನ್ನು ಉತ್ವಾದಿಸುತ್ತದೆ. ಇದರಿಂದ ದೇಹದಲ್ಲಿ ಇನ್ ಫ್ಲಮೇಷನ್ ಪ್ರಕ್ರಿಯೆ ಆರಂಭವಾಗುತ್ತದೆ. ಇದರಲ್ಲಿ ನಾವು ಗಮನಿಸಬೇಕಾದ ವಿಷಯ ಏನೆಂದರೆ, ಈ ಪ್ರಕ್ರಿಯೆಯಲ್ಲಿ ಪ್ಲೇಟ್ಲೆಟ್ಗಳ ಸಂಖ್ಯೆಯೂ ಕೂಡ ಹೆಚ್ಚುತ್ತದೆ. ಇವು ರಕ್ತದ ಗಡ್ಡೆಗಳು ಉಂಟಾಗುವುದಕ್ಕೆ ಸಹಾಯ ಮಾಡುತ್ತವೆ. ಈ ಗಡ್ಡೆಗಳು ಮಿದುಳು ಅಥವಾ ರಕ್ತನಾಳಗಳಲ್ಲಿ ಸಿಕ್ಕಿಹಾಕಿಕೊಂಡು ರಕ್ತ ಸಂಚಾರಕ್ಕೆ ಅಡ್ಡಿಪಡಿಸಿದಾಗ ಹೃದಯಘಾತ, ಪಾರ್ಶ್ವವಾಯು ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆಗಳು ಇರುತ್ತವೆ ಎಂಬುದು ಸಂಶೋಧಕರ ಎಚ್ಚರಿಕೆ.
ಸೋಂಕು ತೀವ್ರತೆ ಹೆಚ್ಚಿದಂತೆಲ್ಲ ಹೃದಯ ಸಂಬಂಧೀ, ಪಾರ್ಶ್ವವಾಯು ಸಂಬಂಧಿ ಕಾಯಿಲೆಗಳು ಅಧಿಕಗೊಳ್ಳುತ್ತವೆ . ಆದ್ದರಿಂದ ಸೋಂಕು ಕಾಯಿಲೆಗಳನ್ನು ಲಘುವಾಗಿ ಭಾವಿಸಿ ನಿರ್ಲ ಕ್ಷಿಸಬಾರದು. ಅದರಲ್ಲೂ ಹೃದಯ ಕಾಯಿಲೆ ಇರುವವರು ಇನ್ ಫೆಕ್ಷನ್ ಬಗ್ಗೆ ತುಂಬಾ ಎಚ್ಚರಿಕೆಯಿಂದಿರಬೇಕು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?