Connect with us

Featured

ಭಕ್ತರ ಮೇಲೆ ಶ್ರೀಕೃಷ್ಣನ‌ ಅಕ್ಕರೆ

ಬರಹ: ವಿದ್ವಾನ್ ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ ಮತ್ತು ಖ್ಯಾತ ವಾಸ್ತು ತಜ್ಞರು

ಮಹಾಭಾರತ ಯುದ್ಧ ಶುರುವಾಗಿ‌ ಒಂಭತ್ತು ದಿನಗಳಾಗಿದ್ದವು. ಕೌರವರ ಕಡೆಯಿಂದ ಯುದ್ಧ ಮುನ್ನಡೆಸುತ್ತಿದ್ದ ಭೀಷ್ಮ ಪಿತಾಮಹನಿಂದ ಪಾಂಡವರಿಗೆ ಹಾನಿಯಾಗಿರಲಿಲ್ಲ. ದುರ್ಯೋಧನನು ಈ ವಿಷಯವನ್ನಿಟ್ಟುಕೊಂಡು ಭೀಷ್ಮರನ್ನು ಮೂದಲಿಸುತ್ತಾ “ನೀವು ಕೌರವ ಸೇನೆಯಲ್ಲಿದ್ದರೂ ಪಾಂಡವರ ಪಕ್ಷಪಾತಿ. ಆದ್ದರಿಂದಲೇ ಅರೆಮನಸ್ಸಿನಿಂದ ಪಾಂಡವರ ವಿರುದ್ಧ ನೆಪಮಾತ್ರಕ್ಕೆ ಯುದ್ಧ ಮಾಡುತ್ತಿದ್ದೀರಿ. ಪಾಂಡವರನ್ನು ಕೊಂದು ಯುದ್ಧ ಗೆಲ್ಲಬೇಕೆಂಬ ಇಚ್ಛೆಯೇ ನಿಮಗಿಲ್ಲ” ಎಂದನು.

Advertisement


ಅದನ್ನು ಕೇಳಿ ಅವಮಾನಿತರಾದ ಭೀಷ್ಮರು ಮಾರನೇ ದಿನವೇ ಪಾಂಡವರನ್ನು ಯುದ್ಧದಲ್ಲಿ ಕೊಲ್ಲುತ್ತೇನೆಂದು ಭರವಸೆ ನೀಡಿದರು. ದುರ್ಯೋಧನನು ಸಂತೋಷದಿಂದ ಹೊರಟುಹೋದನು. ಈ ಭಯಂಕರ ಸುದ್ದಿ ಅಂದೇ ರಾತ್ರಿ‌ ಪಾಂಡವರಿಗೆ ತಲುಪಿತು. ಅವರಲ್ಲಿ ಯಾರೂ ಭೀಷ್ಮರನ್ನು ಎದುರಿಸಿ ಯುದ್ಧ ಗೆಲ್ಲುವಷ್ಟು ಸಮರ್ಥರಾಗಿರಲಿಲ್ಲ. ದ್ರೌಪದಿ ಕೂಡ ಪಾಂಡವರ ಮೇಲೆರಗಿದ್ದ ಆಪತ್ತನ್ನು ನೆನೆದು ತೀವ್ರವಾಗಿ ದುಃಖಿಸಿದಳು. ಅವಳು ಭಕ್ತಿಯಿಂದ ಕೃಷ್ಣನನ್ನು ಈ ಪರಿಸ್ಥಿತಿಯಿಂದ ಪಾರುಗಾಣಿಸುವಂತೆ ಪ್ರಾರ್ಥಿಸತೊಡಗಿದಳು.


ಕೃಷ್ಣ ಪರಮಾತ್ಮನು ದ್ರೌಪದಿಯ ಕರೆಗೆ‌ ಓಗೊಟ್ಟು ಅಲ್ಲಿ ಪ್ರತ್ಯಕ್ಷವಾಗಿ ತನ್ನನ್ನು ಹಿಂಬಾಲಿಸುವಂತೆ ದ್ರೌಪದಿಗೆ ಹೇಳಿದನು. ಕತ್ತಲಲ್ಲಿ ರಣಭೂಮಿಯಲ್ಲಿ ಇಬ್ಬರೂ ನಡೆದುಕೊಂಡೇ ಹೋದರು. ಅನೇಕ ಹೆಣಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅವರು‌ ಒಂದು ಡೇರೆಯ ಹತ್ತಿರಕ್ಕೆ ಬರುತ್ತಿದ್ದಂತೆಯೇ…
ಕೃಷ್ಣನು “ತಂಗಿ, ನಿನ್ನ ಪಾದರಕ್ಷೆಗಳನ್ನು ಕಳಚಿಡು. ಅವು ಸದ್ದು ಮಾಡುತ್ತಿವೆ” ಎಂದನು. ದ್ರೌಪದಿ ಪಾದರಕ್ಷೆಗಳನ್ನು ತೆಗೆದಿಟ್ಟಳು. ಕೃಷ್ಣನು “ಹುಷ್! ವೃದ್ಧನೊಬ್ಬ ಒಳಗಡೆ ಅತ್ತಿಂದಿತ್ತ ಓಡಾಡುತ್ತಿದ್ದಾನೆ. ಶಬ್ದ ಮಾಡದೆ ಅವನಿಗೆ ನಮಸ್ಕರಿಸು” ಎಂದನು.

Advertisement


ದ್ರೌಪದಿ ಭೀಷ್ಮನಿಗೆ ನಮಸ್ಕರಿಸಿದಳು. ಅವಳಾರೆಂದು ತಿಳಿಯುವ ಮುನ್ನವೇ ಭೀಷ್ಮರು ಅವಳನ್ನು ಆಶೀರ್ವದಿಸಿದರು: “ದೀರ್ಘ ಸುಮಂಗಲೀಭವ! ನೀನಾರು? ಮೇಲೇಳು, ನನ್ನಿಂದಾಗಬೇಕು?”
“ನಿಮ್ಮಿಂದ ನನ್ನ ಗಂಡಂದಿರಿಗೆ ಪ್ರಾಣಭಿಕ್ಷೆ ಬೇಕು” ಎನ್ನುತ್ತಾ ಮೇಲೆದ್ದಾಗ ಅವಳು ದ್ರೌಪದಿಯೆಂದು ತಿಳಿದು ಭೀಷ್ಮರಿಗೆ ಆಶ್ಚರ್ಯವಾಯಿತು. “ನೀನು ಕಗ್ಗತ್ತಲಲ್ಲಿ ಇಲ್ಲಿಗೆ ಬರಲು ಕಾರಣವೇನು? ಒಬ್ಬಳೇ ಬಂದೆಯಾ?” ಎಂದು ಕೇಳಿದರು. ದ್ರೌಪದಿ “ನಿಮ್ಮ ಆಶೀರ್ವಾದ ಪಡೆಯಲು ಬಂದೆ. ನನ್ನ ಜೊತೆಗೆ ಕೃಷ್ಣನೂ ಬಂದಿರುವನು” ಎಂದಳು.


ಅಷ್ಟರಲ್ಲಿ ಕೃಷ್ಣ ಬಾಗಿಲ ಹತ್ತಿರ ನಿಂತಿರುವುದನ್ನು ಭೀಷ್ಮರು ನೋಡಿ ಕರೆದರು: “ಬಾ ಕೃಷ್ಣ! ಒಳಗೆ ಬಾ! ಬಾಗಿಲಲ್ಲೇ ಏಕೆ ನಿಂತಿರುವೆ? ಇದು ನಿನ್ನದೇ ಯೋಜನೆ ಎಂದು ನನಗೀಗ ತಿಳಿಯಿತು. ನಿನ್ನ ಭುಜದ ಮೇಲೆ ನೇತಾಡುತ್ತಿರುವುದೇನು? ಪಾದರಕ್ಷೆಗಳಂತೆ ಇವೆ !”
ಕೃಷ್ಣನು “ಹೌದು! ಪಾಂಚಾಲಿಯವು. ಶಬ್ದವಾಗಬಾರದೆಂದು ತೆಗೆದಿಟ್ಟುಕೊಂಡಿದ್ದೆ” ಎಂದನು. ತನ್ನ ಪಾದರಕ್ಷೆಗಳನ್ನು ಕೃಷ್ಣನು ಹೊತ್ತಿರುವುದನ್ನು ನೋಡಿ ದ್ರೌಪದಿ ಹೌಹಾರಿದಳು: “ದೇವಾ! ಇವತ್ತು ನಿನ್ನಿಂದ ನನಗೆ ಮಹಾಪಾಪ ಬಂದಿತು” ಎಂದಳು. ಕೃಷ್ಣನು “ಅಣ್ಣ ತಂಗಿಯ ಪಾದುಕೆಗಳನ್ನು ಹೊತ್ತರೆ ಏನೂ ಬಾಧಕವಿಲ್ಲ. ಅದರ ಬಗ್ಗೆ ಚಿಂತಿಸಬೇಡ. ಭೀಷ್ಮರ ಆಶೀರ್ವಾದ ಪಡೆದೆಯಾ?” ಎಂದು ಕೇಳಿದನು.


ಭೀಷ್ಮರು “ಕೃಷ್ಣ, ಅವಳು ಏನನ್ನೂ ಬೇಡಲಿಲ್ಲ. ಅವಳ ಕೋರಿಕೆಯನ್ನು ಕೇಳದೆಯೇ ನಾನು ದೀರ್ಘ ಕಾಲ ಸುಮಂಗಲಿಯಾಗಿ ಇರು ಎಂದು ಆಶೀರ್ವದಿಸಿಬಿಟ್ಟೆ. ನೀನು ಎಲ್ಲ ಕಾರ್ಯಗಳನ್ನು ನಿನ್ನದೇ ಆದ ರೀತಿಯಲ್ಲಿ ಸಾಧಿಸುವೆ” ಎಂದರು. ಕೃಷ್ಣನು “ಅವಳು ನಿಮ್ಮಿಂದ ಆ ರೀತಿ ಆಶೀರ್ವಾದ ಪಡೆಯಲು ಸಾಧ್ಯವಾಗಿದ್ದು ಅವಳ ಪುಣ್ಯ. ಈಗ ಪಾಂಡವರು ದೀರ್ಘಕಾಲ ಬಾಳುವರು” ಎಂದನು.

Advertisement


ಭೀಷ್ಮರು “ಕೃಷ್ಣ! ಭಕ್ತರ ರಕ್ಷಣೆಯಲ್ಲಿ ನಿನಗಿರುವ ತವಕ ಇನ್ನಾರಿಗೂ ಇಲ್ಲ. ನೀನು ಭಕ್ತರ ಪಾದುಕೆಗಳನ್ನೂ ಹೊರುವೆ. ನಿನ್ನಲ್ಲಿ ಶರಣಾದವರೇ ಧನ್ಯರು.” ಎನ್ನುತ್ತಾ ದ್ರೌಪದಿಯ ಕಡೆಗೆ ತಿರುಗಿ “ಭಗವಂತನೇ ಸ್ವಯಂ ಪಾಂಡವರನ್ನು ರಕ್ಷಿಸುತ್ತಿರುವಾಗ ಈ ಬಡಪಾಯಿ ಭೀಷ್ಮ ಏನು ಮಾಡಿಯಾನು?” ಎಂದು ಅವಳನ್ನು ಆಶೀರ್ವದಿಸಿದರು. ಅವರ ಅನುಮತಿಯನ್ನು ಪಡೆದು ಕೃಷ್ಣ-ದ್ರೌಪದಿಯರು ಅಲ್ಲಿಂದ ಹೊರಟರು.
ಅವರು ಹೋಗುವುದನ್ನೇ ದಿಟ್ಟಿಸಿ ನೋಡುತ್ತಿದ್ದ ಭೀಷ್ಮರು “ಪರಂಧಾಮ! ಭಕ್ತವತ್ಸಲ! ದಯಾಸಮುದ್ರ! ಕೃಪಾಸಾಗರ! ನಿನ್ನ ಭಕ್ತರನ್ನು ಕಾಪಾಡಲು ನೀನು ಎಂತಹ ಕೀಳು ಕೆಲಸವನ್ನೂ ಮಾಡಲು ಹಿಂಜರಿಯೆ!” ಎಂದು ತಮಗೆ ತಾವೇ ಆಶ್ರುನಯನರಾಗಿ ಹೇಳಿಕೊಳ್ಳುತ್ತಾ ಗದ್ಗದಿತರಾದರು.

Advertisement

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ