Featured
ಎಸ್ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ: ಕುಣಿಗಲ್ ವಿದ್ಯಾರ್ಥಿ ಮಹೇಶ್ ರಾಜ್ಯಕ್ಕೆ ಎರಡನೇ ಸ್ಥಾನ
ರೈಸಿಂಗ್ ಕನ್ನಡ :
ತುಮಕೂರು :
ರಾಜ್ಯಾದ್ಯಂತ ಎಸ್ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿದ್ದು ಇಲ್ಲಿನ ಕುಣಿಗಲ್ ವಿದ್ಯಾರ್ಥಿ ಮಹೇಶ್ ಜಿ.ಎಮ್. ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ.
ಕುಣಿಗಲ್ ಪಟ್ಟಣದ ಜ್ಞಾನಭಾರತಿ ಆಂಗ್ಲ ಭಾಷಾ ಪ್ರೌಢಶಾಲೆಯ ವಿದ್ಯಾರ್ಥಿಯಾಗಿರುವ ಮಹೇಶ್ ಜಿ.ಎಮ್ 624 ಅಂಕಗಳನ್ನ ಪಡೆದಿದ್ದಾರೆ.
ಮಾಯಣ್ಣ ಮತ್ತು ಶಶಿಕಲಾ ದಂಪತಿಯ ಪುತ್ರರಾಗಿದ್ದಾರೆ. ರಾಜ್ಯಕ್ಕೆ ಎರಡನೇ ಱಂಕ್ ಬಂದಿರುವ ಕುರಿತು ಮಹೇಶ್, ರಾಜ್ಯಕ್ಕೆ ಸೆಕೆಂಡ್ ರ್ಯಾಂಕ್ ಬಂದಿರೋದುಕ್ಕೆ ಸಂತೋಷ ಆಗ್ತಿದೆ. ನಮ್ಮ ಶಾಲೆಯ ಎಲ್ಲಾ ಶಿಕ್ಷಕರು ನನಗೆ ಪ್ರೋತ್ಸಾಹ ನೀಡಿದ್ದಾರೆ.
ಇದೇ ಕಾಲೇಜಿನಲ್ಲಿ ಸೈನ್ಸ್ ತಗೊಬೇಕು ಎಂಬ ಆಸೆ ಇದೆ.ತಂದೆ ರೈತರು ರೇಷ್ಮೆ ಕೃಷಿ ಮಾಡಿ ನನ್ನನ್ನ ಓದಿಸಿದ್ರು ಎಂದು ನೆನೆದಿದ್ದಾರೆ.ನಂತರ ಶಾಲಾ ಆವರಣದಲ್ಲಿ ಸ್ವೀಟ್ ಹಂಚಿ ಸಂಭ್ರಮಿಸಿದರು.
ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಶೇ.71.80ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ. 6 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕಗಳಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?