Featured
ಊರಿನ ಜನರ ಭಯಕ್ಕೆ ಹೆದರಿ ಪ್ರೇಮಿಗಳ ಆತ್ಮಹತ್ಯೆ: ವಿಜಯಪುರದಲ್ಲಿ ಮನಕಲಕುವ ಘಟನೆ
![](https://risingkannada.com/wp-content/uploads/2020/08/vijapura-1.jpg)
ರೈಸಿಂಗ್ ಕನ್ನಡ :
ವಿಜಯಪುರ :
ಊರಿನ ಜನರ ಭಯಕ್ಕೆ ಹೆದರಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಮ್ಮಟನಗರಿ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ನಡೆದಿದೆ.
ಶಿವಕುಮಾರ ಚೌಧರಿ(19) ಹಾಗೂ ಶಬಾನಾ ಮುಜಾವರ (13) ಸಾವನಪ್ಪಿದ ಪ್ರೇಮಿಗಳು. ಕಳೆದ ಕೆಲ ದಿನಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದ ಶಿವಕುಮಾರ್ ಹಾಗೂ ಶಬಾನಾ, ಪ್ರತಿದಿನ ಗ್ರಾಮದ ಯಾವುದಾದರೂ ಒಂದು ಸ್ಥಳದಲ್ಲಿ ಭೇಟಿ ಮಾಡುತ್ತಿದ್ದರು. ಇಬ್ಬರು ಬೇರೆ ಬೇರೆ ಧರ್ಮಕ್ಕೆ ಸೇರಿದರಾಗಿದ್ದ ಕಾರಣ ಯಾರಿಗೂ ತಮ್ಮ ಪ್ರೀತಿಯ ವಿಷಯ ಹೇಳಿರಲಿಲ್ಲ.
ಮೂಲತಃ ಬನ್ನಿಹಟ್ಟಿ ಗ್ರಾಮದವನಾದ ಶಿವಕುಮಾರ್ ಕಲಬುರ್ಗಿಯಲ್ಲಿರುವ ಅಜ್ಜಿಯ ಮನೆಯಲ್ಲಿದ್ದಕೊಂಡು ವಿದ್ಯಾಬ್ಯಾಸ ಮಾಡುತ್ತಿದ್ದ. ಶಬಾನಾ ಕೂಡಾ ಸಿಂದಗಿಯ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಲಾಕ್ ಡೌನ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜಿಗೆ ರಜೆ ಇದ್ದ ಕಾರಣ, ಇಬ್ಬರೂ ಊರಿಗೆ ಬಂದಿದ್ದರು. ಇಲ್ಲೇ ಇಬ್ಬರಿಗೂ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿದೆ.
![](https://risingkannada.com/wp-content/uploads/2020/08/viajpura-3.jpg)
ನಿತ್ಯವೂ ಊರಲ್ಲಿ ಕದ್ದುಮುಚ್ಚಿ ಸುತ್ತಾಡುತ್ತಿದ್ದರು. ಶನಿವಾರ ಶಬಾನಾ ಅಜ್ಜನ ಕೈಗೆ ಸಿಕ್ಕಾಕೊಂಡ ಬಳಿಕ ರಾತೋರಾತ್ರಿ ಮನೆಯಿಂದ ಪರಾರಿಯಾಗಿ ಸಾವಿನ ದಾರಿ ಹಿಡಿದಿದ್ದರು. ಇತ್ತ ಇಬ್ಬರು ಮನೆಯಿಂದಾ ನಾಪತ್ತೆಯಾದ ಬಳಿಕವೇ ಊರಲ್ಲಿ ಎಲ್ಲರಿಗೂ ವಿಷಯ ಗೊತ್ತಾಗಿದೆ. ಇಡೀ ದಿನ ಊರು ತುಂಬಾ ಇಬ್ಬರನ್ನೂ ಹುಡುಕಾಡಿದ ಮನೆಯವರಿಗೆ ಇಬ್ಬರ ಬಗ್ಗೆಯೂ ಸುಳಿವೇ ಸಿಗದ ಕಾರಣ ಇಬ್ಬರು ಪರಾರಿಯಾಗಿರಬೇಕು ಎಂದು ಸುಮ್ಮನಾಗಿದ್ದರು.
ಮರು ದಿನ ಬೆಳಿಗ್ಗೆ ತೋಟದ ಮನೆಗೆ ಬಂದಿದ್ದ ಶಿವಕುಮಾರ್ ಅವರ ಸಹೋದರ ಬಾವಿಯ ಬಳಿ ಬಂದಾಗ ಶಬಾನಾ ಹಾಗೂ ಶಿವಕುಮಾರ್ ಚಪ್ಪಲಿ, ಮೊಬೈಲ್ ಹಾಗೂ ಬಟ್ಟೆ ಪತ್ತೆಯಾಗಿವೆ. ಕೂಡಲೇ ಕುಟುಂಬಸ್ಥರಿಗೆ ವಿಷಯ ತಿಳಿದು ಸ್ಥಳಕ್ಕಾಗಮಿಸಿ ಬಾವಿಯಲ್ಲಿ ಹುಡುಕಾದಾಗ ಮೊದಲು ಶಬಾನಾ ಶವ ಸಿಕ್ಕಿದೆ. ಬಳಿಕ ಶಿವಕುಮಾರ ಮೃತದೇಹ ಪತ್ತೆಯಾಗಿದ್ದು, ವಯಸ್ಸಲ್ಲದ ವಯಸಲ್ಲಿ ಪ್ರೀತಿ, ಪ್ರೇಮ ಅಂತೆಲ್ಲ ಆಸೆ ಹೊತ್ತು ಸಾವಿನ ಮನೆ ಸೇರಿದ್ದಾರೆ.
ಕುಟುಂಬಸ್ಥರು ಕಣ್ಣಿರಲ್ಲಿ ಕೈತೊಳೆಯುವಂತಾಗಿದೆ. ಸದ್ಯ ಈ ಕುರಿತು ದೇವರ ಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಳಿ ಬದುಕಬೇಕಾಗಿದ್ದ ಎರಡು ಜೀವಗಳು ಪ್ರೀತಿಯ ಹಿಂದೆ ಬಿದ್ದು ದಾರುಣ ಅಂತ್ಯ ಕಂಡಿರುವುದು ನಿಜಕ್ಕೂ ದುರಂತವೇ ಸರಿ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?