Featured
ಹಳೇ ಮೈಸೂರು ಭಾಗಕ್ಕೆ ಯಡಿಯೂರಪ್ಪ ಅನ್ಯಾಯ : ಸಾಮಾಜಿಕ ನ್ಯಾಯ ಎಲ್ಲಿ..?
ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ 18 ಮಂದಿ ಸದ್ಯ ರಾಜ್ಯ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಆದ್ರೆ, ಬಹುತೇಕರು ಯಡಿಯೂರಪ್ಪ ಆಪ್ತರು, ಲಿಂಗಾಯತರೇ ಆಗಿದ್ದಾರೆ. ಅದರಲ್ಲೂ ಹಳೇ ಮೈಸೂರು ಪ್ರಾಂತ್ಯಕ್ಕೆ ಪ್ರಾತಿನಿಧ್ಯವೇ ಸಿಕ್ಕಿಲ್ಲ. ಇದರಿಂದ ಸಾಮಾಜಿಕ ನ್ಯಾಯವೇ ಮರೀಚಿಕೆಯಾಗಿದೆ.
ಮೈಸೂರು ಜಿಲ್ಲೆಯಿಂದ ಯಾವುದೇ ಸಚಿವರಿಲ್ಲ. ರಾಮದಾಸ್ ಹೆಸರು ಕೊನೇ ಕ್ಷಣದಲ್ಲಿ ಮಿಸ್ ಆಗಿದೆ. ಇತ್ತ, ಕೊಡಗೂ ಜಿಲ್ಲೆಗೂ ಸಚಿವ ಸ್ಥಾನ ಸಿಕ್ಕಿಲ್ಲ.. ಚಾಮರಾಜನಗರ ಜಿಲ್ಲೆಯಲ್ಲೂ ಯಾರಿಗೂ ಮಿನಿಸ್ಟರ್ ಪಟ್ಟವಿಲ್ಲ. ಮಂಡ್ಯದಲ್ಲಿ ಶಾಸಕರಿಲ್ಲ.. ಇತ್ತ, ಯೋಗೇಶ್ವರ್ಗೆ ಸಿಕ್ಕೇ ಸಿಗುತ್ತೆ ಅನ್ನೊಂಡಿದ್ದವರಿಗೆ ನಿರಾಸೆ ತಪ್ಪಿಲ್ಲ.
ಮತ್ತೊಂದೆಡೆ ಬೆಂಗಳೂರು ಗ್ರಾಮಾಂತರದಲ್ಲಿ ಶಾಸಕರಿಲ್ಲ.. ಎಂಟಿಬಿ ನಾಗರಾಜ್, ಕಾಂಗ್ರೆಸ್ ಬಿಟ್ಟಿದ್ದು ಬಿಜೆಪಿಯಿಂದ ಸಚಿವರಾಗ್ತಾರೆ ಅನ್ನೋದು ಹುಸಿಯಾಗಿದೆ. ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ ಜಿಲ್ಲೆಗಳ ಯಾವೊಬ್ಬ ಮಂತ್ರಿಯೂ ಇಲ್ಲ.
ಕರಾವಳಿ ಭಾಗಕ್ಕೂ ಅನ್ಯಾಯದ ಕೂಗು..!
ಇತ್ತ, ಕರಾವಳಿ ಭಾಗದಲ್ಲೂ ಅನ್ಯಾಯವಾಗಿದೆ ಅನ್ನೋ ಆರೋಪ ಕೇಳಿ ಬರ್ತಿದೆ. ಅತೀ ಹೆಚ್ಚು ಬಿಜೆಪಿ ಶಾಸಕರು ಇರೋದು ಕರಾವಳಿ ಭಾಗದಲ್ಲಿ. 19 ಕ್ಷೇತ್ರಗಳ ಪೈಕಿ, 14 ಮಂದಿ ಬಿಜೆಪಿ ಶಾಸಕರೇ ಇದ್ದಾರೆ. ಆದ್ರೆ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಿಂದ ಶಾಸಕರಿಗೆ ಮಣೆಯಾಕದೆ, ಎಂಎಲ್ಸಿ ಕೋಟಾ ಶ್ರೀನಿವಾಸ ಪೂಜಾರಿಗೆ ಮಂತ್ರಿ ಸ್ಥಾನ ನೀಡಿದ್ದಾರೆ. ಇದರಿಂದ ಹಲವು ಶಾಸಕರು ಅಸಮಾಧಾನ ಹೊರಹಾಕಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?