Featured
2 ದಿನದಲ್ಲಿ ಕೊರೊನಾಕ್ಕೆ ಲಸಿಕೆ..?ರಷ್ಯಾದಿಂದ ಮಾರುಕಟ್ಟೆಗೆ ಬಿಡುಗಡೆ..?

ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಕೊರೊನಾ ಕಂಟ್ರೋಲ್ ಆಗುತ್ತಾ..? ಮಾರಕ ರೋಗಕ್ಕೆ ಲಸಿಕೆ ಸಿಕ್ಕೇಬಿಡ್ತಾ..? ಮನುಕುಲದ ಅತಿ ದೊಡ್ಡ ಪ್ರಶ್ನೆ ಇದು. ವಿಶ್ವದ ಎಲ್ಲಾ ರಾಷ್ಟ್ರಗಳು ಕೊರೊನಾಕ್ಕೆ ಮೆಡಿಸಿನ್ ಅಭಿವೃದ್ಧಿ ಪಡಿಸುವ ಯೋಜನೆಯಲ್ಲಿ ತೊಡಗಿವೆ. ಈ ಮಧ್ಯೆ ರಷ್ಯಾ ಕೊರೊನಾದಿಂದ ತತ್ತರಿಸಿರುವ ಜಗತ್ತಿಗೆ ಸಮಾಧಾನಕರ ಸುದ್ದಿ ನೀಡಿದೆ. ರಷ್ಯಾದ ಗಮಲಯ ಇನ್ಸ್ಟಿಟ್ಯೂಟ್ ಲಸಿಕೆಯ ಎಲ್ಲಾ ಪ್ರಾಯೋಗಿಕ ಹಂತವನ್ನು ಪೂರ್ಣಗೊಳ್ಳಿಸಿದೆ. ಈ ಲಸಿಕೆ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಈ ಲಸಿಕೆಯು ಆ.12ಕ್ಕೆ ಮಾರುಕಟ್ಟೆ ಬರಲಿದೆ ಎಂದು ರಷ್ಯಾದ ಪ್ರಧಾನ ಮಂತ್ರಿ ಮಿಖಾಯಿಲ್ ಮುರಾಶ್ಕೊ ಹೇಳಿದ್ದಾರೆ.

ಗಮಲಯ ಸಂಸ್ಥೆಯ ವಿಜ್ಞಾನಿಗಳು ಈ ಮುಂಚೆ ಆಗಸ್ಟ್ ನಲ್ಲಿ ಕೊರೋನಾ ವೈರಸ್ ನ ಮೊದಲ ಲಸಿಕೆಗೆ ಗ್ರೀನ್ ಸಿಗ್ನಲ್ ಸಿಗಬಹುದು ಎಂದು ತಿಳಿಸಿದ್ದ ರು. ರಷ್ಯಾದ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಸುದ್ದಿವಾಹಿಯೊಂದಕ್ಕೆ ನೀಡಿರುವ ಹೇಳಿಕೆ ಪ್ರಕಾರ ಆಗಸ್ಟ್ 10ರೊಳಗಾಗಿ ಲಸಿಕೆ ಮಾರುಕಟ್ಟೆಗೆ ಬರುವ ನಿರೀಕ್ಷೆಗಳಿವೆ ಎಂದಿದ್ದರು.ಈಗಾಗಲೇ ಇಡೀ ಪ್ರಪಂಚದಾದ್ಯಂತ ಲಸಿಕೆ ಕಂಡು ಹಿಡಿಯಲು ಎಲ್ಲಾ ದೇಶಗಳ ಕಂಪನಿಗಳು ಪ್ರಯೋಗ ನಡೆಸುತ್ತಿವೆ. ಹಲವು ದೇಶಗಳ ವಿಜ್ಞಾನಿಗಳು ಹಗಲಿರುಳು ಕೊರೊನಾ ವೈರಸ್ ಗೆ ಲಸಿಕೆ ಕಂಡು ಹಿಡಿಯಲು ಪ್ರಯತ್ನ ನಡೆಸುತ್ತಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?