Featured
RCB ಸ್ಟಾರ್‌ಗೆ ಹಸೆಮಣೆ ಸಂಭ್ರಮ – ಸ್ಟಾರ್ ಕೊರಿಯಾಗ್ರಾಫರ್ ಜೊತೆ ಯಜುವೇಂಧರ್ ನಿಶ್ಚಿತಾರ್ಥ..!

ರೈಸಿಂಗ್ ಕನ್ನಡ :
ಸ್ಪೋರ್ಟ್ಸ್ ಡೆಸ್ಕ್ :
ಟೀಮ್ ಇಂಡಿಯಾ ಆಟಗಾರ, ಎಲ್ಲಕ್ಕಿಂತ ಹೆಚ್ಚಾಗಿ ಆರ್‌ಸಿಬಿಯ ಸ್ಪಿನ್ ಸಾರಥಿ ಯಜುವೇಂದರ್ ಚಾಹಲ್ ಗೃಹಸ್ಥಾಶ್ರಮಕ್ಕೆ ಕಾಲಿಡೋಕೆ ಸಜ್ಜಾಗಿದ್ದಾರೆ. ತಮ್ಮ ಬಹುಕಾಲದ ಗೆಳತಿ ಹಾಗೆ ಡ್ಯಾನ್ಸರ್ ಕಮ್ ಕೊರಿಯಾಗ್ರಫರ್ ಧನುಶ್ರೀ ವರ್ಮಾ ಅವರ ಜೊತೆ ಚಾಹಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಕುಟುಂಬ ಸಮೇತರಾಗಿ ನಾವು ಮಹತ್ವದ ನಿರ್ಧಾರಕ್ಕೆ ಬಂದಿದ್ದೇವೆ ಅಂತ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಸದ್ಯ ಐಪಿಎಲ್‌ನಲ್ಲಿ ಬ್ಯುಸಿಯಾಗಲಿರೋ ಚಾಹಲ್, ಐಪಿಎಲ್ ಬಳಿಕ ಮದುವೆಯಾಗಲಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಚಾಹಲ್ ಬಗ್ಗೆ ಎಲ್ಲರಿಗೊ ಗೊತ್ತಿದೆ. ಆಧ್ರೆ, ದನುಶ್ರೀ ವರ್ಮಾ, ಖ್ಯಾತ ಯೂ ಟ್ಯೂಬರ್ ಆಗಿ ಸದ್ದು ಮಾಡಿದ್ದಾರೆ. ತಮ್ಮದೆ ಹೇಸರಿನಲ್ಲಿ ಯುಟ್ಯೂಬ್ ಡ್ಯಾನ್ಸ್ ಚಾನಲ್ ಹೊಂದಿರೋ ಇವರು 1 ಪಾಯಿಂಟ್ 5 ಮಿಲಿಯನ್ ಅಂದ್ರೆ, 15 ಲಕ್ಷಕ್ಕೂ ಅಧಿಕ ಫಾಲೋ ಅರ್ಸ್ ಅನ್ನ ಹೊಂದಿದ್ದಾರೆ. ಇನ್ನೂ ಈ ಜೋಡಿಗೆ ಕ್ರಿಕೆಟ್ ಲೋಕವೇ ಶುಭಾಶಯಗಳ ಮಹಾಪೂರವನ್ನ ಹರಿಸಿದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಶಿಖರ್ ಧವನ್, ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ ಕಂಗ್ರಾಟ್ಸ್ ಹೇಳಿದ್ದಾರೆ.

ಇನ್ನೂ ಯುವಿ ಜೊತೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕಾಲೆಳೆಯೋ ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ, ಕಂಗ್ರಾಟ್ಸ್ ಯೂಜಿ ಅಂತ ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಭಾರತೀಯ ಕ್ರಿಕೆಟ್ ಲೋಕದ ಮತ್ತೊಬ್ಬ ತಾರೆ, ಇದೀಗ ಗ್ರಹಸ್ಥಾಶ್ರಮಕ್ಕೆ ಕಾಲಿಡೋಕೆ ಸಜ್ಜಾಗಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?