Featured
ಸುಂದರ ಮುಖಕ್ಕೆ ಬೇಕು ಸೌಂದರ್ಯದ ಆಹಾರ : ಅದು ಹೇಗೆ ಗೊತ್ತಾ..?
![](https://risingkannada.com/wp-content/uploads/2019/08/beauty-tips.jpg)
Source : Lifestyle
ಬೆಂಗಳೂರು : ಪ್ರತಿಯೊಬ್ಬರಿಗೂ ತನ್ನ ಮುಖ ಚೆನ್ನಾಗಿ ಕಾಣಬೇಕು. ಸುಂದರವಾಗಿ ಇರಬೇಕು ಅನ್ನೋ ಆಸೆ ಇರುತ್ತೆ. ಆಸೆ ಇದ್ದರಷ್ಟೇ ಸಾಲದು. ಅದಕ್ಕೆ ತಕ್ಕದಾಗಿ ಹಲವು ರೀತಿಯ ಅಭ್ಯಾಸಗಳನ್ನ ರೂಢಿಸಿಕೊಳ್ಳಬೇಕು. ಇವತ್ತು ನಿಮಗೆ ರೈಸಿಂಗ್ ಕನ್ನಡ ಟೀಮ್, ಹೊಸ ವಿಧಾನವನ್ನ ಹೇಳಿ ಕೊಡುತ್ತೆ. ಸುಂದರ ಮುಖ ಬೇಕು ಅಂದ್ರೆ, ಏನೆಲ್ಲಾ ಮಾಡಬೇಕು..? ಹೇಗೆ.? ಅನ್ನೋದನ್ನ ನೋಡೋಣ.
ಉತ್ತಮ ಸೌಂದರ್ಯಕ್ಕಾಗಿ ಹೀಗೆ ಮಾಡಿ
ಬಾದಾಮಿಯನ್ನು ಚೆನ್ನಾಗಿ ನೆನೆಸಿ ಪೇಸ್ಟ್ ಮಾಡಿ. ಒಂದು ಟೀ ಸ್ಪೂನ್ ಬಾದಾಮಿ ಪೆಸ್ಟ್ನಲ್ಲಿ ಆರು ಹನಿ ನಿಂಬೆರಸ ಕಲೆಸಿ ಮುಖಕ್ಕೆ ಹಚ್ಚಿಕೊಳ್ಳಬೇಕು. 20-25 ನಿಮಿಷ ಬಿಟ್ಟು ತೊಳೆದುಕೊಳ್ಳಿ. ಪ್ರತಿ ಮೂರು ದಿನಗಳಿಗೊಮ್ಮೆ ಹೀಗೆ ಎರಡು-ಮೂರು ವಾರಗಳ ಕಾಲ ಮಾಡಿದರೆ ಚರ್ಮ ಮೃದುವೂ , ಕಾಂತಿಯುಕ್ತವೂ ಆಗುತ್ತದೆ.
ಬಾಳೆಹಣ್ಣಿನ ಪೇಸ್ಟ್ ಮಾಡಿ. ಸ್ವಲ್ಪ ನಿಂಬೆರಸ ಬೆರೆಸಿ ಮುಖಕ್ಕೆ ಪೇಸ್ಟ್ ಮಾಡಿ. ಇದರಿಂದ ಚರ್ಮ ಕಾಂತಿಯಿಂದ ಮಿರುಗುತ್ತದೆ.
ನಾಲ್ಕು ಸ್ಪೂನ್ ಕಾಫಿ (ಹಸಿ) ಬೀಜಗಳನ್ನು ಪುಡಿ ಮಾಡಿ, ಅದಕ್ಕೆ ಎಂಟು ಟೇಬಲ್ ಟೀ ಸ್ಪೂನ್ ಜೇನುತುಪ್ಪ ಕಲೆಸಿ ಮುಖಕ್ಕೆ ಹಚ್ಚಿಕೊಳ್ಳಬೇಕು. ಅದು ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಬೇಕು. ಚರ್ಮದಲ್ಲಿ ವಿಶೇಷ ಕಾಂತಿ ಹೊರಹೊಮ್ಮುತ್ತದೆ.
ಒಂದು ಲೋಟ ಬಾರ್ಲಿ ಅಕ್ಕಿ ಪುಡಿ ಮಾಡಿ ನೀರಿನಲ್ಲಿ ಕಲೆಸಿ ಬೇಯಿಸಿಕೊಳ್ಳಬೇಕು. ಆರಿದ ನಂತರ ಆ ಮಿಶ್ರಣಕ್ಕೆ ಅರ್ಧ ಟೀ ಸ್ಪೂನ್ ನಿಂಬೆರಸ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಬೇಕು. ಒಣಗಿದ ಮೇಲೆ ನೀರಿನಿಂದ ಶುಭ್ರಗೊಳಿಸಬೇಕು. ವಾರಕ್ಕೆ ಮೂರು ಬಾರಿ ಹೀಗೆ ಮಾಡಿದರೆ ,ಮುಖದ ಮೇಲಿನ ಮಚ್ಚೆಗಳು, ಕಲೆಗಳು ತೊಲಗಿಹೋಗುತ್ತವೆ. ಚರ್ಮ ನುಣಪಾಗುತ್ತದೆ.
ಚೆನ್ನಾಗಿ ಪಪ್ಪಾಯದ ತಿರುಳನ್ನು ಮುಖಕ್ಕೆ ಮೆತ್ತಿಕೊಂಡು ಅರ್ಧ ಗಂಟೆ ಬಿಟ್ಟು ತೊಳೆದುಕೊಳ್ಳಬೇಕು. ಇದು ಚರ್ಮದಲ್ಲಿನ ಮೃತ ಕಣಗಳು, ಮಲಿನ ಕಣಗಳು ಮುಂತಾದವನ್ನು ನಿವಾರಿಸುತ್ತದೆ.
ವಿಟಮಿನ್ ಸಿ ಕ್ಯಾಪ್ಸಲ್ ಅನ್ನು ಕಟ್ ಮಾಡಿ, ಅದಕ್ಕೆ ಅರ್ಧ ಟೀ ಸ್ಪೂನ್ ಗ್ಲಿಸರಿನ್ ಕಲೆಸಿ ಮುಖಕ್ಕೆ ಬಳಿದುಕೊಳ್ಳಬೇಕು. 20-30 ನಿಮಿಷಗಳ ನಂತರ ತೊಳೆದುಕೊಳ್ಳಬೇಕು. ಇದರಿಂದ ಮುಖದ ಚರ್ಮವು ಮೃದುವಾಗಿ ಆರೋಗ್ಯವಾಗಿ ಮಿರುಗುವಂತಾಗುತ್ತದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?