Featured
ಕಣ್ಮರೆಯಾಗಿದ್ದನ್ನ ಒಪ್ಪಿಕೊಂಡ ರಮ್ಯಾ – 2020 ಪೂರ್ತಿ ಹೀಗೆ ಅಂದ್ರು ಮೋಹಕ ತಾರೆ

ರೈಸಿಂಗ್ ಕನ್ನಡ :
ಸಿನಿಮಾ ಡೆಸ್ಕ್ :
ಮೋಹಕ ತಾರೆ ನಟಿ ರಮ್ಯಾ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಆ್ಯಕ್ಟಿವ್ ಆಗಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಫೋಟೋವೊಂದನ್ನ ಅಪ್ಲೋಡ್ ಮಾಡಿರುವ ಅವರು, ತಮ್ಮ ಬಗ್ಗೆ ತಾವೇ ಬರೆದುಕೊಂಡಿದ್ದಾರೆ. ಮಲಗಿದ ಸ್ಥಳದಲ್ಲೇ ಮುಖಕ್ಕೆ ಒಂದು ಕೈಯನ್ನ ಅಡ್ಡಲಾಗಿ ಹಿಡಿರುವ ರಮ್ಯಾ, 2020ರ ಆರಂಭದಿಂದ ಅಂತ್ಯದವರೆಗೂ ನನ್ನ ಪರಿಸ್ಥಿತಿ ಹೀಗೆ ಎಂದು ಬರೆದುಕೊಂಡಿದ್ದಾರೆ. ಒಂದು ಕಣ್ಣನ್ನ ಕೈಯಿಂದ ಮುಚ್ಚಿಕೊಂಡಿರುವ ರಮ್ಯಾ, ಈ ಮೆಸೆೇಜ್ ಮೂಲಕ, ತಾವು 2020ರಲ್ಲಿ ಯಾರಿಗೂ ಕಾಣಿಸಿಕೊಳ್ಳದೇ ಇದ್ದುದ್ದರ ಬಗ್ಗೆ ಬರೆದಿದ್ದಾರೆ ಅನ್ನಿಸದೇ ಇರೋದಿಲ್ಲ.
ರಮ್ಯಾರ ಈ ಫೋಟೋಗೆ ಅಭಿಮಾನಿಗಳು ಸಾಕಷ್ಟು ರಿಪ್ಲೇ ಮಾಡಿದ್ದಾರೆ. ನೀವು ಎವರ್ಗ್ರೀನ್ ನಟಿ, ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಿ ಎಂದಿದ್ದಾರೆ. ನೀವು ಏತಕ್ಕಾಗಿ ಕಣ್ಮರೆಯಾಗಿದ್ದೀರ ಅಂತ ಪ್ರಶ್ನೆ ಮಾಡಿದ್ದಾರೆ. ಅಭಿಮಾನಗಳು ರಮ್ಯಾರನ್ನ ನೋಡೋಕೆ ಎಷ್ಟು ಕಾತರರಾಗಿದ್ದಾರೆ ಅನ್ನೋದನ್ನ ಈ ಪ್ರತಿಕ್ರಿಯೆಗಳೇ ಸಾಕ್ಷಿಯಾಗಿವೆ. ಇನ್ನೂ ಖುಷಿ ವಿಚಾರ ಅಂದ್ರೆ, ಶೀಘ್ರದಲ್ಲೇ ತಾವು ಮತ್ತೆ ಜನರ ಮಧ್ಯೆ ಕಾಣಿಸಿಕೊಳ್ಳೋ ಸಂದೇಶವನ್ನ ಕೂಡ ರಮ್ಯಾ ಈ ಫೋಟೋ ಮೂಲಕ ಬಿಚ್ಚಿಟ್ಟಿದ್ದಾರೆ ಅನಿಸುತ್ತೆ.
ಕಳೆದ ಹಲವು ತಿಂಗಳುಗಳಿಂದ ನಾಪತ್ತೆಯಾಗಿದ್ದ ಮೋಹಕ ತಾರೆ ನಟಿ ರಮ್ಯಾ, ಈ ಹಿಂದೆಯೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ಆಗಾಗ ಏನಾದ್ರು ಪೋಸ್ಟ್ ಮಾಡುತ್ತಲೇ ಇದ್ರು. ಮೊನ್ನೆ ಮೊನ್ನೆಯಷ್ಟೆ ಅಯೋಧ್ಯೆ ರಾಮ ಮಂದಿರದ ಶಿಲಾನ್ಯಾಸದ ಕುರಿತು ರಮ್ಯಾ ಪೋಸ್ಟ್ ಮಾಡಿದ್ದರು. ನಾವು ಆನಂದವಾಗಿರಲು ಮತ್ತು ದೇವರನ್ನು ಕಾಮಲು ಮಂದಿರ ಅಥವಾ ಮಸೀದಿಯ ಅಗತ್ಯವಿಲ್ಲ ಎಂದು ಎಲ್ಲೂ ತಿಳಿದಾಗ ನಾನು ಹೆಚ್ಚು ಸಂತೋಷ ಪಡುತ್ತೇನೆ ಎಂದಿದ್ದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?