Featured
ಶ್ರೀಲಂಕಾದಲ್ಲಿ ರಾಜಪಕ್ಸೆ ರಾಜ್ಯಭಾರ ಫಿಕ್ಸ್- ಚುನಾವಣೆಯಲ್ಲಿ ವಿರೋಧಪಕ್ಷ ಧೂಳೀಪಟ

ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಭಾರೀ ಕುತೂಹಲ ಕೆರಳಿಸಿದ್ದ ಶ್ರಿಲಂಕಾ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. ದ್ವೀಪ ರಾಷ್ಟ್ರದಲ್ಲಿ ಹೊಸ ರಾಜಕೀಯ ದಾಖಲೆ ಬರೆಯಲ್ಪಟ್ಟಿದೆ. ಎದುರಾಳಿಗಳನ್ನು ಧೂಳಿಪಟಮಾಡಿರುವ SLPP ಪಕ್ಷದ ಮಹಿಂದಾ ರಾಜಪಕ್ಸೆ ಮತ್ತೆ ಶ್ರೀಲಂಕಾದ ಸಿಂಹಾಸನ ಏರಿದ್ದಾರೆ. ಈ ಮೂಲಕ ಏಷ್ಯಾದಲ್ಲಿ ದೀರ್ಘಾವಧಿಗೆ ಆಡಳಿತ ನಡೆಸಿದ ಖ್ಯಾತಿ ರಾಜಪಕ್ಸೆ ಪಾಲಾಗಲಿದೆ.
225 ಸದಸ್ಯ ಬಲದ ಶ್ರೀಲಂಕಾ ಸಂಸತ್ಗೆ ಆಗಸ್ಟ್ 5 ರಂದು ಚುನಾವಣೆ ನಡೆದಿತ್ತು ರಾಜಪಕ್ಸೆ ಪಕ್ಷ ಎಸ್ಎಲ್ಪಿಪಿ 146 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪ್ರಮುಖ ವಿರೋಧ ಪಕ್ಷವಾಗಿರುವ ಸಜಿತ್ ಪ್ರೇಮದಾಸರ ಯುನೈಟೆಡ್ ನ್ಯಾಷನಲ್ ಪಾರ್ಟಿ ಕೇವಲ 53 ಸ್ಥಾನ ಪಡೆದಿದೆ. ತಮಿಳು ಪಕ್ಷಗಳು 16 ಸ್ಥಾನ ಗೆದ್ದಿದ್ದರೆ, ಎಡಪಕ್ಷಗಳ ಮೈತ್ರಿಕೂಟ 10 ಸ್ಥಾನಗಳನ್ನು ಪಡೆದಿದೆ.
ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಒಟ್ಟು 1.5 ಕೋಟಿ ಮತದಾರರು ಇದ್ದಾರೆ. ಇವರಲ್ಲಿ ರಾಜಪಕ್ಸೆಗೆ 60.8 ಲಕ್ಷ ಜನರು ಮತ ನೀಡಿದ್ದಾರೆ. ಎಸ್ಎಲ್ಪಿಪಿ ಶೇಕಡ 60 ರಷ್ಟು ಮತ ಪಡೆದರೆ, ಯುಎನ್ಪಿ ಶೇಕಡ 20ರಷ್ಟು ವೋಟ್ ಪಡೆದಿದೆ. ಈ ಮೂಲಕ ಬೃಹತ್ ಅಂತರದಲ್ಲಿ ಮತ್ತೆ ಗೆಲುವು ಸಾಧಿಸಿರುವ ರಾಜಪಕ್ಸೆ, ಶ್ರೀಲಂಕಾ ರಾಜಕೀಯದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?