Featured
ಶ್ರೀರಾಮಚಂದ್ರನ ಜೀವನಾದರ್ಶ ಪಾಲಿಸುತ್ತಾ ಸ್ವಾವಲಂಬಿ ಭಾರತ ನಿರ್ಮಿಸೋಣ – ಪ್ರಧಾನಿ ಮೋದಿ
ರೈಸಿಂಗ್ ಕನ್ನಡ :
ಅಯೋಧ್ಯೆ, ಉತ್ತರ ಪ್ರದೇಶ :
ಆಯೋಧ್ಯೆಯಲ್ಲಿ ಶೀಘ್ರದಲ್ಲೆ ಭವ್ಯವಾದ ರಾಮಮಂದಿರ ನಿರ್ಮಾಣವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಆಯೋಧ್ಯೆಯಲ್ಲಿ ನಡೆದ ಐತಿಹಾಸಿಕ ರಾಮಮಂದಿರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಕೋಟಿ ಕೋಟಿ ರಾಮಭಕ್ತರಿಗೆ ಈ ಶುಭದಿನದ ಕೋಟಿ ಕೋಟಿ ಶುಭಾಶಯಗಳು ಎಂದರು.
ಜೈ ಶ್ರೀರಾಮ್ ಬರೀ ನಗರದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತದೆ. ಎಲ್ಲವೂ ರಾಮಮಯ ಇಡೀ ದೇಶ ರೋಮಾಂಚನವಾಗಿದೆ. ಎಲ್ಲರಿಗೂ ಅಭಿನಂದನೆಗಳು ಎಂದು ಧನ್ಯವಾದ ಅರ್ಪಿಸಿದ್ರು. ಎಲ್ಲರ ಮನಸ್ಸೂ ಬೆಳಗುತ್ತಿದೆ. ಇಡೀ ಭಾರತ ಭಾವುಕವಾಗಿದೆ. ಬಹುಕಾಲದ ನಿರೀಕ್ಷೆ ಕೊನೆಯಾಗಿದೆ ಎಂದು ತೃಪ್ತಿವ್ಯಕ್ತಪಡಿಸಿದ್ರು.
ಈ ಸಮಾರಂಭಕ್ಕೆ ನನ್ನನ್ನು ಆಹ್ವಾನಿಸಿದಕ್ಕೆ ರಾಮಜನ್ಮ ಭೂಮಿ ಟ್ರಸ್ಟ್ಗೆ ನಾನು ಹೃದಯಪೂರ್ವಕ ಆಬಾರಿಯಾಗಿದ್ದೇನೆ. ಬುಧವಾರ ಭಾರತ ಸೂರ್ಯನ ಸನ್ನಿಧಿಯಲ್ಲಿ ಸರಯೂ ನದಿಯ ತೀರದಲ್ಲಿ ಹೊಸ ಅಧ್ಯಾಯ ಬರೆಯುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ರು.
ಆಗಸ್ಟ್ 15 ಲಕ್ಷಾಂತರ ಬಲಿದಾನಗಳ ಪ್ರತೀಕ. ರಾಮಮಂದಿರ ಕೂಡ ತ್ಯಾಗ ಮತ್ತು ಸಂಕಲ್ಪದ ಪ್ರತೀಕ. ಸಂಘರ್ಷದಿಂದ ಕೂಡಿದ್ದ ಕನಸು ನನಸಾಗುತ್ತಿದೆ. 130 ಕೋಟಿ ಜನರ ಪರವಾಗಿ ಕೈಮುಗಿದು ನಮಸ್ಕರಿಸಿದರು.
ಶ್ರೀರಾಮ ಮರ್ಯಾದಾ ಪುರುಷತ್ತೋಮ. ಶ್ರೀರಾಮ ಭಾರತದ ಗೌರವರಾಮ ಎಲ್ಲರ ಮನದಲ್ಲಿದ್ದಾನೆ. ರಾಮನ ಅಸ್ತಿತ್ವಕ್ಕೆ ಧಕ್ಕೆ ಉಂಟು ಮಾಡುವ ಕೆಲಸ ನಡೆಯಿತು. ಆದರೆ, ಶ್ರೀರಾಮಚಂದ್ರ ಪರಿವರ್ತನೆಯ ಪ್ರತಿಪಾದಕ. ಶ್ರೀರಾಮನು ವಿರೋಧದ ಬದಲಾಗಿ ನಮಗೆ ಭೋಧ, ಶೋಧನೆಗಳ ಮಾಡುವ ದಾರಿ ತೋರಿದ. ಜೀವನಾದರ್ಶಗಳನ್ನ ಪಾಲಿಸುತ್ತಾ ಸ್ವಾಲಂಬಿ ಭಾರತವನ್ನ ನಿರ್ಮಿಸೋಣ ಎಂದು ಕರೆ ನೀಡಿದ್ರು.
ಮುಂದೆ ಈ ರಾಮಮಂದಿರ ಜಗತ್ತಿಗೆ ಮಾನವೀಯತೆ ಪಾಠ ಮಾಡಲಿದೆ. ಸದ್ಯ ನಾವೆಲ್ಲರೂ ಮುನ್ನಡೆಯಬೇಕು ಎಂದರು. ಕೊರೊನಾ ಬಗ್ಗೆ ಮಾತನಾಡಿದ ಪ್ರಧಾನಿ, ಸಾಮಾಜಿಕ ಅಂತರ, ಮಾಸ್ಕ್ ಧರಿಸಬೇಕು. ಆರೋಗ್ಯ ನೀಡುವಂತೆ ಶ್ರೀರಾಮ ಮತ್ತು ಸೀತಾದೇವಿಯಲ್ಲಿ ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?