Featured
ಯಾರಿಗೆಲ್ಲಾ ಮಿನಿಸ್ಟರ್ ಪಟ್ಟ..? ಯಾರಿಗೆ ಸಿಹಿ.. ಯಾರಿಗೆ ಕಹಿ..? ಇಲ್ಲಿದೆ ಫುಲ್ ಲಿಸ್ಟ್..!
ಬೆಂಗಳೂರು : ಈಗಾಗಲೇ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಅಮಿತ್ ಶಾ, ಗ್ರೀನ್ಸಿಗ್ನಲ್ ಕೊಟ್ಟಿದ್ದಾರೆ. ಜೊತೆಗೆ ಇದೇ ಮಂಗಳವಾರ ಬೆಳಗ್ಗೆ 10 ಗಂಟೆ ಬಳಿಕ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಹೇಳಿದೆ. ಮಂಗಳವಾರ ಬೆಳಗ್ಗೆ 10 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದ್ದು, ಬಳಿಕ ಮಧ್ಯಾಹ್ನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಚಿವಾಲಯ ಸ್ಪಷ್ಟನೆ ನೀಡಿದೆ. ಆದ್ರೆ, ಯಾರೆಲ್ಲಾ ಸಚಿವರು ಆಗ್ತಾರೆ..? ಎಷ್ಟು ಮಂದಿ ಸಚಿವರು ಆಗ್ತಾರೆ ಅನ್ನೋದರ ಬಗ್ಗೆ ಈವರೆಗೆ ಸ್ಪಷ್ಟನೆ ನೀಡಿಲ್ಲ.
ಯಾರಿಗೆ ಮಿನಿಸ್ಟರ್ ಪಟ್ಟ..? ಯಾರಿಗೆ ಸಿಹಿ..? ಯಾರಿಗೆ ಕಹಿ..?
ರೈಸಿಂಗ್ ಕನ್ನಡ.ಕಾಮ್ ಗೆ ಸಿಕ್ಕ ಮಾಹಿತಿ ಪ್ರಕಾರ, ಜಗದೀಶ್ ಶೆಟ್ಟರ್, ಉಮೇಶ್ ಕತ್ತಿ, ಮಾಧುಸ್ವಾಮಿ, ಬಸವರಾಜ್ ಬೊಮ್ಮಾಯಿ, ವಿ.ಸೋಮಣ್ಣ, ಶಶಿಕಲಾ ಜೊಲ್ಲೆ, ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಶಿವನಗೌಡ ನಾಯಕ್, ಬಾಲಚಂದ್ರ ಜಾರಕಿಹೊಳಿ, ಕೋಟಾ ಶ್ರೀನಿವಾಸ ಪೂಜಾರಿ, ಆರ್. ಅಶೋಕ್, ಸುರೇಶ್ ಕುಮಾರ್ ಹೆಸರು ಫೈನಲ್ ಆಗಿದೆ ಎನ್ನಲಾಗಿದೆ. ಈ 13 ಮಂದಿ ಸಂಪುಟ ಸೇರೋದು ಪಕ್ಕಾ ಆಗಿದೆ.
ಅನರ್ಹರ ಸ್ಥಿತಿ ಅಯೋಮಯ..!
ಈ ನಡುವೆ ಅನರ್ಹ ಶಾಸಕರ ಸ್ಥಿತಿ ನಿಜಕ್ಕೂ ಶೋಚನೀಯವಾಗಿದ್ದು, ಅಯೋಮಯವಾಗಿದೆ. ಮುಂದೇನು ಅನ್ನೋದು ಗೊತ್ತಿಲ್ಲದೆ ಚಡಪಡಿಸ್ತಿದ್ದಾರೆ. ಮಂಗಳವಾರ ಸಂಪುಟ ವಿಸ್ತರಣೆ ಆಗ್ತಿದ್ದು, ಇದರಲ್ಲಿ ಅನರ್ಹ ಶಾಸಕರ ಹೆಸರೇ ಇಲ್ಲ. ಸುಪ್ರೀಂಕೋರ್ಟ್ನಲ್ಲಿ ಇನ್ನೂ ಕೇಸ್ ಇರೋದ್ರಿಂದ, ಸದ್ಯ ಅವರನ್ನ ಮಿನಿಸ್ಟರ್ ಮಾಡೋಕೆ ಆಗಲ್ಲ. ಹೀಗಾಗಿ, ಏನೋ ಮಾಡಲು ಹೋಗಿ, ಇನ್ನೇನೋ ಆಯ್ತು ಅನ್ನೋ ರೀತಿ 16 ಅನರ್ಹ ಶಾಸಕರು ಗೊಂದಲದಲ್ಲೇ ಕಾಲ ಕಳೆಯುತ್ತಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?