Featured
ಟೆಸ್ಟ್ನಲ್ಲಿ 600 ವಿಕೆಟ್ ಪಡೆದ ಮೊದಲ ವೇಗಿ ಆ್ಯಂಡರ್ಸನ್: ಹೊಸ ಇತಿಹಾಸ ನಿರ್ಮಿಸಿದ ಜಿಮ್ಮಿ

ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ಇಂಗ್ಲೆಂಡ್ ತಂಡದ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ಟೆಸ್ಟ್ ಕ್ರಿಕೆಟ್ನಲ್ಲಿ 600 ವಿಕೆಟ್ ಪಡೆದು ವಿಶ್ವ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಇದರೊಂದಿಗೆ ಟೆಸ್ಟ್ನಲ್ಲಿ 600 ವಿಕೆಟ್ ಮೊದಲ ವೇಗಿ ಎಂಬ ಹಿರಿಮೆಗೆ ಜೇಮ್ಸ್ ಆ್ಯಂಡರ್ಸನ್ ಪಾತ್ರರಾಗಿದ್ದಾರೆ.
ಮೂರನೇ ಟೆಸ್ಟ್ ಪಂದ್ಯದಲ್ಲಿ ಮಳೆಯ ಕಾಟ ಇದ್ದ ಕಾರಣ ಆ್ಯಂಡರ್ಸನ್ ಈ ಪಂದ್ಯದಲ್ಲಿ ವಿಶ್ವ ದಾಖಲೆಯ ವಿಕೆಟ್ ಪಡೆಯೋದು ಅನುಮಾನ ಎಂಬಂತಾಗಿತ್ತು.ಆದರೆ ಕೊನೆಯ ದಿನದಾಟದಲ್ಲಿ ಆಟಕ್ಕೆ ಪೂರಕ ವಾತಾವರಣ ಇದ್ದಿದ್ದರಿಂದ ಆ್ಯಂಡರ್ಸನ್ ಪಾಕ್ ನಾಯಕ ಅಜರ್ ಅಲಿ ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದರು. ಆ್ಯಂಡರ್ಸನ್ ಎಸೆದ ಬೌನರ್ಸ್ ಎಸೆತವನ್ನ ಅಜರ್ ಅಲಿ ನಾಯಕ ಜೋ ರೂಟ್ಗೆ ಕ್ಯಾಚ್ ಕೊಟ್ಟರು.
ಇದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ನಾಲ್ಕನೆ ಬೌಲರ್ ಎನಿಸಿದ್ದಾರೆ. ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್ಸ್ಗಳಾದ ಮುತ್ತಯ್ಯ ಮುರಳಿಧರನ್ (800 ವಿಕೆಟ್), ಆಸ್ಟ್ರೇಲಯಾದ ಲೆಗ್ ಸ್ಪಿನ್ನರ್ ಶೇನ್ ವಾರ್ನ್ (708),ಟೀಮ್ ಇಂಡಿಯಾದ ಮಾಜಿ ನಾಯಕ ಅನಿಲ್ ಕುಂಬ್ಳೆ ಟೆಸ್ಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೊದಲ ಮೂವರು ಬೌಲರ್ಸ್ಗಳಾಗಿದ್ದಾರೆ.
ಇನ್ನು ವೇಗಿಗಳ ವಿಭಾಗದಲ್ಲಿ ಜೇಮ್ಸ್ ಆ್ಯಂಡರ್ಸ್ (600), ಆಸ್ಟ್ರೇಲಿಯಾ ದಿಗ್ಗಜ ಗ್ಲೆನ್ ಮೆಗ್ರಾತ್, (563 ವಿಕೆಟ್), ಕರ್ಟ್ನಿ ವಾಲ್ಶ್ (519) ಮತ್ತು ಸ್ಟುವರ್ಟ್ ಬ್ರಾಡ್ (514) ವಿಕೆಟ್ ಪಡೆದಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?