Featured
ಚಳಿಗಾಲದಲ್ಲಿ ಶುಂಠಿಯ 6 ಪ್ರಯೋಜನಗಳನ್ನು ತಿಳಿಯೋಣ.. !
ರೈಸಿಂಗ್ ಕನ್ನಡ :- ಶುಂಠಿಯನ್ನು ಯಾವಾಗಲೂ ಕೆಮ್ಮಿಗೆ ಅತ್ಯುತ್ತಮ ಔಷಧಿ ಎಂದು ಪರಿಗಣಿಸಲಾಗುತ್ತದೆ. ಕೆಮ್ಮು ಕಾಣಿಸಿಕೊಂಡರೆ ತುಂಡು ಶುಂಠಿಯನ್ನು ಮತ್ತು ಸಮಾನ ಪ್ರಮಾಣದ ಜೇನುತುಪ್ಪದೊಂದಿಗೆ ಬಿಸಿ ಮಾಡಿ ದಿನಕ್ಕೆ ಎರಡು ಬಾರಿ ಸೇವಸಿವುದರಿಂದ ಕೆಮ್ಮು ಪರಿಹಾರವಾಗುತ್ತದೆ.
ಚಳಿಗಾಲದಲ್ಲಿ ಸಾಮನ್ಯವಾಗಿ ಗಂಟಲು ನೋವು, ಕೆಮ್ಮು ಕಾಣಿಸಿಕೊಳ್ಳುತ್ತದೆ. ಇಂತಹ ವೇಳೆ ನೀವು ಶುಂಠಿ ಚಹಾ ಅಥವಾ ಶುಂಠಿ ಕಷಾಯ ಸೇವಿಸುವುದರಿಂದ ಪರಿಹಾರ ಕಾಣಬಹುದು.
ಶುಂಠಿ ನೀರು ಕುಡಿವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರೊಂದಿಗ, ಶೀತ, ಕೆಮ್ಮು ಮತ್ತು ವೈರಲ್ ಸೋಂಕಿನ ಅಪಾಯವೂ ದೂರವಾಗುತ್ತದೆ.
ನಿಯಮಿತವಾಗಿ ಶುಂಠೀಯನ್ನು ಸೇವಿಸಿವುದರಿಂದ ಹಸಿವಿನ ಕೊರತೆಯ ಸಮಸ್ಯೆಯನ್ನು ತಡೆಯಬಹುದು. ನಿಮಗೆ ಹಸಿವಾಗದಿದ್ದರೆ ಶುಂಠಿಯನ್ನು ಅರೆದು ಸ್ವಲ್ಪ ಉಪ್ಪು ಸೇರಿಸಿ ನುಣ್ಣಗೆ ಮಾಡಿ ನುಂಗಿರಿ. ದಿನಕ್ಕೆ ಒಮ್ಮೆಯಂತೆ ಸತತ ಎಂಟು ದಿನಗಳವರೆಗೆ ಸೇವಿಸಿದರೆ ಹಸಿವಿನ ಸಮಸ್ಯೆ ದೂರ ಮಾಡಬಹುದು.
ಶುಂಠಿ, ಸೆಲರಿ,ಕಲ್ಲು ಉಪ್ಪು ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ ಸೇವಿಸುವುದರಿಂದ ಜೀರ್ಣಕ್ರಿಯೆಯ ಪ್ರಕ್ರಿಯೆಯು ಉತ್ತಮವಾಗಿರುತ್ತದೆ. ಈ ಕಾರಣದಿಂದಾಗಿ, ಹೊಟ್ಟೆಯ ಗ್ಯಾಸ್, ಹುಳಿ ಮತ್ತು ಉರಿ ಸಮಸ್ಯೆ ಕಡಿಮೆಯಾಗುತ್ತದೆ.
ಶುಂಠಿಯಲ್ಲಿ ಅನೇಕ ರೀತಿಯ ಪೋಷಕಾಂಶಗಳಿವೆ. ಇದು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಇದುರ ಜೊತೆಗೆ ಹೊಟ್ಟೆ ನೋವು ಹಾಗೂ ಮೊಣಕಾಲು ನೋವಿಗೂ ಪರಿಹಾರ ನೀಡುತ್ತದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?