Featured
45 ವರ್ಷವಾದರೂ ಐಶ್ವರ್ಯ ರೈ ಯಾಕೆ ಹಾಟ್ ಫೇವರಿಟ್ ಅಂದ್ರೆ.. ಈ ಸ್ಟೋರಿ ನೋಡಿ..!
ನ್ಯೂ ಯಾರ್ಕ್ : ಸಿನಿಮಾ ಇಂಡಸ್ಟ್ರಿಯಲ್ಲಿ ಎಷ್ಟೋ ಮಂದಿ ಬರ್ತಾರೆ, ಹೋಗ್ತಾರೆ. ಆದ್ರೆ, ಯಾವತ್ತಿಗೂ ಮನಸ್ಸಿನಲ್ಲಿ, ಸಿನಿಮಾ ರಂಗದಲ್ಲಿ ತನ್ನ ಛಾಪು ಮೂಡಿಸೋವ್ರು ಮಾತ್ರ ಕೆಲವೇ ಕೆಲವು ಮಂದಿ. ಆ ಸಾಲಿಗೆ ಐಶ್ವರ್ಯ ರೈ ಸೇರ್ತಾರೆ ಅನ್ನೋದನ್ನ ಅವರು ಮತ್ತೆ ಮತ್ತೆ ಸಾಬೀತು ಮಾಡ್ತಿದ್ದಾರೆ. ಅದಕ್ಕೆ ಸಾಕ್ಷಿ ಈ ಫೋಟೋ..
ಯೆಸ್, ಹೀಗೆ ರೆಡ್ ಹಾಟ್ ಆಗಿ ಕಾಣಿಸಿಕೊಂಡಿರೋ ಐಶ್ವರ್ಯ ರೈಗೆ ಈಗ 45 ವರ್ಷ. ಪಿಕಾಕ್ ಮ್ಯಾಗಝಿನ್ಗೆ ಐಶ್ವರ್ಯ ಕೊಟ್ಟಿರೋ ಫೋಟೋ ಪೋಸು ಸದ್ಯ ಬಾಲಿವುಡ್ನಲ್ಲಿ ಚರ್ಚೆ ಆಗ್ತಿದೆ. 90ರ ದಶಕದಲ್ಲಿ ಬಂದ ಹಲವು ಹೀರೋಗಳೇ ಈಗ ಪತ್ತೆಯಿಲ್ಲ. ಹೀರೋಯಿನ್ಗಳಂತೂ ಯಾರೂ ಕೂಡ ಇಂಡಸ್ಟ್ರಿಯಲ್ಲಿ ಉಳಿದಿಲ್ಲ. ಹಲವು ಸ್ಟಾರ್ ಹೀರೋ, ಹೀರೋಯಿನ್ಗಳು ಕಳೆದು ಹೋದ್ರು. ಆದ್ರೆ, ಐಶ್ವರ್ಯ ರೈ ಮಾತ್ರ, ಈಗಲೂ 18 ಯುವತಿಯರನ್ನ ನಾಚಿಸುವಂತೆ ಇದ್ದಾರೆ ಅಂತ ಬಾಲಿವುಡ್ ಮಂದಿ ಮಾತಾಡಿಕೊಳ್ತಿದ್ದಾರೆ.
ಅಂದಹಾಗೆ, ಖ್ಯಾತ ಡಿಸೈನರ್ಗಳಾದ ಫಾಲ್ಗುಣಿ ಮತ್ತು ಶೇನ್ ಪಿಕಾಕ್ ಈ ಡಿಸೈನ್ ಮಾಡಿದ್ದಾರೆ. ಪಿಕಾಕ್ ಮ್ಯಾಗಝಿನ್ ಇದೇ ಸೆಪ್ಟೆಂಬರ್ ಬಿಡುಗಡೆ ಆಗ್ತಿದೆ. ಈ ಮ್ಯಾಗಜಿನ್ಗಾಗಿ ನ್ಯೂಯಾರ್ಕ್ನಲ್ಲಿ ಐಶ್ವರ್ಯ ಫೋಟೋ ತೆಗೆಯಲಾಗಿದೆ. ನವಿಲನ್ನು ಹೋಲುವಂತೆ ಐಶ್ವರ್ಯ ಫೋಟೋ ತೆಗೆದಿರೋದು ಇದರ ವಿಶೇಷ.
ಈ ಫೋಟೋಗೆ ಅದ್ಭುತವಾದ ಕ್ಯಾಪ್ಶನ್ ನೀಡಲಾಗಿದೆ. Aishwarya Rai Bachchan : A Timeless Star. ಎಂಬುದು ಈ ಫೋಟೋಗೆ ನೀಡಲಾದ ಕ್ಯಾಪ್ಷನ್. ಈ ಫೋಟೋ ಹಾಗೂ ಐಶ್ವರ್ಯ ರೈ ನೋಡಿದ ಮೇಲೆ ಈ ಕ್ಯಾಪ್ಶನ್ ನಿಜ ಅಂತಿದ್ದಾರೆ ಬಾಲಿವುಡ್ ಮಂದಿ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?