Featured
3 ಸಾವಿರ ಸ್ಕ್ರೀನ್ಗಳಲ್ಲಿ ಪೈಲ್ವಾನ್ ಬಿಡುಗಡೆ : ಇದು ರಿಯಲ್ ಕಿಚ್ಚೋತ್ಸವ
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಪೈಲ್ವಾನ್ ಇದೇ ಗುರುವಾರ ವಿಶ್ವಾದ್ಯಂತ ರಿಲೀಸ್ ಆಗ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನ, ಇವತ್ತು ಸಂಜೆ ಸುದ್ದಿಗೋಷ್ಠಿ ನಡೆಸಿ, ಬಿಡುಗಡೆ ವಿವರವನ್ನ ನೀಡಲಾಯ್ತು. ಗುರುವಾರ ಸಿನಿಮಾ ತೆರೆ ಕಾಣ್ತಿದ್ದು, ಬರೋಬ್ಬರಿ 3000 ಸ್ಕ್ರೀನ್ಗಳಿಗಿಂತಲೂ ಹೆಚ್ಚು ಕಡೆ ಪ್ರದರ್ಶನಕ್ಕೆ ತಯಾರಿ ಮಾಡಲಾಗಿದೆ ಎಂದು ಸಿನಿಮಾ ತಂಡ ಮಾಹಿತಿ ನೀಡ್ತು.
ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಪೈಲ್ವಾನ್ ರಿಲೀಸ್ ಆಗ್ತಿದೆ. ಹಿಂದು ವರ್ಷನ್ ಮಾತ್ರ ಒಂದು ದಿನ ತಡವಾಗಿ ಅಂದ್ರೆ ಶುಕ್ರವಾರ ಬಿಡುಗಡೆ ಆಗ್ತಿದೆ ಎಂದರು. ಕೆಜಿಎಫ್ ಸಿನಿಮಾ ವಿತರಕರಾಗಿದ್ದ ಕಾರ್ತಿಕ್ ಗೌಡ, ಪೈಲ್ವಾನ್ ಸಿನಿಮಾವನ್ನೂ ವಿತರಣೆ ಮಾಡ್ತಿದ್ದಾರೆ. ಕೆಜಿಎಫ್ ಸಿನಿಮಾ ಬಳಿಕ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗ್ತಿರೋ ಸಿನಿಮಾ ಪೈಲ್ವಾನ್.
ಎಸ್.ಕೃಷ್ಣ ನಿರ್ದೇಶನ ಮಾಡಿ, ನಿರ್ಮಿಸಿರೋ ಸಿನಿಮಾ ಪೈಲ್ವಾನ್. ಬಿಡುಗಡೆ ಆಗ್ತಿರೋ ಖುಷಿಗೆ ಇಡೀ ಚಿತ್ರತಂಡ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ರು. ಕರ್ನಾಟಕದಲ್ಲೇ 400 ಥಿಯೇಟರ್ಗಳಲ್ಲಿ ಪೈಲ್ವಾನ್ ಸಿನಿಮಾ ರಿಲೀಸ್ ಆಗ್ತಿರೋದು ವಿಶೇಷ. ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಕೃಷ್ಣ, ಕಿಚ್ಚ ಸುದೀಪ್, ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಹಲವು ತಾರೆಯರು ಉಪಸ್ಥಿತರಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?