Featured
3 ಗಂಟೆ ಸಿನಿಮಾ ಸಾಹೋ ಬಗ್ಗೆ ಸೆನ್ಸಾರ್ ಮಂಡಳಿ ಹೇಳಿದ್ದೇನು.? ಹೇಗಿದೆ ಪ್ರಭಾಸ್ ಸಾಹೋ ಸಿನಿಮಾ.?
ಹೈದ್ರಾಬಾದ್ : ಬಹು ನಿರೀಕ್ಷಿತ ಸಾಹೋ ಸಿನಿಮಾ ಇನ್ನೇನು ರಿಲೀಸ್ ಗೆ ರೆಡಿಯಾಗಿದೆ. ಇದೇ ತಿಂಗಳ 30ರಂದು ತೆಲುಗು, ತಮಿಳು, ಮಲಯಾಳಂ ಸೇರಿ ಹಿಂದಿಯಲ್ಲೂ ಪ್ರಭಾಸ್ ಹಾಗೂ ಶ್ರದ್ಧಾ ಕಪೂರ್ ಅಭಿನಯದ ಸಾಹೋ ರಿಲೀಸ್ ಆಗ್ತಿದೆ. ಬರೋಬ್ಬರಿ 300 ಕೋಟೆ ಬಜೆಟ್ನ ಸಿನಿಮಾ ಇದಾಗಿದ್ದು, ಸಾಕಷ್ಟು ನಿರೀಕ್ಷೆಗಳನ್ನ ಹುಟ್ಟಿಹಾಕಿದೆ. ಶನಿವಾರ ಸಾಹೋ ಸಿನಿಮಾದ ಸೆನ್ಸಾರ್ ಪ್ರಕ್ರಿಯೆ ಮುಗಿದಿದೆ.
ಸಾಹೋ ಸಿನಿಮಾ ರನ್ ಟೈಮ್ ಬರೋಬ್ಬರಿ 2 ಗಂಟೆ 52 ನಿಮಿಷ ಇದೆ. ಅಂದ್ರೆ, ಸರಿ ಸುಮಾರು 3 ಗಂಟೆಯ ದೊಡ್ಡ ಸಿನಿಮಾ ಸಾಹೋ. ಆದ್ರೆ, ಸಿನಿಮಾ 3 ಗಂಟೆ ಇದ್ದರೂ ಎಲ್ಲೂ ಬೋರ್ ಆಗಲ್ಲ. ಅಥವಾ ಸಿನಿಮಾ ಲೆಂಥಿ ಇದೆ ಎಂದು ಅನ್ನಿಸೋದಿಲ್ಲ ಎಂದು ಸೆನ್ಸಾರ್ ಮಂಡಳಿ ಸದಸ್ಯರು ಹೇಳಿದ್ದಾರೆ.
ಹೈದರಾಬಾದ್ನಲ್ಲಿ ಸಿನಿಮಾ ವೀಕ್ಷಿಸಿದ ಸೆನ್ಸಾರ್ ಮಂಡಳಿ ಸದಸ್ಯರು, ಸಾಹೋ ಸಿನಿಮಾದ ಆಕ್ಷನ್ ಸೀನ್ಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ತುಂಬಾ ಚೆನ್ನಾಗಿದೆ, ಆಕ್ಷನ್ ಸೀಕ್ವೆನ್ಸ್ಗಳು ಅದ್ಭುತವಾಗಿ ಬಂದಿವೆ. ಸಿನಿಮಾದಲ್ಲಿ ಹಲವು ಟ್ವಿಸ್ಟ್ಗಳಿದ್ದು, ಪ್ರೇಕ್ಷಕರಿಗೆ ಇಷ್ಟವಾಗುತ್ತೆ ಎಂದು ಪಾಸಿಟಿವ್ ರಿಯಾಕ್ಷನ್ ಕೊಟ್ಟಿದ್ದಾರೆ.
ಸೆನ್ಸಾರ್ ಮಂಡಳಿ ಸದಸ್ಯರ ಪಾಸಿಟಿವ್ ರಿಯಾಕ್ಷನ್ನಿಂದಾಗಿ ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಇಡೀ ಸಾಹೋ ಸಿನಿಮಾ ತಂಡ ಕೊಂಚ ನಿಟ್ಟುಸಿರು ಬಿಟ್ಟಿದೆ. ಆದರೂ 3 ಗಂಟೆ ಸಿನಿಮಾವನ್ನ ಪ್ರೇಕ್ಷಕರು ಹೇಗೆ ಸ್ವೀಕರಿಸ್ತಾರೆ ಅನ್ನೋದು ಇನ್ನೈದು ದಿನಗಳಲ್ಲಿ ಗೊತ್ತಾಗಲಿದೆ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?