Featured
2028ರ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಇರುತ್ತಾ..? : ಕ್ರೀಡಾ ಅಭಿಮಾನಿಗಳಿಗೆ ಗುಡ್ ನ್ಯೂಸ್.!
ದುಬೈ : ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅನ್ನು ಸೇರಿಸುವ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾದಂತ ಕಾಣ್ತಿದೆ. ಯಾಕಂದ್ರೆ, ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಈಗಾಗ್ಲೇ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಆರಂಭಿಸೋ ಕುರಿತು ಚರ್ಚೆ ಶುರು ಮಾಡಿದೆ. ಈ ಬಗ್ಗೆ ಮಾತ್ನಾಡಿರೋ ಎಂಸಿಸಿ (ಮೆರಿಲ್ಬೋನ್ ಕ್ರಿಕೆಟ್ ಕೌನ್ಸಿಲ್) ಅಧ್ಯಕ್ಷ ಮೈಕ್ ಗೇಟಿಂಗ್, 2028ರ ಒಲಿಂಪಿಕ್ಸ್ನಲ್ಲಿ ಕ್ರೀಡಾ ಅಭಿಮಾನಿಗಳು ಕ್ರಿಕೆಟ್ಅನ್ನೂ ಕೂಡ ನೋಡುವ ಸಾಧ್ಯತೆ ಇದೆ ಎಂದಿದ್ದಾರೆ. ಈ ಕುರಿತು ಎಂಸಿಸಿ ಸಭೆಯಲ್ಲಿ ಚರ್ಚೆ ನಡೆಸಿರೋದಾಗಿ ಅವರು ಹೇಳಿದ್ದಾರೆ.
ಐಸಿಸಿ ಮುಖ್ಯ ಕಾರ್ಯ ನಿರ್ವಾಹಕ ಮನು ಸಾಹ್ನೆ ಜೊತೆಯೂ ಈ ಕುರಿತು ಮಾತುಕತೆ ನಡೆದಿದೆ. ಮುಂಬರುವ ಒಂದೂವರೆ ವರ್ಷದಲ್ಲಿ ಈ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ. ಒಲಿಂಪಿಕ್ಸ್ಗೆ ಕ್ರಿಕೆಟ್ ತಂಡಗಳು ಹೇಗೆ ಅರ್ಹತೆ ಪಡೆಯಬೇಕು..? ಯಾವ ರೀತಿ ತಂಡಗಳ ಆಯ್ಕೆ ಎಂಬುದರ ಬಗ್ಗೆ ಚರ್ಚೆ ಆಗ್ತಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಅಧಿಕೃತ ನಿರ್ಧಾರ ಹೊರಬೀಳಲಿದೆ ಎಂದು ಎಂಸಿಸಿ ಅಧ್ಯಕ್ಷ ಮೈಕ್ ಹೇಳಿದ್ದಾರೆ.
ಬಿಸಿಸಿಐ ಒಪ್ಪುತ್ತಾ..?
ಒಲಿಂಪಿಕ್ಸ್ ನಿಯಮಾವಳಿಗಳ ಪ್ರಕಾರ, ಎಲ್ಲಾ ಕ್ರೀಡಾ ಫೆಡರೇಷನ್ಗಳು ನಾಡಾ ವ್ಯಾಪ್ತಿಗೆ ಒಳಪಡಬೇಕು. ನಾಡಾ ಅಂದ್ರೆ, ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ. ಇತ್ತೀಚೆಗೆ ಬಿಸಿಸಿಐ ಕೂಡ ನಾಡಾ ವ್ಯಾಪ್ತಿಗೆ ಬಂದಿದೆ. ಹೀಗಾಗಿ, ಕ್ರಿಕೆಟ್ ಕೂಡ ಒಲಿಂಪಿಕ್ಸ್ನಲ್ಲಿ ಸೇರ್ಪಡೆಯಾಬಹುದು. ಆದ್ರೆ, ಇದಕ್ಕೆ ಬಿಸಿಸಿಐ ಒಪ್ಪುತ್ತಾ ಅನ್ನೋ ಪ್ರಶ್ನೆ ಕೂಡ ಕಾಡ್ತಿದೆ. ಕ್ರಿಕೆಟ್ನಲ್ಲಿ ಐಸಿಸಿಗಿಂತಲೂ ಬಿಸಿಸಿಐ ಒಪ್ಪಬೇಕು. ಯಾಕಂದ್ರೆ, ಐಸಿಸಿಗಿಂತಲೂ ಬಿಸಿಸಿಐ ಹೆಚ್ಚು ಶ್ರೀಮಂತ ಮತ್ತು ಕ್ರಿಕೆಟ್ ಅಭಿಮಾನಿಗಳು ಹೆಚ್ಚಾಗಿ ಇರೋದು ಭಾರತದಲ್ಲಿ. ಹೀಗಾಗಿ, ಕ್ರಿಕೆಟ್ ಅನ್ನು ಒಲಿಂಪಿಕ್ಸ್ನಲ್ಲಿ ಸೇರಿಸಬೇಕಾದ್ರೆ, ಬಿಸಿಸಿಐ ಬೆಂಬಲ ಮತ್ತು ಒಪ್ಪಿಗೆ ಬಹಳ ಮುಖ್ಯವಾಗಿರುತ್ತೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?