Featured
2011ರ ವಿಶ್ವಕಪ್ ಫಿಕ್ಸಿಂಗ್ ಆರೋಪ- ಮಾಜಿ ನಾಯಕನನ್ನ ವಿಚಾರಣೆಗೆ ಒಳಪಡಿಸಿದ ಲಂಕಾ ಪೊಲೀಸರು

2011 ರ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಲಂಕಾ ಪೊಲೀಸರು ಮಾಜಿ ಅರವಿಂದ ಡಿ’ಸಿಲ್ವಾ ಅವರನ್ನ ವಿಚಾರಣೆಗೆ ಒಳಪಡಿಸಿದ್ದಾರೆ.
ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ ಮಹಿದಾನಂದ ಅಲತುಗಮಗೆ 2011ರ ವಿಶ್ವಕಪ್ ಫೈನಲ್ನಲ್ಲಿ ಭಾರೀ ಫಿಕ್ಸಿಂಗ್ ನಡೆದಿತ್ತು.ಲಂಕಾ ಮಂಡಳಿ ವಿಶ್ವಕಪ್ ಅನ್ನ ಮಾರಿದರು ಎಂದು ಹೇಳಿ ವಿಶ್ವ ಕ್ರಿಕೆಟ್ನಲ್ಲಿ ಭಾರೀ ಸುಂಟರಗಾಳಿ ಎಬ್ಬಿಸಿದ್ದರು.
ಅಂದು ಮುಂಬೈನ ವಾಖೆಂಡೆ ಅಂಗಳದಲ್ಲಿ ನಡೆದ ಅಂತಿಮ ಕದನದಲ್ಲಿ ಗೌತಮ್ ಗಂಭೀರ್ (97) ಮತ್ತು ಧೋನಿ (91) ರನ್ಗಳ ನೆರವಿನಿಂದ ಸುದೀರ್ಘ 28 ವರ್ಷಗಳ ಬಳಿಕ ವಿಶ್ವಕಪ್ ಎತ್ತಿಹಿಡಿದು ಹೊಸ ಇತಿಹಾಸ ಬರೆದಿತ್ತು.
ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಅಲತುಗಮಗೆಯನ್ನ ಪ್ರಶ್ನಿಸಿದಾಗ ಯು ಟರ್ನ್ ಹೊಡೆದಿದ್ದರು. ಇದೀಗ ಅರವಿಂದ ಡಿ’ಸಿಲ್ವಾ ಅವರ ಹೇಳಿಕೆಯನ್ನ ಲಂಕಾ ಪೊಲೀಸರು ದಾಖಲಿಸಿದ್ದಾರೆ ಮೂಲಗಳ ಪ್ರಕಾರ ಫೈನಲ್ನಲ್ಲಿ ಆಡಿದ್ದರ ಮಾಜಿ ಆಟಗಾರ ಉಪುಲ್ ತರಂಗಾ ಅವರನ್ನ ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?