Featured
2ನೇ ಸ್ಥಾನಕ್ಕೆ ನ್ಯೂಸ್ 18 ಕನ್ನಡ ಲಗ್ಗೆ : ಪಬ್ಲಿಕ್ ಟಿವಿಗೆ ಶಾಕ್..! TV9ಗೂ ನಡುಕ ಶುರುನಾ..? ಹೊಸ ಇತಿಹಾಸಕ್ಕೆ ನಾಂದಿ

ಬೆಂಗಳೂರು : ಇದು ಕನ್ನಡ ಮಾಧ್ಯಮ ಲೋಕದಲ್ಲೇ ಹೊಸ ಸಂಚಲನ ಸೃಷ್ಟಿಸಿರೋ
ಸುದ್ದಿ. ಕಳೆದ ವಾರವಷ್ಟೇ ರೈಸಿಂಗ್ ಕನ್ನಡ ವೆಬ್ಸೈಟ್ನಲ್ಲೇ ಈ ಕುರಿತು ವರದಿ ಮಾಡಲಾಗಿತ್ತು.
ಹೌದು, ನ್ಯೂಸ್ 18 ಕನ್ನಡ, ಸುದ್ದಿ ವಾಹಿನಿ ಈಗ ಕರ್ನಾಟಕದಲ್ಲಿ ಎರಡನೇ ಸ್ಥಾನವನ್ನ ಪಡೆದಿದೆ. ಈ
ಮೂಲಕ ಕಳೆದ 4 ವರ್ಷಗಳಿಂದ ಎರಡನೇ ಸ್ಥಾನವನ್ನ ಕಾಯ್ದುಕೊಂಡಿದ್ದ ಪಬ್ಲಿಕ್ ಟಿವಿಗೆ ಶಾಕ್ ನೀಡಿದೆ.
ಕಳೆದ ಎರಡು ವಾರಗಳ ಹಿಂದಷ್ಟೇ ಸುವರ್ಣ ನ್ಯೂಸ್ ಅನ್ನ ನಾಲ್ಕನೇ ಸ್ಥಾನಕ್ಕೆ ತಳ್ಳಿದ ನ್ಯೂಸ್ 18 ಕನ್ನಡ, ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿತ್ತು. ಆದ್ರೀವಾರ ಪಬ್ಲಿಕ್ ಟಿವಿಯನ್ನೇ ಮೂರನೇ ಸ್ಥಾನಕ್ಕೆ ತಳ್ಳಿದ್ದು, ನ್ಯೂಸ್ 18 ಕನ್ನಡ ಎರಡನೇ ಸ್ಥಾನಕ್ಕೆ ಬಂದಿದೆ. ಪಬ್ಲಿಕ್ ಟಿವಿ ಹಾಗೂ ನ್ಯೂಸ್ 18 ಕನ್ನಡದ ರೇಟಿಂಗ್ ವ್ಯತ್ಯಾಸ ಕಡಿಮೆ ಇದ್ರೂ ಕೂಡ, ಪಬ್ಲಿಕ್ ಟಿವಿ ಈಗ ಮೂರನೇ ಸ್ಥಾನಕ್ಕೆ ಕುಸಿದಿದೆ.
ನ್ಯೂಸ್ 18 ಕನ್ನಡದ ವೇಗ ನೋಡ್ತಿದ್ರೆ, ಮುಂದಿನ ಟಾರ್ಗೆಟ್ ಟಿವಿ9 ಅನ್ನೋ ಮಾತುಗಳು ಕೇಳಿ ಬರ್ತಿವೆ. ಆದ್ರೆ, ಕಳೆದ 12 ವರ್ಷಗಳಿಂದ ಟಿವಿ9 ಮೊದಲ ಸ್ಥಾನದಲ್ಲೇ ಇದೆ. ಹೀಗಾಗಿ, ಟಿವಿ9 ಅನ್ನು ಮೀರಿ ನಂಬರ್ ಒನ್ ಸ್ಥಾನ ಪಡೆಯೋದು ಅಷ್ಟು ಸುಲಭವಲ್ಲ ಅನ್ನೋ ಚರ್ಚೆ ಕೂಡ ಶುರುವಾಗಿದೆ. ಆದ್ರೂ, ಯಾವುದೂ ಅಸಾಧ್ಯವಲ್ಲ ಅನ್ನೋದಕ್ಕೆ ಕಳೆದ ನಾಲ್ಕು ವಾರಗಳ ರೇಟಿಂಗ್ ಸಾಕ್ಷಿ ಎನ್ನಲಾಗ್ತಿದೆ.
ನಾಲ್ಕು ವರ್ಷಗಳಿಂದ ಪಬ್ಲಿಕ್ ಟಿವಿಯನ್ನ ಯಾರು ಕೂಡ ಮುಟ್ಟಲು ಆಗಿರಲಿಲ್ಲ. ಆದ್ರೀಗ, ಪಬ್ಲಿಕ್ ಟಿವಿ ಮೂರನೇ ಸ್ಥಾನಕ್ಕೆ ಕುಸಿದಿದೆ.
ನ್ಯೂಸ್ 18 ಕನ್ನಡದಲ್ಲಿ ಸಂಭ್ರಮವೋ ಸಂಭ್ರಮ
ಕಳೆದ ನಾಲ್ಕು ವಾರಗಳಿಂದ ನ್ಯೂಸ್ 18 ಕನ್ನಡ ಅತ್ಯುತ್ತಮವಾಗಿ ರೇಟಿಂಗ್ ಗಳಿಸುತ್ತಿದ್ದು, ಕಚೇರಿಯಲ್ಲಿ ಹಬ್ಬದ ವಾತಾವರಣವೇ ಮನೆ ಮಾಡಿದೆ. ಪ್ರತಿವಾರ ಕೇಕ್ ಕಟ್ ಮಾಡಿ, ಈ ಸಂಭ್ರಮವನ್ನ ಆಚರಣೆ ಮಾಡಲಾಗ್ತಿದೆ.
ರೇಟಿಂಗ್ಗೆ ಲ್ಯಾಂಡಿಂಗ್ ಪೇಜ್ ಆರೋಪ..!
ಈ ಮಧ್ಯೆ, ನ್ಯೂಸ್ 18 ಕನ್ನಡ ವೇಗವಾಗಿ ರೇಟಿಂಗ್ ಪಡೆದಿರೋದಕ್ಕೆ ಹಲವರು
ಹಲವು ರೀತಿಯಲ್ಲಿ ವಿಶ್ಲೇಷಣೆ ಮಾಡ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಲ್ಯಾಂಡಿಂಗ್ ಪೇಜ್ಗೆ ಅನುಮತಿ
ನೀಡಲಾಗಿದೆ. ಬಹುತೇಕ ಕರ್ನಾಟಕ ಕೇಬಲ್ಗಳಲ್ಲಿ ನ್ಯೂಸ್ 18 ಕನ್ನಡ ಲ್ಯಾಂಡಿಂಗ್ ಪೇಜ್ ಆಗಿದೆ.
ಹೀಗಾಗಿ ರೇಟಿಂಗ್ ಬರ್ತಿದೆ ಅನ್ನೋ ಮಾತು ಕೇಳಿ ಬರ್ತಿದೆ.
ಏನಿದು ಲ್ಯಾಂಡಿಂಗ್ ಪೇಜ್..?
ಲ್ಯಾಂಡಿಂಗ್ ಪೇಜ್ ಅಂದ್ರೆ, ಟಿವಿ ಆನ್ ಮಾಡಿದ ತಕ್ಷಣ ಬರುವಂತಹ ಚಾನೆಲ್.
ನೀವೀಗ ಮನೆಯಲ್ಲಿ ಟಿವಿ ಆನ್ ಮಾಡಿದ ತಕ್ಷಣ ನಿಮ್ಮ ಮನೆಯಲ್ಲಿ ಯಾವುದಾದರೊಂದು ಚಾನೆಲ್ ಬರುತ್ತೆ.
ಹಾಗೆ ಬಂದಾಗ, ಆ ಚಾನೆಲ್ಅನ್ನ ನೀವು ನೋಡಬಹುದು, ಅಥವಾ ಬದಲಾವಣೆ ಮಾಡಬಹುದು. ಆದ್ರೆ, ಟಿವಿ ಹಾಕಿದ
ತಕ್ಷಣ ಆ ಚಾನೆಲ್ ಬರೋದ್ರಿಂದ, ಅದನ್ನ ಕನಿಷ್ಠ 2 ನಿಮಿಷ ನೋಡಿದರೂ, ಚಾನೆಲ್ ರೇಟಿಂಗ್ ಮೇಲೆ ಪರಿಣಾಮ
ಬೀರುತ್ತೆ ಅನ್ನೋದು ತಜ್ಞರ ವಾದ. @Jagkb1977 Week 33 data: Kannada News Channels .For custom viewership data, visit https://t.co/CT4Nvm2Rub pic.twitter.com/Scj18ZcdgX— BARCIndia (@BARCIndia) August 22, 2019
ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ..!
ಇದೇ ಲ್ಯಾಂಡಿಂಗ್ ಪೇಜ್ ವಿಚಾರವಾಗಿ ಹಲವು ಸಂಸ್ಥೆಗಳು ಕೋರ್ಟ್ ಮೆಟ್ಟಿಲೇರಿವೆ. ಈಗಾಗಲೇ ವಿಚಾರಣೆ ನಡೆಸಿರೋ ಸುಪ್ರೀಂಕೋರ್ಟ್, ಟ್ರಾಯ್ಗೆ ನೊಟೀಸ್ ನೀಡಿದೆ. ಮುಂದಿನ ತಿಂಗಳು ಸೆಪ್ಟೆಂಬರ್ 12ರಂದು ಈ ಕುರಿತು ಸುಪ್ರೀಂನಲ್ಲಿ ವಿಚಾರಣೆ ನಡೆಯಲಿದೆ.
ಅದೇನೇ ಆಗ್ಲಿ, ಕನ್ನಡ ಸುದ್ದಿ ಮಾಧ್ಯಮ ಇತಿಹಾಸದಲ್ಲಿ ನ್ಯೂಸ್ 18 ಕನ್ನಡ ಹೊಸ ಮೈಲಿಗಲ್ಲು ಸೃಷ್ಟಿಸಿರೋದು ಸುಳ್ಳಲ್ಲ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?