Featured
130 ಕೋಟಿ ಜನರ ನಿರೀಕ್ಷೆ, ನಾನೂ ಭಾಗಿ, ನಿಮ್ಮ ಫೋಟೋ ರೀ ಟ್ವೀಟ್ ಮಾಡ್ತೀನಿ : ಪ್ರಧಾನಿ
ಬೆಂಗಳೂರು/ ನವದೆಹಲಿ
ಇಂದು ಮಧ್ಯರಾತ್ರಿಯಿಂದ ನಾಳೆ ಮುಂಜಾನೆವರೆಗೆ ಇಡೀ ದೇಶದ ಜನರಿಗೆ ಹಬ್ಬ, ಕಾರಣ ಚಂದ್ರಯಾನ 2 ನೌಕೆ ತನ್ನಲ್ಲಿನ ರೋವರ್‌ನ್ನ ಚಂದ್ರನ ಅಂಗಳದಲ್ಲಿ ಲ್ಯಾಂಡ್ ಮಾಡಲಿದೆ.
ಇದರೊಂದಿಗೆ ಭಾರತ ಕೂಡ ಅಗ್ರ ರಾಷ್ಟ್ರಗಳ ಸಾಲಿನಲ್ಲಿ ಬಾಹ್ಯಾಕಾಶದಲ್ಲೂ ಪ್ರಭುತ್ವ ಸಾಧಿಸಿದಂತಾಗುತ್ತೆ. ಚಂದ್ರಯಾನದ ಕೊನೆಯ ಹಂತವನ್ನ ( ಲ್ಯಾಂಡಿಂಗ್) ಇಸ್ರೋ ವಿಜ್ಞಾನಿಗಳು ಹಾಗೂ ಶಾಲಾ ಮಕ್ಕಳೊಂದಿಗೆ ನೇರಪ್ರಸಾರದಲ್ಲಿ ವೀಕ್ಷಿಸಲು ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಸರಣಿ ಟ್ವೀಟ್‌ಗಳನ್ನ ಮಾಡಿದ್ದಾರೆ.
130 ಕೋಟಿ ಜನರು ಉತ್ಸಾಹದಿಂದ ಕಾಯುತ್ತಿರುವ ಆ ಕ್ಷಣಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ, ಭಾರತ ಹಾಗೂ ಹೊರ ಜಗತ್ತು ನಮ್ಮ ವಿಜ್ಞಾನಿಗಳ ಸಾಧನೆಗೆ ಸಾಕ್ಷಿಯಾಗಲಿದೆ ಎಂದು ಮೊದಲ ಟ್ವೀಟ್ ಮಾಡಿದ್ದಾರೆ.ʼ
ಹಾಗೇ ಮುಂದುವರಿದು,
ನಾನಂತೂ ಈ ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಕಾತರನಾಗಿದ್ದೇನೆ, ದೇಶದ ಆಯ್ದ ಯುವಕರು ಹಾಗೂ ಭೂತಾನ್ ರಾಷ್ಟ್ರದ ಯುವಕರೂ ನನ್ನೊಂದಿಗೆ ಭಾಗಿಯಾಗಲಿದ್ದಾರೆ.
ನನ್ನೊಂದಿಗೆ ಸೇರಿಕೊಳ್ಳುವ ಯುವಕ ಯುವತಿಯರನ್ನ ಇಸ್ರೋ ವಿಶಿಷ್ಟ ಕ್ವಿಜ್ ಮೂಲಕ ಆಯ್ಕೆ ಮಾಡಿಕೊಂಡಿದೆ, ಆ ಎಲ್ಲಾ ಪ್ರಶ್ನಾವಳಿಗಳೂ ಕೂಡ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಿಸಿದವುಗಳೇ ಆಗಿದ್ದವು.
ಜುಲೈ 22ರಲ್ಲಿ ಇದನ್ನ ಹಾರಿಬಿಟ್ಟಾಗಿನಿಂದಲೂ ನಾನು ಪ್ರತಿದಿನ ಈ ಮಿಷನ್ ಅವಲೋಕನ ಮಾಡುತ್ತಲೇ ಬರುತ್ತಿದ್ದೇನೆ, ದೇಶದ ವಿಜ್ಞಾನಿಗಳ ಕೌಶಲ್ಯಕ್ಕೆ ಸಾಕ್ಷಿಯಾಗಿರುವ ಈ ಯಾನ ಕೋಟ್ಯಂತರ ಭಾರತೀಯರಿಗೆ ಪ್ರಯೋಜನವಾಗಲಿದೆ.
ನಾನು ನಿಮ್ಮಲ್ಲಿ ಕೇಳಿಕೊಳ್ಳುವುದಿಷ್ಟೇ, ನೀವೆಲ್ಲರೂ ಈ ಚಂದ್ರಯಾನ ೨ ಚಂದ್ರನ ದಕ್ಷಿಣ ದೃವದಲ್ಲಿ ಸ್ಪರ್ಶಿಸುವುದನ್ನ ನೋಡಿ ಕಣ್ತುಂಬಿಕೊಳ್ಳಿ, ಹಾಗೂ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಆಯ್ದ ಕೆಲವನ್ನ ನಾನು ರೀ ಟ್ವೀಟ್ ಮಾಡುತ್ತೇನೆ
ಹೀಗೆ ಸರಣಿ ಟ್ವೀಟ್‌ಗಳ ಮೂಲಕ ಪ್ರಧಾನಿ ಮೋದಿ ದೇಶಾದ್ಯಂತ ಚಂದ್ರಯಾನ ೨ ರ ಅಂಗಳ ಸ್ಪರ್ಶ ಸನ್ನಿವೇಶಕ್ಕೆ ಕಾತರ ಹಾಗೂ ಕುತೂಹಲ ಹುಟ್ಟಿಸಿದ್ದಾರೆ. ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಿ ಇಸ್ರೋ ಗೆಸ್ಟ್ ಹೌಸ್‌ನಲ್ಲಿ ವಿಶ್ರಾಂತಿ ಪಡೆದು ನಂತರ ಇಸ್ರೋ ವ್ಯವಸ್ಥೆಗೊಳಿಸಿರುವ ಸ್ಥಳಕ್ಕೆ ಹೋಗುತ್ತಾರೆ. ನಾಳೆ ಬೆಳಗ್ಗೆ ೧ರಿಂದ ರೋವರ್ ಲ್ಯಾಂಡಿಂಗ್ ಸಮಯ ನಿಗದಿ ಮಾಡಲಾಗಿದೆ.
You may like
PM Narendra Modi | ಭಾರತ 2047ಕ್ಕೆ ಅಭಿವೃದ್ಧಿಶೀಲ ದೇಶವಾಗಿಸಲು ಮೋದಿ ಸಂಕಲ್ಪ
ಹಾವೇರಿಯಲ್ಲಿ ಹಾಲಿನಂತೆ ಹರಿದ ಜನಸಾಗರ : ವಿಜಯೇಂದ್ರ ದಿಲ್ ಖುಷ್.!
2024ಕ್ಕೆ ಮತ್ತೊಮ್ಮೆ ಮೋದಿ ಸಂಕಲ್ಪ : ಗೋಡೆ ಬರಹಕ್ಕೆ ವಿಜಯೇಂದ್ರ ಚಾಲನೆ
ಪ್ರಧಾನಿ ಮೋದಿ ಟ್ವಿಟ್ಟರ್ ಖಾತೆ 7 ಕೋಟಿ ಫಾಲೋವರ್ಸ್ : ನಮೋ ಹೊಸ ದಾಖಲೆ
ಕೋವ್ಯಾಕ್ಸಿನ್ ಲಸಿಕೆ ಪಡೆದ ಪ್ರಧಾನಿ ನರೇಂದ್ರ ಮೋದಿ : ಹೇಗಿತ್ತು ಅನುಭವ.?
ಸಂಕ್ರಾಂತಿಗೆ ಕೊರೋನಾ ವ್ಯಾಕ್ಸಿನ್ ಫಿಕ್ಸ್ : ಜನವರಿ 16ರಿಂದ ದೇಶಾದ್ಯಂತ ಲಸಿಕೆ ವಿತರಣೆ