Featured
ಉತ್ತರ ಪ್ರದೇಶದಲ್ಲಿ 13 ವರ್ಷದ ಬಾಲಕಿಯ ರೇಪ್ ಅಂಡ್ ಮರ್ಡರ್- ಅತ್ಯಾಚಾರ ನಡೆಸಿ ಕಣ್ಣು ಕಿತ್ತು, ನಾಲಿಗೆ ತುಂಡರಿಸಿದ ರಾಕ್ಷಸರು
![](https://risingkannada.com/wp-content/uploads/2020/08/girl-rape.jpg)
ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಉತ್ತರ ಪ್ರದೇಶದ ಲಖಿಂಪುರಿಯಲ್ಲಿ ಮನುಕುಲ ತಲೆ ತಗ್ಗಿಸುವ ಘಟನೆ ನಡೆದಿದೆ. 13 ವರ್ಷದ ಅಪ್ರಾಪ್ತ ಬಾಲಕಿಯನ್ನು ದುಷ್ಕರ್ಮಿಗಳು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ. ಕ್ರೂರಿಗಳು ಬಾಲಕಿಯ ಪ್ರಾಣ ತೆಗೆದು ಆಕೆಯ ನಾಲಿಗೆಯನ್ನು ಕತ್ತರಿಸಿ, ಕಣ್ಣನ್ನು ಕಿತ್ತು ಹಾಕಿ ವಿಕೃತಿ ಮೆರೆದಿರುವ ಅಮಾನುಷ ಘಟನೆ ನಡೆದಿದೆ.
The post mortem report of the 13-year-old girl (whose body was found in a field in Isanagar), confirms rape: Satyendra Kumar, SP Lakhimpur Kheri https://t.co/6peOBSa0vO pic.twitter.com/SRAKCnJ8PE— ANI UP (@ANINewsUP) August 16, 2020
ಕಾಣೆಯಾದ ಮಗಳನ್ನು ಹುಡುಕುತ್ತಿದ್ದಾಗ ಮಗಳ ಮೃತದೇಹ ಭಯಾನಕ ರೀತಿಯಲ್ಲಿ ಊರಾಚೆಯ ಇಸಾನಗರದ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದೆ. ಕೆಲ ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ನಿರ್ಭಯ ಅತ್ಯಾಚಾರದ ಭೀಕರತೆಯನ್ನು ಮರೆ ಯಾಗುವ ಮುನ್ನವೇ ಪಾಪಿಗಳು ಮತ್ತೊಂದು ಭೀಕರ ಕೃತ್ಯ ನಡೆಸಿದ್ದಾರೆ.
ಘಟನೆ ಬಗ್ಗೆ ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆರೋಪಿಗಳನ್ನು ಕೂಡಲೇ ಗಲ್ಲಿಗೇರಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ಆಗ್ರಹಿಸುತ್ತಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ಪ್ರದೇಶ ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿ ಎಸ್ಎಸ್ಎ ಅಡಿಯಲ್ಲಿ ಕ್ರಮಕೈಗೊಂಡಿದ್ದಾರೆ.
Lakhimpur Kheri: Body of a 13-year-old girl found in a field in Isanagar. Satyendra Kumar, SP Lakhimpur Kheri says, "FIR registered. Two accused have been arrested. Post-mortem report awaited. Investigation is underway." (15.08.2020) pic.twitter.com/VlAKN2AY0g— ANI UP (@ANINewsUP) August 16, 2020
You may like
ದೃಶ್ಯ ಸಿನಿಮಾ ಸ್ಟೈಲ್ನಲ್ಲಿ ನಡೆದಿತ್ತು ಕೊಲೆ: ಹೇಗಿತ್ತು ಗೊತ್ತಾ ಹತ್ಯೆಯ ಪ್ಲ್ಯಾನ್
ದೆಹಲಿ ನಂತರ ಕ್ರೈಂ ಸಿಟಿಯಾಗ್ತಿದೆಯಾ ಬೆಂಗಳೂರು?
ತಾಯಿಯನ್ನೇ ಕೊಂದ ಮಗನ ಕೇಸಿಗೆ ಟ್ವಿಸ್ಟ್..!
ಎಫ್ ಎಸ್ ಎಲ್ ವರದಿ ಬಿಚ್ಚಿಟ್ಟ ಸತ್ಯವೇನು ?ಅವನು ಸ್ನೇಹಿತನ ಹೆಂಡ್ತಿ ಪೋರ್ಟ್ ಮಾಡ್ದ..
ಸಿಟ್ಟಾದ ಗೆಳೆಯ ಮಸಣಕ್ಕೆ ಪೋಸ್ಟ್ ಮಾಡ್ದ..!ಹರಾಜಿಗೂ ಮುನ್ನ ಸ್ಟಾರ್ ಕನ್ನಡಿಗರನ್ನ ಕೈಬಿಡಲು ಮುಂದಾದ ಕಿಂಗ್ಸ್ ಇಲೆವೆನ್ ಪಂಜಾಬ್..?
ಹತ್ರಾಸ್ ಸಾಮೂಹಿಕ ಅತ್ಯಾಚಾರ: ಪ್ರಕರಣವನ್ನ ಎಸ್ಐಟಿಗೆ ವಹಿಸಿದ ಸಿಎಂ ಯೋಗಿ ಆದಿತ್ಯನಾಥ್