Featured
ಇನ್ಮುಂದೆ ಫೋನ್ ನಂಬರ್ 10 ಅಂಕಿ ಅಲ್ಲ.. 11 ಅಂಕಿಗಳು..! ಯಾಕೆ ಗೊತ್ತಾ..?
![](https://risingkannada.com/wp-content/uploads/2019/09/mobile.jpg)
ರೈಸಿಂಗ್ ಕನ್ನಡ : ಬಹುತೇಕ ಎಲ್ಲರಿಗೂ ಗೊತ್ತಿರುವಂತೆ ನಾವು ಬಳಸ್ತಿರೋ ಫೋನ್ ನಂಬರ್ಗಳಲ್ಲಿ 10 ಅಂಕಿಗಳಿರುತ್ವೆ. ಭಾರತದಲ್ಲಿ ಮೊಬೈಲ್ ಬಳಸುವ ಎಲ್ಲರ ನಂಬರ್ಗಳು 10 ಅಂಕಿಗಳೇ ಇರುತ್ವೆ. ಇದರಲ್ಲಿ ಆರಂಭದ ಅಂಕಿ, 9, 8, 7 ಹೀಗೆ ವಿವಿಧ ನಂಬರ್ನಿಂದ ಶುರುವಾಗಿವೆ. ಆದ್ರೆ, ಮುಂದೆ 10 ಅಂಕಿಗಳ ಬದಲಿಗೆ 11 ಅಂಕಿಗಳು ಮೊಬೈಲ್ ನಂಬರ್ಗೆ ಬರ್ತಿವೆ.
ಯೆಸ್, 2050ರ ವೇಳೆಗೆ ಭಾರತದಲ್ಲಿ ಮೊಬೈಲ್ ನಂಬರ್ಗೆ ಹೆಚ್ಚು ಡಿಮ್ಯಾಂಡ್ ಇರುತ್ತೆ. ಹೀಗಾಗಿ, ಈಗಲೇ 10 ಬದಲು, 11 ಅಂಕಿಗಳನ್ನು ಬಳಸು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 10 ಅಂಕಿಗಳಿದ್ರೆ, 250 ಕೋಟಿ ಮಂದಿಗೆ ಸೇವೆ ನೀಡಲು ಸಾಧ್ಯವಾಗುತ್ತೆ. ಅದಕ್ಕಿಂತ ಹೆಚ್ಚಾಗಿ ಮೊಬೈಲ್ ನಂಬರ್ ನೀಡಲು ಸಾಧ್ಯವಿಲ್ಲ. 250 ಕೋಟಿಗೂ ಹೆಚ್ಚು ಕನೆಕ್ಷನ್ ಮೊಬೈಲ್ ನಂಬರ್ಗಳು ಬೇಕು ಅಂದ್ರೆ, 11 ಅಂಕಿಗಳ ನಂಬರ್ ನೀಡಲೇಬೇಕು.
ಈ ಕುರಿತು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಭಾರತದಲ್ಲಿ ಮೊಬೈಲ್ ಫೋನ್ ನಂಬರ್ ಬದಲಾವಣೆ ಮಾಡಬೇಕು ಅನ್ನೋ ಚಿಂತನೆ ನಡೆಸಿದೆ. ಶೀಘ್ರದಲ್ಲೇ ಈ ಕುರಿತು ಕೇಂದ್ರ ಸರ್ಕಾರ ನಿರ್ಧಾರ ಪ್ರಕಟಿಸೋ ಸಾಧ್ಯತೆ ಇದೆ. ಮುಂದಿನ 30 ವರ್ಷಗಳ ಬಳಿಕ ಆಗುವಂತ ಸಮಸ್ಯೆಗೆ ಈಗಲೇ ಪರಿಹಾರ ಕಂಡುಕೊಳ್ಳುವ ಆಲೋಚನೆ ಇದಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?