ರೈಸಿಂಗ್ ಕನ್ನಡ :
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 1000 ರೂಪಾಯಿ ನೋಟಿನ ವಿಚಾರವಾಗಿ ಕೊನೆಗೂ ಸ್ಪಷ್ಟನೆ ನೀಡಿದೆ. ಕಳೆದ ನಾಲ್ಕೈದು ದಿನಗಳಿಂದ 1000 ರೂಪಾಯಿ ಬಿಡುಗಡೆ ಆಗಿದೆ. ಇನ್ಮುಂದೆ 2000 ರೂಪಾಯಿ ನೋಟು ಚಲಾವಣೆ ಇರೋದಿಲ್ಲ ಎಂದು ಸಖತ್ ವೈರಲ್ ಆಗಿತ್ತು. ಆದ್ರೆ, ಈ ಕುರಿತು ಆರ್ಬಿಐ ಸ್ಪಷ್ಟನೆ ನೀಡಿದ್ದು, 1000 ರೂಪಾಯಿ ನೋಟನ್ನ ನಾವು ಮುದ್ರಿಸಿಲ್ಲ. ಇದು ಅಸಲಿ ನೋಟಲ್ಲ. ಯಾರೋ ಫೋಟೋ ಶಾಪ್ ಮಾಡಿ, ಕ್ರಿಯೇಟ್ ಮಾಡಿರೋ ನೋಟು ಎಂದು ಸ್ಪಷ್ಟನೆ ನೀಡಿ, ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಇಷ್ಟೇ ಅಲ್ಲದೆ, 2000 ರೂಪಾಯಿ ನೋಟಿನ ಅಪನಗದೀಕರಣ ಜಾರಿಯಲ್ಲಿ ಇಲ್ಲ. ಅಂದ್ರೆ, 2000 ರೂಪಾಯಿ ನೋಟು ಬ್ಯಾನ್ ಮಾಡಲ್ಲ ಎಂದು ಸ್ಪಷ್ಟನೆ ನೀಡಿದ್ದು, ಕೇವಲ ಸದ್ಯಕ್ಕೆ ಕೆಲ ಕಾಲ ಮುದ್ರಣ ಸ್ಥಗಿತಗೊಳಿಸಿರೋದಾಗಿ ಹೇಳಿದೆ.
2016ರ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ, 1000 ಹಾಗೂ 500 ರೂಪಾಯಿ ನೋಟನ್ನು ರದ್ದು ಮಾಡಿದ್ರು. ಬಳಿಕ 500 ಹಾಗೂ 2000 ರೂಪಾಯಿ ಹೊಸ ನೋಟು ಚಲಾವಣೆಗೆ ಬಂದಿದ್ದವು. ಇದೀಗ 1000 ರೂಪಾಯಿ ನೋಟು ಕೂಡ ಬಂತು ಎಂದು ವೈರಲ್ ಆಗಿತ್ತು. ಅದು ಸುಳ್ಳು ಸುದ್ದಿ ಎಂದು ಸ್ವತಃ ಆರ್ಬಿಐ ಹೇಳಿದೆ. ಜೊತೆಗೆ 2000 ರೂಪಾಯಿ ನೋಟು ಬ್ಯಾನ್ ಮಾಡಲ್ಲ ಎಂದು ಕೂಡ ಸ್ಪಷ್ಟನೆ ನೀಡಿದ್ದು, ಜನ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?