ರೈಸಿಂಗ್ ಕನ್ನಡ:
ಕ್ರಿಕೆಟ್ ಮತ್ತೆ ಆರಂಭ ಆಗುತ್ತೆ ಅನ್ನುವಾಗಲೇ ಕೊರೊನಾ ದೊಡ್ಡ ಶಾಕ್ ನೀಡಿದೆ. ಪಾಕಿಸ್ತಾನ ಕ್ರಿಕೆಟ್ ತಂಡ ಇನ್ನೇನು ಇಂಗ್ಲೆಂಡ್ನಲ್ಲಿ ಕ್ರಿಕೆಟ್ ಆಡಲು ವಿಮಾನ ಹತ್ತಲಿದೆ ಅನ್ನುವಾಗಲೇ ಮೇಲಿಂದ ಮೇಲೆ ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದೆ. ಇಂಗ್ಲೆಂಡ್ನಲ್ಲಿ ಕ್ರಿಕೆಟ್ ಆಡಬೇಕಿದ್ದ 18 ಆಟಗಾರರ ಪೈಕಿ ಪಾಕಿಸ್ತಾನ ತಂಡದ 10 ಆಟಗಾರರಿಗೆ ಕೊರೊನಾ ಪಾಸಿಟ್ ಬಂದಿದೆ. ಪಾಕ್ ಕ್ರಿಕೆಟ್ ಬೋರ್ಡ್ ಚೀಫ್ ಎಕ್ಸಿಕ್ಯುಟಿವ್ ವಾಸಿಂ ಖಾನ್ ಈ ವಿಷಯವನ್ನು ದೃಢಪಡಿಸಿದ್ದಾರೆ.
ಇಂಗ್ಲೆಂಡ್ ವಿಮಾನ ಹತ್ತುವ ಮೊದಲು ಪಾಕ್ ಕ್ರಿಕೆಟಿಗರು ಕೋವಿಡ್19 ಟೆಸ್ಟ್ಗೆ ಒಳಗಾಗಬೇಕಿತ್ತು. ಕಳೆದ ವಾರ ನಡೆದ ಟೆಸ್ಟ್ನಲ್ಲಿ ಕೆಲ ಕ್ರಿಟಿಗರು ಪಾಸ್ ಆಗಿದ್ದರು. ಆದ್ರೆ ಈಗ ನಡೆದ ಟೆಸ್ಟ್ನಲ್ಲಿ ಪಾಕ್ ಕ್ರಿಕೆಟ್ ತಂಡದ 10 ಆಟಗಾರರಿಗೆ ಕೋವಿಡ್ 19 ಪಾಸಿಟಿವ್ ಆಗಿದೆ. ಶಾದಾಬ್ ಖಾನ್, ಹ್ಯಾರಿಸ್ ರೌಫ್, ಹೈದರ್ ಆಲಿ, ಫಕರ್ ಝಮಾನ್, ಮೊಹಮ್ಮದ್ ರಿಜ್ವಾನ್, ವಹಾಬ್ ರಿಯಾಜ್, ಇಮ್ರಾನ್ ಖಾನ್, ಮೊಹಮ್ಮದ್ ಹಫೀಝ್, ಮೊಹಮ್ಮದ್ ಹಸ್ನೈನ್ ಮತ್ತು ಖಾಶಿಫ್ ಭಟ್ಟಿ ಇಂಗ್ಲೆಂಡ್ ಪ್ರಯಾಣ ಮಾಡುವ ಹಾಗಿಲ್ಲ.
ಪಾಕಿಸ್ತಾನ ಇಂಗ್ಲೆಂಡ್ನಲ್ಲಿ 3 ಟೆಸ್ಟ್ ಮತ್ತು 3 ಟಿ-20 ಪಂದ್ಯಗಳನ್ನು ಆಡಲು ತಯಾರಿ ನಡೆಸುತ್ತಿತ್ತು. ಜುಲೈ ಮೊದಲ ವಾರದಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ ಕ್ರಿಕೆಟ್ ಸರಣಿ ಆರಂಭವಾಗಲಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?