Featured
ಹೋಮ್ ವರ್ಕ್ ಟೆನ್ಷನ್ : ಮಕ್ಕಳ ಆರೋಗ್ಯಕ್ಕೆ ಹಾನಿಕಾರಕ..! ಪೋಷಕರೇ ಎಚ್ಚರ ಎಚ್ಚರ..!
![](https://risingkannada.com/wp-content/uploads/2019/08/std-1.jpg)
Source : Online
ಸಾಮಾನ್ಯವಾಗಿ ಎಲ್ಲಾ ತಂದೆ-ತಾಯಂದಿರಿಗೆ ತಮ್ಮ ಮಕ್ಕಳು ಒಳ್ಳೇ ವಿದ್ಯಾಭ್ಯಾಸ ಕಲಿಯಬೇಕು. ಚೆನ್ನಾಗಿ ಓದಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಆದ್ರೆ, ಇದೇ ಆಸೆಯಿಂದ, ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀಳುತ್ತೆ ಎಂದು ಅಧ್ಯಯನ ಎಚ್ಚರಿಕೆ ನೀಡಿದೆ. ಅದರಲ್ಲೂ ಓದಿನ ವಿಚಾರದಲ್ಲಿ ಮಕ್ಕಳ ಆರೋಗ್ಯ ಮತ್ತು ಬೆಳವಣಿಗೆ ಮೇಲೆ ಹೆಚ್ಚಿನ ಎಫೆಕ್ಟ್ ಆಗುತ್ತಿದೆ ಎಂದು ಸಂಶೋಧನೆ ಹೇಳಿದೆ.
ಶಾಲೆಗಳಲ್ಲಿ ಶಿಕ್ಷಕರು ವಿನಾಃ ಕಾರಣ ಹೆಚ್ಚು ಹೆಚ್ಚು ಹೋಮ್ ವರ್ಕ್
ನೀಡ್ತಾರೆ. ಮಕ್ಕಳು ಶಾಲೆಯಿಂದ ಮನೆಗೆ ಬಂದಾಕ್ಷಣ, ಮತ್ತೆ ಮನೆಯಲ್ಲಿ ಓದುವುದೇ ಕೆಲಸ ಆಗಿರುತ್ತೆ.
ಹೀಗೆ ಓದುವುದು, ಬರೆಯುವುದನ್ನ ಬಿಡುವಿಲ್ಲದೇ, ಹೆಚ್ಚು ಸಮಯ ಮಾಡಿಸಿದ್ರೆ ಮಕ್ಕಳ ಆರೋಗ್ಯ ಹಾಳಾಗುತ್ತೆ.
ಸಣ್ಣ ವಯಸ್ಸಿನಲ್ಲೇ ಮಕ್ಕಳು ಒತ್ತಡವನ್ನ ಅನುಭವಿಸಬೇಕಾಗುತ್ತೆ. ಟೆನ್ಷನ್ ಹೆಚ್ಚಾಗುತ್ತೆ. ಇದು
ಮಕ್ಕಳ ಬೆಳವಣಿಗೆಗೆ ಮಾರಕ. ಜೊತೆಗೆ ಮಕ್ಕಳ ಆರೋಗ್ಯದ ಮೇಲೆ ಋಣಾತ್ಮಕ ಅಂದ್ರೆ, ಆರೋಗ್ಯದಲ್ಲಿ ಏರುಪೇರಾಗುವ
ಸಾಧ್ಯತೆ ಹೆಚ್ಚಾಗಿರುತ್ತೆ ಎಂದು ಸಂಶೋಧನೆ ಹೇಳಿದೆ.
ಹೀಗಾಗಿಯೇ ನ್ಯಾಷನಲ್ ಎಜುಕೇಷನ್ ಅಸೋಸಿಯೇಷನ್ ಹಾಗೂ ನ್ಯಾಷನಲ್ ಪಿಟಿಎ ಎರಡೂ ಸಂಸ್ಥೆಗಳು ಈ ಕುರಿತು ಕಳವಳವನ್ನ ವ್ಯಕ್ತಪಡಿಸಿವೆ. ಅಲ್ಲದೆ, ತರಗತಿ ಹಾಗೂ ವಯಸ್ಸಿಗೆ ಸಂಬಂಧಿಸಿದಂತೆ ಹೋಮ್ ವರ್ಕ್ ಇಷ್ಟೇ ನಿಮಿಷ, ಗಂಟೆ ಇರಬೇಕು ಎಂದು ಸಮಯ ನಿಗಧಿ ಮಾಡಿದೆ.
ಫಸ್ಟ್ ಗ್ರೇಡ್ ಅಂದ್ರೆ, ಒಂದನೇ ತರಗತಿ ಓದುತ್ತಿರುವ ಮಕ್ಕಳಿಗೆ ಮನೆಯಲ್ಲಿ 10 ನಿಮಿಷ ಹೋಮ್ ವರ್ಕ್ ಮಾಡಿದ್ರೆ ಸಾಕು. ಅದೇ 10ನೇ ತರಗತಿ ಓದುತ್ತಿರೋ ಮಕ್ಕಳು, 2 ರಿಂದ 3 ಗಂಟೆ ಓದಿದ್ರೆ ಸಾಕು ಎಂದು ಶಿಕ್ಷಣ ತಜ್ಞರು ಸಲಹೆ ನೀಡಿದ್ದಾರೆ.
![](https://risingkannada.com/wp-content/uploads/2019/08/std.jpg)
ಆದ್ರೆ, ಕಿಂಡರ್ ಗಾರ್ಡನ್ ಅಥವಾ ಪ್ರೀ ನರ್ಸರ್ ಮಕ್ಕಳಿಗೇ ಸರಿ ಸುಮಾರು 30 ನಿಮಿಷದಷ್ಟು ಹೋಮ್ ವರ್ಕ್ ನೀಡ್ತಿರೋದು ಗಮನಿಸಲೇಬೇಕಾದ ಸಂಗತಿ. ಎಲ್ಕೆಜಿ, ಯುಕೆಜಿ ಮಕ್ಕಳಿಗೂ ಅರ್ಧ ಗಂಟೆಗೂ ಹೆಚ್ಚಿನ ಹೋಮ್ ವರ್ಕ್ ನೀಡಲಾಗ್ತಿದೆ. ಇದು ಮಕ್ಕಳ ನೈತಿಕ ಸ್ಥೈರ್ಯವನ್ನೇ ಕುಗ್ಗಿಸುತ್ತದೆ. ಜೊತೆಗೆ ಪೋಷಕರ ಮೇಲೂ ಒತ್ತಡ ಹೆಚ್ಚಾಗುತ್ತಿದೆ ಎಂದು ಸಂಶೋಧಕರು ಕಳವಳ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಮಕ್ಕಳ ಓದಿನ ಬಗ್ಗೆ ತುಂಬಾನೇ ಕೇರ್ ತಗೋಬೇಕು ನಿಜ. ಆದ್ರೆ, ಒತ್ತಡ ಹಾಕಿ, ಅನಾರೋಗ್ಯಕ್ಕೆ ಕಾರಣವಾಗುವಂತ ರೀತಿಯಲ್ಲಿ ವಿನಾಃ ಟೆನ್ಷನ್ ನೀಡುವುದು ಸರಿಯಲ್ಲ. ಎಲ್ಲದಕ್ಕೂ ಒಂದೊಂದು ವಯಸ್ಸಿದೆ. ಸಣ್ಣ ವಯಸ್ಸಿನಲ್ಲೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಮಕ್ಕಳ ಮೆದುಳು ಪೋಷಕರು ಹಾಗೂ ಶಿಕ್ಷಕರು, ಒಟ್ಟಾರೆ ಸಮಾಜ ಹಾಕುವ ಒತ್ತಡವನ್ನ ತಡೆದುಕೊಳ್ಳುವಷ್ಟು ಶಕ್ತವಾಗಿ ಇರುವುದಿಲ್ಲ. ಹೀಗಾಗಿ, ಇನ್ನಾದ್ರೂ, ಮಕ್ಕಳ ಮೇಲೆ ಒತ್ತಡ ಹಾಕುವ ಮುನ್ನ ಯೋಚಿಸಿ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?