Featured
ಹೀಗೆಲ್ಲಾ ಹೇಳೋ ಅವಶ್ಯಕತೆ ಇಲ್ಲ ದೇವೇಗೌಡ್ರೆ, ಜೆಡಿಎಸ್ ಸಂಘಟಿಸಿ ಸಾಕು..!

ನವದೆಹಲಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್ ನಿರ್ಧಾರ ಮಾಡುತ್ತೆ, ನಮ್ಮ ಜವಾಬ್ದಾರಿ ಏನಿದ್ರೂ ಪಕ್ಷ ಸಂಘಟನೆಯಷ್ಟೇ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ನವದೆಹಲಿಯಲ್ಲಿಂದು ಹೇಳಿದರು. ಕಾಂಗ್ರೆಸ್ ಮುಂದೆ ಸಾಕಷ್ಟು ಸವಾಲುಗಳಿವೆ, ಬಿಜೆಪಿ ವಾಮಮಾರ್ಗದಲ್ಲಿ ಹೋಗುತ್ತಿರುವುದು ಆತಂಕ ತಂದಿದೆ ಎಂದರು.
ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕುಮಾರಸ್ವಾಮಿ ಸಿಎಂ ಆಗಿರುವುದು ಕಾಂಗ್ರೆಸ್‌ನವರಿಗೇ ಇಷ್ಟವಿರಲಿಲ್ಲ, ಕಾಂಗ್ರೆಸ್‌ನವರೇ ಬಿಜೆಪಿ ಜೊತೆ ಕೈ ಜೋಡಿಸಿದ್ದರು ಎಂದು ಹೇಳಿಕೆ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ದಿನೇಶ್ ಗುಂಡೂರಾವ್, ಈ ಕುರಿತ ಚರ್ಚೆ ಅನಗತ್ಯ, ಅವರು ಜೆಡಿಎಸ್ ಪಕ್ಷ ಸಂಘಟನೆ ಮಾಡಿಕೊಳ್ಳಲಿ ಎಂದರು.
ಬಿಜೆಪಿಗೆ ಬೆಂಬಲ ನೀಡಲು ರಾಜೀನಾಮೆ ನೀಡಿದ್ದ ಅನರ್ಹರ ಕುರಿತು ದಿನೇಶ್ ಗುಂಡೂರಾವ್ ವ್ಯಂಗ್ಯದಿಂದ ಪ್ರತಿಕ್ರಿಯಿಸಿದ್ದಾರೆ, ಅನರ್ಹರಲ್ಲೊಬ್ಬರನ್ನ ಡಿಸಿಎಂ ಮಾಡಲಿ, ಲೋಕೋಪಯೋಗಿ, ಇಂಧನ, ಹಣಕಾಸು ಖಾತೆ ಕೊಟ್ಟು ತೃಪ್ತಿ ಪಡಿಸಲಿ ಎಂದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?