Featured
ಹಿಂದಿ ದಿವಸ್ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ : ರಾಜಕಾರಣಿಗಳೇ ಕನ್ನಡಿರಿಗೆ ಆಗುತ್ತಿರುವ ಮೋಸದ ಬಗ್ಗೆ ಮಾತನಾಡಿ ಸ್ವಾಮಿ..!

ಬೆಂಗಳೂರು : ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ಭಾಷೆಗಳು ಒಂದೇ. ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ, ಪ್ರಾತಿನಿಧ್ಯ ಇರಬೇಕು. ಆದ್ರೆ, ಕೇಂದ್ರ ಸರ್ಕಾರ ದಿನೇ ದಿನೇ ಹಿಂದಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಡ್ತಿರೋದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಒಂದೆಡೆ ಬ್ಯಾಂಕಿಂಗ್ ಪರೀಕ್ಷೆ ಸೇರಿದಂತೆ ಕೇಂದ್ರ ಸರ್ಕಾರದ ಬಹುತೇಕ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ಇಲ್ಲ. ಈ ಮಧ್ಯೆ, ಹಿಂದಿ ದಿವಸ್ ಬೇರೆ ಆಚರಣೆಗೆ ತಂದಿರೋದು ಆಕ್ರೋಶಕ್ಕೆ ಕಾರಣವಾಗಿದೆ.
ಹಿಂದಿ ದಿವಸ್ ಆಚರಣೆ ವಿರೋಧಿಸಿ, ಹಿಂದಿ ದಿವಸ್ ರದ್ದತಿಗೆ ಆಗ್ರಹಿಸಿ ಇವತ್ತು ವಿವಿಧ ಕನ್ನಡ ಪರ ಸಂಘಟನೆಗಳು ಟೌನ್ ಹಾಲ್ ಎದುರು ಪ್ರತಿಭಟನೆ ನಡೆಸಿದ್ವು. ಹಿಂದಿ ದಿವಸ್ ಆಚರಣೆ ಹಿಂದಿ ರಾಜ್ಯಗಳಲ್ಲಿ ಬೇಕಾದ್ರೆ ಮಾಡಲಿ. ನಮ್ಮಲ್ಲಿ ಯಾಕೆ ಎಂದು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ರು.
ಪರಿಸ್ಥಿತಿ ಹೀಗೆ ಮುಂದುವರಿದ್ರೆ, ಗೋಕಾಕ್ ಮಾದರಿ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದ್ರು. ಕೇಂದ್ರ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಇವತ್ತು ಹಕ್ಕೋತ್ತಾಯದ ಪ್ರತಿಭಟನೆ ಮಾಡಿದ್ದೇವೆ ಅಂತ ಕನ್ನಡ ಹೋರಾಟಗಾರರು ತಿಳಿಸಿದ್ರು. ಅಲ್ಲದೆ, ಹಿಂದಿಗೆ ಸಿಗುತ್ತಿರೋ ಪ್ರಾಮುಖ್ಯತೆಯಷ್ಟೇ ಕನ್ನಡ ಭಾಷೆಗೂ ಸಿಗಬೇಕು ಎಂದು ಒತ್ತಾಯಿಸಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?