Featured
ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ಮಲ್ಟಿಸ್ಟಾರರ್ ಮೂವಿ : ಒಂದೇ ಸಿನಿಮಾದಲ್ಲಿ ಕಿಚ್ಚ-ಅಪ್ಪು..!
![](https://risingkannada.com/wp-content/uploads/2019/08/sudeep-punith.jpg)
ಬೆಂಗಳೂರು : ಯೆಸ್, ನೀವು ಓದ್ತಾ ಇರೋದು, ಕೇಳ್ತಿರೋದು ಸತ್ಯ. ಇದನ್ನ ಸ್ವತಃ ಕಿಚ್ಚ ಸುದೀಪ್, ಅಪ್ಪು ಪುನೀತ್ ರಾಜ್ಕುಮಾರ್ ಹೇಳಿರೋ ಮಾತು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪೈಲ್ವಾನ್ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಇಬ್ಬರೂ ಸ್ಟಾರ್ಗಳು, ಒಳ್ಳೇ ಕಥೆ ಸಿಕ್ಕರೆ ಒಟ್ಟಿಗೆ ಸಿನಿಮಾ ಮಾಡೋದಾಗಿ ಘೋಷಣೆ ಮಾಡಿದ್ರು.
ಪೈಲ್ವಾನ್ ಆಡಿಯೋ ಲಾಂಚ್ ಕಾರ್ಯಕ್ರಮದ ನಿರೂಪಕಿಯಾಗಿದ್ದ ಅನುಶ್ರೀ, ಈ ಬಗ್ಗೆ ಕಿಚ್ಚ ಮತ್ತು ಅಪ್ಪುರನ್ನ ಪ್ರಶ್ನೆ ಕೇಳಿದ್ರು. ಇಬ್ಬರೂ ಒಳ್ಳೇ ಫ್ರೆಂಡ್ಸ್. ಇಬ್ಬರೂ ಸ್ಟಾರ್ ನಟರು. ಈ ಸ್ಟಾರ್ ನಟರನ್ನು ಒಂದೇ ಸಿನಿಮಾದಲ್ಲಿ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಈ ಕಾತರವನ್ನ ಯಾವಾಗ ನಿಜ ಮಾಡ್ತೀರಿ ಎಂದು ಅನುಶ್ರೀ ಪ್ರಶ್ನೆ ಮಾಡಿದರು.
ಅನುಶ್ರೀ ಪ್ರಶ್ನೆಗೆ ತಕ್ಷಣ ಹಿಂದೆ, ಮುಂದೆ ನೋಡದೇ ಉತ್ತರ ಕೊಟ್ಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ಒಳ್ಳೇ ಕಥೆ ಸಿಕ್ಕರೆ ಖಂಡಿತವಾಗಿ ಸುದೀಪ್ ಜೊತೆ ಸಿನಿಮಾ ಮಾಡುತ್ತೇನೆ. ಸುದೀಪ್ ಜೊತೆ ಸಿನಿಮಾ ಮಾಡಲು ನನಗೆ ಯಾವುದೇ ತೊಂದರೆ ಇಲ್ಲ. ಸಂತೋಷದಿಂದ ಸಿನಿಮಾ ಮಾಡೋದಾಗಿ ಅಪ್ಪು ಹೇಳಿದ್ರು. ಇತ್ತ, ಸುದೀಪ್ ತಕ್ಷಣ ಮೈಕ್ ತಗೊಂಡು, ಪುನೀತ್ ಅವರೇ ಒಪ್ಪಿಕೊಂಡ ಮೇಲೆ ನಾನು ಯಾಕೆ ಬೇಡ ಎನ್ನಲಿ. ಈಗಾಗಲೇ ಶಿವಣ್ಣ ಜೊತೆ ಸಿನಿಮಾ ಮಾಡಿದ್ದೇನೆ. ಅಪ್ಪು ಜೊತೆ ಸಿನಿಮಾ ಮಾಡೋಕೆ ನನಗೂ ಖುಷಿ ಇದೆ, ಶೀಘ್ರವೇ ಒಳ್ಳೇ ಕಥೆ ಸಿಗಲಿ ಇಬ್ಬರೂ ಸಿನಿಮಾ ಮಾಡೋಣ ಅಂತ ಘೋಷಣೆ ಮಾಡಿದ್ರು.
ಇದೇ ವೇಳೆ ಮಾತ್ನಾಡಿದ ಸುದೀಪ್, ಅಪ್ಪು ಜೊತೆ ಸಿನಿಮಾ ಮಾಡೋಕೆ ಮತ್ತೊಂದು ಕಾರಣ ಇದೆ. ಅದೇನಂದ್ರೆ, ಅಪ್ಪು ಜೊತೆ ಸಿನಿಮಾ ಮಾಡಿದ್ರೆ ನಾನು ಡ್ಯಾನ್ಸ್ ಮಾಡುವಂತೆ ಇಲ್ಲ. ಹೀಗಾಗಿ, ಅಪ್ಪು ಜೊತೆ ಕೆಲಸ ಮಾಡೋಕೆ ಖುಷಿ ಅಂತ ಸಂಭ್ರಮ ಹಂಚಿಕೊಳ್ಳುತ್ತಾ, ಹಾಸ್ಯ ಮಾಡಿದ್ರು.
ಅದೇನೇ ಆಗ್ಲಿ, ಕನ್ನಡದಲ್ಲೂ ಮಲ್ಟಿಸ್ಟಾರರ್ ಸಿನಿಮಾಗಳು ಹೆಚ್ಚಾಗಲಿ. ಶೀಘ್ರವೇ ಸುದೀಪ್-ಪುನೀತ್ ಸಿನಿಮಾ ಮಾಡಲಿ ಎಂದು ಹಾರೈಸೋಣ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?