Featured
ಸೆಪ್ಟೆಂಬರ್ 17ರವರೆಗೆ ED ಕಸ್ಟಡಿಗೆ ಡಿಕೆಶಿ : ಟ್ರಬಲ್ ಶೂಟರ್ಗೆ ತಪ್ಪದ ಟ್ರಬಲ್..!
ನವದೆಹಲಿ : ಜಾಮೀನಿನ ನಿರೀಕ್ಷೆಯಲ್ಲಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್ಗೆ ಇಡಿ ಕೋರ್ಟ್ ಶಾಕ್ ನೀಡಿದೆ. ಸೆಪ್ಟೆಂಬರ್ 17 ಅಂದ್ರೆ, ಮಂಗಳವಾರದವರೆಗೆ ಇಡಿ ಕಸ್ಟಡಿಯನ್ನ ವಿಸ್ತರಿಸಿ ಆದೇಶ ಹೊರಡಿಸಿದೆ. ಇಡಿ ಆದೇಶದಿಂದ ಇನ್ನೂ ಐದು ದಿನ ಡಿಕೆಶಿ, ಇಡಿ ವಿಚಾರಣೆ ಎದುರಿಸಬೇಕಿದೆ.
ಈ ನಡುವೆ, ಡಿಕೆಶಿಗೆ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಕೋರ್ಟ್ ಹೇಳಿದ್ದು, ಚಿಕಿತ್ಸೆಗೆ ಮೊದಲ ಆದ್ಯತೆ ನೀಡುವಂತೆ ಹೇಳಿದೆ. ಚಿಕಿತ್ಸೆ ಬಳಿಕ, ಡಿಕೆಶಿ ವಿಚಾರಣೆ ನಡೆಸುವಂತೆ ಇಡಿಗೆ ಕೋರ್ಟ್ ಸೂಚನೆ ನೀಡಿದೆ. ಇದರಿಂದ ಡಿಕೆಶಿ ಕೊಂಚ ರಿಲ್ಯಾಕ್ಸ್ ಆಗಲಿದ್ದಾರೆ. ಪ್ರತಿ 24 ಗಂಟೆಗೊಮ್ಮೆ ಆರೋಗ್ಗ ತಪಾಸಣೆ ನಡೆಸುವಂತೆ ಕೋರ್ಟ್ ಹೇಳಿದೆ.
ಇಷ್ಟೆಲ್ಲದರ ಮಧ್ಯೆ, ಡಿಕೆಶಿ ಜಾಮೀನು ಅರ್ಜಿಗೆ ಸೋಮವಾರ ಆಕ್ಷೇಪಣೆ ಸಲ್ಲಿಸೋದಾಗಿ ಇಡಿ ವಕೀಲರು ಹೇಳಿದ್ದಾರೆ. ಹೀಗಾಗಿ, ಸೋಮವಾರ ಇಡಿ ಪರ ವಕೀಲರು, ಡಿಕೆಶಿ ಸಲ್ಲಿಸಿರೋ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲಿದ್ದಾರೆ. ಒಂದ್ವೇಳೆ, ಮಂಗಳವಾರವೂ ಡಿಕೆಶಿಗೆ ಜಾಮೀನು ಸಿಗದೇ ಹೋದ್ರೆ, ಮುಂದಿನ ದಿನಗಳಲ್ಲಿ ತಿಹಾರ್ ಜೈಲಿಗೆ ಹೋಗಬೇಕಾದ ಸಾಧ್ಯತೆಯೂ ಇದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?