Featured
ಸುದೀಪ್ ಪೈಲ್ವಾನ್ ಮೆಚ್ಚಿದ ಟಗರು ಶಿವಣ್ಣ : ಫ್ಯಾನ್ಸ್ ವಾರ್ ಬಗ್ಗೆ ಶಿವರಾಜ್ ಕುಮಾರ್ ಹೇಳಿದ್ದೇನು..?
ಬೆಂಗಳೂರು : ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾವನ್ನ ಇವತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವೀಕ್ಷಿಸಿದರು. ಬೆಂಗಳೂರಿನ ಒರಾಯನ್ ಮಾಲ್ನಲ್ಲಿ ಸಿನಿಮಾ ವೀಕ್ಷಿಸಿ, ಮಾತ್ನಾಡಿದ ಶಿವಣ್ಣ, ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಸುದೀಪ್ ಆ್ಯಕ್ಟಿಂಗ್, ಕ್ಲೈಮ್ಯಾಕ್ಸ್ ತುಂಬಾ ಚೆನ್ನಾಗಿದೆ. ಸುದೀಪ್ ದೇಹ ದಂಡಿಸಿರೋದು ಸಿನಿಮಾದಲ್ಲಿ ಗೊತ್ತಾಗುತ್ತೆ ಎಂದ್ರು.
ಪೈಲ್ವಾನ್ ಸಿನಿಮಾದಲ್ಲಿರೋ ಸಂದೇಶ ಎಲ್ಲರಿಗೂ ಸ್ಪೂರ್ತಿ ಎಂದ ಶಿವಣ್ಣ, ಪೈಲ್ವಾನ್ ರೀತಿಯ ಸಿನಿಮಾ ಮಾಡುವ ಆಸೆಯನ್ನ ವ್ಯಕ್ತಪಡಿಸಿದ್ರು. ಇದೇ ವೇಳೆ, ತವರಿಗೆ ಬಾ ತಂಗಿ, ಜೋಗಿ ಸಿನಿಮಾಗಳನ್ನ ನೆನಪಿಸಿಕೊಂಡ ಶಿವಣ್ಣ, ಸುದೀಪ್ ತುಂಬಾ ಇಂಟ್ರೆಸ್ಟ್ ತಗೊಂಡು ಸಿನಿಮಾ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ರು.
ಸ್ಟಾರ್ ವಾರ್.. ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಮಾತು
ಸಿನಿಮಾ ಇಂಡಸ್ಟ್ರಿಯಲ್ಲಿ ನಾವೆಲ್ಲಾ ಒಂದೇ. ಎಲ್ರೂ ಕೂಡ ಒಂದು ಕುಟುಂಬ ಇದ್ದಂತೆ. ಎಲ್ಲರಿಗಿಂತ ದೊಡ್ಡವರು ದೇವರು. ಕನ್ನಡದಲ್ಲಿ ಒಳ್ಳೇ ಸಿನಿಮಾ ಬಂತು ಅಂದ್ರೆ, ಅದಕ್ಕೆ ಪ್ರೋತ್ಸಾಹ ಸಿಗಬೇಕು. ಯಾರನ್ನ ಯಾವಾಗ ಮೇಲೆ ಎಳೀತಾನೋ, ಕೆಳಗೆ ತಳ್ತಾನೋ ಗೊತ್ತಿಲ್ಲ. ಎಲ್ಲರೂ ಒಂದಾಗಿರಿ ಅಂತ ಕಿವಿಮಾತು ಹೇಳಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?