ವೈರಲ್
ಸಾಕು ನಾಯಿಯನ್ನೇ ಮದ್ವೆಯಾದ ಮಹಿಳೆ..! ಅಚ್ಚರಿಯಾದ್ರೂ ಸತ್ಯ ಸತ್ಯ ಸತ್ಯ..!

ಬ್ರಿಟನ್ : ಜಗತ್ತಿನಲ್ಲಿ ಏನೆಲ್ಲಾ ಆಗುತ್ತೆ ಅನ್ನೋದಕ್ಕೆ ಈ ಸ್ಟೋರಿಯೇ ಸಾಕ್ಷಿ. ಇತ್ತೀಚೆಗೆ ಮದುವೆ ಆಗ್ಬೇಕು ಅಂದ್ರೆ, ಹುಡುಗ-ಹುಡುಗಿ ಹುಡುಕೋದೇ ದೊಡ್ಡ ಚಾಲೆಂಜ್. ಇಲ್ಲೊಬ್ಬ ಮಹಿಳೆ, ತನಗೆ ಗಂಡ ಸಿಗಲಿಲ್ಲ ಅಂತ ಬೇಜಾರಾಗಿ ಕೊನೆಗೆ ತಾನು ಸಾಕಿದ್ದ ನಾಯಿಯನ್ನೇ ಮದುವೆ ಆಗಿರೋ ವಿಚಿತ್ರ, ವಿಸ್ಮಯ, ವಿಶೇಷ ಘಟನೆ ನಡೆಸಿದೆ.
ಈ ಮಹಿಳೆ ಹೆಸರು ಎಲಿಜಬೆತ್ ಹೋಡ್. ಈಕೆ ಈವರೆಗೆ 221 ಬಾರಿ ಡೇಟಿಂಗ್ ಮಾಡಿದ್ದಾಳೆ. ನಾಲ್ಕು ಬಾರಿ ಎಂಗೇಜ್ಮೆಂಟ್ ಕೂಡ ಆಗಿದೆ. ಆದ್ರೆ, ಮದುವೆವರೆಗೆ ಯಾವುದೂ ಕೂಡ ಬರಲೇ ಇಲ್ಲ. ಇದರಿಂದ ಬೇಸತ್ತ ಎಲಿಜಬೆತ್, ತಾನು ಸಾಕಿದ್ದ ನಾಯಿಯನ್ನೇ ಮದುವೆ ಆಗಿದ್ದಾಳೆ.
ತಾನು ನಾಯಿಯನ್ನ ಏಕೆ ಮದುವೆಯಾದೆ ಎಂಬುದಕ್ಕೆ ಎಲಿಜಬೆತ್ ಕೊಟ್ಟಿರೋ ಹೇಳಿಕೆ ನೋಡಿದ್ರೆ, ಗಾಬರಿ ಆಗುತ್ತೆ. ನಾನು ಈ ನಾಯಿಯನ್ನ ಕಾಪಾಡಿದೆ. ಅದು ನನ್ನನ್ನ ಕಾಪಾಡಿದೆ. ಯಾವುದೋ ಒಂದು ಶೆಲ್ಟರ್ನಲ್ಲಿ ಈ ನಾಯಿ ಇತ್ತು. ಅದನ್ನ ನಾನು ಕಾಪಾಡಿದೆ. ಈಗ ಅದು ನನ್ನನ್ನ ಕಾಪಾಡಿತು ಎಂದಿದ್ದಾರೆ.
ನನಗೆ ಅನ್ನಿಸಿದ್ದನ್ನ ನಾನು ಹೇಳುತ್ತೇನೆ ಎಂದು ಮಾತು ಆರಂಭಿಸೋ ಎಲಿಜಬೆತ್, ಈಗಿನ ಕಾಲದಲ್ಲಿ ವಯಸ್ಸಾದ ಗಂಡಿಗೆ ಯುವತಿಯರು ಬೇಕು. ಯುವಕರಿಗೆ ವಯಸ್ಸಾಗಿರೋ ಮಹಿಳೆಯರು ಬೇಕು ಎಂದಿದ್ದಾರೆ. ನಮ್ಮದೊಂದು ಗುಂಪಿದೆ. ಪ್ರತಿದಿನ ನಾವು ವಾಕ್ಗೆ ಹೋಗುವಾಗ ಜೊತೆಯಲ್ಲಿದ್ದ ನನ್ನ ಫ್ರೆಂಡ್ ಹೇಳಿದ್ರು. ಯಾಕೆ ನೀನು ನಾಯಿಯನ್ನೇ ಮದ್ವೆ ಆಗಬಾರದು ಎಂದು. ಹೀಗಾಗಿಯೇ ನಾನು ನಾಯಿಯನ್ನ ಮದ್ವೆ ಆಗಿದ್ದೇನೆ ಎಂದು ಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ.
ಒಟ್ನಲ್ಲಿ ಇನ್ನೂ ನಮ್ಮ ಕಣ್ಣಲ್ಲಿ ಏನೇನ್ ನೋಡಬೇಕೋ ಏನೋ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?