Featured
ಸಂಸದ ಪ್ರತಾಪ್ ಸಿಂಹ ಹಾಗೂ ಯಡಿಯೂರಪ್ಪಗೆ ಮತ್ತೆ ಆ ಮಾಹಿತಿ ಕೇಳಿದ ನಟಿ ರಶ್ಮಿಕಾ ಮಂದಣ್ಣ..! ಏನದು..?
![](https://risingkannada.com/wp-content/uploads/2019/09/ರಶ್ಮಿಕಾ.jpg)
ರೈಸಿಂಗ್ ಕನ್ನಡ : ಯೆಸ್, ನಟಿ ರಶ್ಮಿಕಾ ಮಂದಣ್ಣ ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರ್ತಾರೆ. ಅದರಂತೆ, ಈ ಹಿಂದೆ ಕೊಡಗಿಗಾಗಿ ಶುರುವಾಗಿದ್ದ ಅಭಿಯಾನವನ್ನ ಮತ್ತೊಮ್ಮೆ ನೆನಪಿಸಿದ್ದಾರೆ ರಶ್ಮಿಕಾ. ಕೊಡಗಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಅನ್ನೋ ಅಭಿಯಾನ ಕಳೆದ ನಾಲ್ಕು ತಿಂಗಳ ಹಿಂದೆ ಶುರುವಾಗಿತ್ತು. ಸಂಸದ ಪ್ರತಾಪ್ ಸಿಂಹ ಸೇರಿದಂತೆ ಆಗಿನ ಸರ್ಕಾರ ಈ ಬಗ್ಗೆ ಗಮನ ನೀಡೋದಾಗಿ, ಶೀಘ್ರವೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನೀಡುವ ಭರವಸೆ ನೀಡಿದ್ರು.
ಆದ್ರೀಗ ರಾಜ್ಯ ಸರ್ಕಾರ ಬದಲಾಗಿದೆ. ಜೊತೆಗೆ ಆ ಬಗ್ಗೆ ಏನೂ ಅಪ್ಡೇಟ್ ಇಲ್ಲ. ಹೀಗಾಗಿ, ಮತ್ತೊಮ್ಮೆ ಟ್ವಿಟ್ಟರ್ನಲ್ಲಿ ಕೊಡಗಿಗೆ ಮಲ್ಟಿ ಸ್ಪೆಷಾಲಿಟಿ ಹಾಸ್ಟಿಟಲ್ ವಿಚಾರ ಏನಾಯ್ತು ಎಂದು ಮಾಹಿತಿ ನೀಡಿ ಕೇಳಿದ್ದಾರೆ. Sir @mepratap or #KarnatakaGovernment this tweet is regarding the multi speciality hospital in Coorg. Can we get updates on it please? Would be glad if we get any information regarding the developments or the updates 😊
ಟ್ವಿಟ್ಟರ್ನಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ರಾಜ್ಯ ಸರ್ಕಾರವನ್ನ ಮಾಹಿತಿ ಕೋರಿರುವ ರಶ್ಮಿಕಾ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ಏನಾದರೂ ಅಪ್ಡೇಟ್ ಆಗಿದೆಯಾ..? ಈ ಕುರಿತು ಪೂರಕವಾಗಿ ಏನಾದ್ರೂ ಕೆಲಸಗಳು ನಡೆದಿವೆಯಾ ಎಂದು ಪ್ರಶ್ನೆ ಮಾಡಿದ್ದಾರೆ. ಆದ್ರೆ, ಇದಕ್ಕೆ ಈವರೆಗೆ ಯಾವುದೇ ರಿಯಾಕ್ಷನ್ ಬಂದಿಲ್ಲ.
ಈ ನಡುವೆ, ರಶ್ಮಿಕಾ ಟ್ವಿಟ್ಟರ್ಗೆ ಕೆಲವು ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ರೆ, ಮತ್ತೂ ಕೆಲವ್ರು ಕಾಲೆಳೆದಿದ್ದಾರೆ. ಇದು ಪಬ್ಲಿಸಿಟಿ ಸ್ಟಂಟ್ ಅಂತ ಹೇಳಿರೋವ್ರಿಗೆ ಟ್ವಿಟ್ಟರ್ನಲ್ಲೇ ರಿಯಾಕ್ಷನ್ ಮಾಡಿರೋ ರಶ್ಮಿಕಾ, ಹೆಲ್ತ್ ಬಗ್ಗೆ ಯೋಚನೆ ಮಾಡಿ ಎಂದಿದ್ದಾರೆ. ಒಟ್ಟಿನಲ್ಲಿ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ರಶ್ಮಿಕಾ, ಆಗಾಗ ತವರು ಪ್ರೇಮವನ್ನ ಮೆರೆಯುತ್ತಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?