Featured
ಸಂಕ್ರಾಂತಿಗೆ ಸಚಿವ ಸಂಪುಟ ವಿಸ್ತರಣೆಯೋ.? ಪುನಾರಚನೆಯೋ..? : ಮಿನಿಸ್ಟರ್ ಆಕಾಂಕ್ಷಿಗಳಲ್ಲಿ ಹೆಚ್ಚಿದ ಉತ್ಸಾಹ..!
ರೈಸಿಂಗ್ ಕನ್ನಡ:- ಕಳೆದ ಆರು ತಿಂಗಳಿನಿಂದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗುತ್ತೆ ಅಥವಾ ಪುನಾರಚನೆ ಆಗುತ್ತೆ ಅನ್ನೋ ಗುಸುಗುಸು ಮಾತು ಕೇಳುತ್ತಲೇ ಇದೆ. ಆದ್ರೆ, ಈವರೆಗೆ ಸಂಪುಟ ವಿಸ್ತರಣೆ ಆಗೇ ಇಲ್ಲ. ಕಾಂಗ್ರೆಸ್, ಜೆಡಿಎಸ್ ಬಿಟ್ಟು ಬಂದ ಅತೃಪ್ತ ನಾಯಕರಿಗೆ ಇನ್ನೂ ಮಿನಿಸ್ಟರ್ ಗಿರಿ ಸಿಕ್ಕಿಲ್ಲ. ಅದ್ರಲ್ಲೂ ಎಂಟಿಬಿ ನಾಗರಾಜ್, ಶಂಕರ್ ಸೇರಿ ಹಲವರು ಈಗೀಗ ಬಿಜೆಪಿ ಮತ್ತು ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕ್ತಿದ್ದಾರೆ.
ಕೊಟ್ಟ ಮಾತು ಉಳಿಸಿಕೊಳ್ತಾರಾ ಯಡಿಯೂರಪ್ಪ.?
ಎಂಟಿವಿ ನಾಗರಾಜ್, ಶಂಕರ್, ಮುನಿರತ್ನಗೆ ಮಿನಿಸ್ಟರ್ ಪಟ್ಟ ಕೊಡೋದಾಗಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ರು. ಆದ್ರೆ, ಈವರೆಗೆ ಆ ಮಾತು ಉಳಿಸಿಕೊಂಡಿಲ್ಲ. ಹೀಗಾಗಿಯೇ, ಎಂಟಿಬಿ ನಾಗರಾಜ್ ಮತ್ತು ಶಂಕರ್, ಮಾತುಗಿಳಿದ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಕೊಟ್ಟ ಮಾತು ತಪ್ಪಲ್ಲ. ಕೊಟ್ಟ ಮಾತು ಉಳಿಸಿಕೊಳ್ತಾರೆ ಅನ್ನೋ ಮಾತು ಹೇಳ್ತಾರೆ.
ಇದಕ್ಕೆ ತಕ್ಕಂತೆ ಯಡಿಯೂರಪ್ಪ ಕೂಡ ನಾನು ಹೇಳಿದಂತೆ ಅವರು ಸಚಿವರಾಗ್ತಾರೆ ಅಂತ ಹೇಳ್ತಾನೇ ಇದ್ದಾರೆ. ಆದ್ರೆ, ಹೈಕಮಾಂಡ್ ಮಾತ್ರ ಅದ್ಯಾಕೋ ಏನೋ, ಬಿಎಸ್ವೈ ಮಾತಿಗೆ ಸೊಪ್ಪು ಹಾಕ್ತಿಲ್ಲ. ಈ ನಡುವೆ, ಶನಿವಾರ ಮತ್ತು ಭಾನುವಾರ ಶಿವಮೊಗ್ಗದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೀತಿದೆ. ಈ ಸಭೆಯಲ್ಲಿ ಸಚಿವಾಕಾಂಕ್ಷಿಗಳು ತಮ್ಮ ಅಳಲನ್ನ ಹೇಳಿಕೊಳ್ಳೋ ಸಾಧ್ಯತೆ ಇದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಹೈಕಮಾಂಡ್ಗೆ ವರದಿ ನೀಡೋ ಸಾಧ್ಯತೆ ಇದೆ.
ಸಂಕ್ರಾಂತಿಗೆ ಕ್ಯಾಬಿನೆಟ್ ವಿಸ್ತರಣೆ ಫಿಕ್ಸ್..!
ಕೋರ್ ಕಮಿಟಿ ಸಭೆ ಬಳಿಕ ಜನವರಿ 15ಕ್ಕೆ ಅಮಿತ್ ಶಾ ಕೂಡ ಕರ್ನಾಟಕಕ್ಕೆ ಬರ್ತಿದ್ದಾರೆ. ಬಹುಶಃ ಅಮಿತ್ ಶಾ, ಸಂಕ್ರಾಂತಿ ಭೇಟಿ ವೇಳೆಗೆ ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಅನ್ನೋದು ಫಿಕ್ಸ್ ಆಗುತ್ತೆ. ಅಲ್ಲಿಗೆ ಸಂಕ್ರಾಂತಿವರೆಗೆ ಕಾಯಲೇಬೇಕು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?