Featured
ಶಾಕಿಂಗ್ ನ್ಯೂಸ್ : ಅಕ್ಟೋಬರ್ – ನವೆಂಬರ್ನಲ್ಲಿ ಭಾರತ-ಪಾಕಿಸ್ತಾನ ನಡುವೆ ಯುದ್ಧ ಗ್ಯಾರೆಂಟಿ..!

ರಾವಲ್ಪಿಂಡಿ : ಯೆಸ್, ನೀವೂ ಓದಿದ ಹೆಡ್ ಲೈನ್ ಕರೆಕ್ಟಾಗಿಯೇ ಇದೆ. ಹೀಗಂತೆ ಹೇಳಿರೋದು ಯಾರೋ ಸಾಮಾನ್ಯ ವ್ಯಕ್ತಿಯಲ್ಲ. ಪಾಕಿಸ್ತಾನದ ರೇಲ್ವೆ ಸಚಿವ ಶೇಖ್ ರಶೀದ್ ಅಹ್ಮದ್. ರಾವಲ್ಪಿಂಡಿಯಲ್ಲಿ ನಡೆದ ಕಾಶ್ಮೀರಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತ-ಪಾಕಿಸ್ತಾನದ ನಡುವೆ ಮಾತುಕತೆ ಅನ್ನೋದು ಮುಗಿದ ಅಧ್ಯಾಯ. ಭಾರತ-ಪಾಕಿಸ್ತಾನದ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸುವವರು ಮೂರ್ಖರು. ಇನ್ನೇನಿದ್ದರೂ ಭಾರತ-ಪಾಕಿಸ್ತಾನದ ನಡುವೆ ಅಂತಿಮ ಯುದ್ಧ ಮಾತ್ರ ಬಾಕಿ ಇದೆ. ಇದೇ ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ಯುದ್ಧ ನಡೆಯಲಿದೆ ಎಂದು ಪಾಕ್ ಸಚಿವ ಪ್ರಚೋದನೆ ನೀಡಿದ್ದಾರೆ. ಪಾಕ್ ಸಚಿವ ಶೇಖ್ ರಶೀದ್ ಮಾತು, ಎಷ್ಟರ ಮಟ್ಟಿಗೆ ಗಂಭೀರವಾಗಿ ತೆಗೆದುಕೊಳ್ಳಬೇಕು ಅನ್ನೋದು ಚರ್ಚಾ ವಿಷಯ.
ವಿಶ್ವಸಂಸ್ಥೆಗೆ ಕಾಶ್ಮೀರ ವಿಷಯ ಬಗೆಹರಿಸುವ ಇಷ್ಟ ಇದ್ದಿದ್ದೇ ಆಗಿದ್ದರೇ, ಕಾಶ್ಮೀರ ಜನ ಅಭಿಪ್ರಾಯ ಸಂಗ್ರಹಿಸಬೇಕಿತ್ತು ಎಂದು ವಿಶ್ವಸಂಸ್ಥೆ ವಿರುದ್ಧವೂ ಅಸಮಾಧಾನ ಹೊರಹಾಕಿದ್ರು. ಇದೇ ವೇಳೆ, ಕಾಶ್ಮೀರ ವಿಚಾರದಲ್ಲಿ ಚೀನಾ ಬೆಂಬಲ ಯಾವತ್ತೂ ಕೂಡ ಪಾಕಿಸ್ತಾನಕ್ಕೇ ಇರುತ್ತೆ ಎಂದರು. ಈ ಮಧ್ಯೆ, ಮುಸ್ಲಿಂ ರಾಷ್ಟ್ರಗಳು ಕಾಶ್ಮೀರ ವಿಚಾರದಲ್ಲಿ ಮೌನ ವಹಿಸಿದ್ದಕ್ಕೆ ಪಾಕಿಸ್ತಾನದ ಸಚಿವ ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಪಾಕಿಸ್ತಾನ ದಿವಾಳಿಯಾಗಿದೆ. ಕತ್ತೆ, ನಾಯಿಗಳನ್ನ ಮಾರಾಟ ಮಾಡಿ ಬದುಕಬೇಕಾದ ಸ್ಥಿತಿಗೆ ಬಂದಿದೆ. ಇಷ್ಟಾದ್ರೂ ಬುದ್ಧಿ ಕಲಿಯದ ಪಾಕ್, ಯುದ್ಧದ ಮಾತಾಡ್ತಿರೋದು ಹಾಸ್ಯಾಸ್ಪದವೇ ಸರಿ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















