Featured
ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಮದ್ವೆ ಇಟಲಿಯಲ್ಲಿ ಆಗಿದ್ದು ಯಾಕೆ..? ಕೊನೆಗೂ ಸೀಕ್ರೆಟ್ ಬಿಚ್ಚಿಟ್ಟ ವಿರುಷ್ಕಾ..!
![](https://risingkannada.com/wp-content/uploads/2019/09/virushka.jpg)
ರೈಸಿಂಗ್ ಕನ್ನಡ : ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮದ್ವೆ ಇಟಲಿಯಲ್ಲಿ ಯಾಕೆ ಆಯ್ತು..? ಭಾರತದಲ್ಲಿ ಯಾಕೆ ಆಗ್ಲಿಲ್ಲ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. 2017ರಲ್ಲಿ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಇಟಲಿಯಲ್ಲಿ ಮದ್ವೆಯಾಗಿದ್ರು. ಆದ್ರೆ, ಇಬ್ಬರು ಭಾರತೀಯ ಸ್ಟಾರ್ಗಳು ಇಟಲಿಯಲ್ಲಿ ಮದ್ವೆ ಆಗ್ತಿರೋದು ಯಾಕೆ ಅಂತ ಹಲವು ಅಭಿಮಾನಿಗಳು, ಮಾಧ್ಯಮಗಳು ಪ್ರಶ್ನೆ ಮಾಡಿದ್ರೂ ಉತ್ತರ ಸಿಕ್ಕಿರಲಿಲ್ಲ. ಇದೀಗ ಸ್ವತಃ ವಿರಾಟ್ ಕೊಹ್ಲಿ, ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ .
ಭಾರತದಲ್ಲಿ ನಾವು ಮದ್ವೆ ಆಗಿದ್ದಿದ್ರೆ, ನಮ್ಮಿಂದ ನಮ್ಮ ಸಂಬಂಧಿಕರು, ಸ್ನೇಹಿತರನ್ನ ಸರಿಯಾಗಿ ನೋಡಿಕೊಳ್ಳಲು ಸಾಧ್ಯವೇ ಆಗ್ತಿರಲಿಲ್ಲ. ಮದುವೆ ಅನ್ನೋದು ಪ್ರತಿಯೊಬ್ಬರ ಖಾಸಗಿತನ. ಜೀವನದಲ್ಲಿ ಒಮ್ಮೆ ಮಾತ್ರ ಬರುತ್ತೆ. ಅದರಲ್ಲಿ ಗೊಂದಲ ಮಾಡ್ಕೊಂಡು, ಟೆನ್ಷನ್ ತೆಗೆದುಕೊಂಡು ಮಾಡಲು ಸಾಧ್ಯವಿಲ್ಲ. ಹೀಗಾಗಿಯೇ ನಮ್ಮ ಅತ್ಯಂತ ಆಪ್ತರಿಗೆ ಮಾತ್ರ ಮದುವೆ ಇನ್ವೈಟ್ ಮಾಡಿದ್ವಿ. ಕೇವಲ 42 ಮಂದಿಗಷ್ಟೇ ನಾವು ಇಟಲಿಗೆ ಆಮಂತ್ರಣ ನೀಡಿದ್ವಿ. ನಾವು ಆಮಂತ್ರಣ ಕೊಟ್ಟ 42 ಮಂದಿಗೆ ಕೊನೇ ದಿನಗಳ ವರೆಗೆ ಮದುವೆ ಎಲ್ಲಿ ಅನ್ನೋದು ಕೂಡ ಹೇಳಿರಲಿಲ್ಲ ಎಂದು ವಿರಾಟ್ ಕೊಹ್ಲಿ ಟಿವಿ ಶೋವೊಂದಕ್ಕೆ ನೀಡಿರೋ ಸಂದರ್ಶನದಲ್ಲಿ ಹೇಳಿದ್ದಾರೆ.
ಇಷ್ಟೇ ಅಲ್ಲದೆ, ಮಾಧ್ಯಮ ಹಾಗೂ ಅಭಿಮಾನಿಗಳಿಗೆ ಬೇಸರ ಮಾಡುವ ಉದ್ದೇಶ ನಮ್ಮದಾಗಿರಲಿಲ್ಲ. ನಮ್ಮ ಖಾಸಗಿತನವನ್ನ ಎಂಜಾಯ್ ಮಾಡಬೇಕಿತ್ತು. ಹೀಗಾಗಿಯೇ, ನಾವು ಇಟಲಿಯಲ್ಲಿ ಮದ್ವೆಯಾದ್ವಿ ಎಂದು ವಿರಾಟ್ ಹೇಳಿದ್ದಾರೆ. ಮದ್ವೆ ಬಳಿಕ ಭಾರತದಲ್ಲೇ ನಡೆದ ರಿಸೆಪ್ಷನ್ ನಿಯಂತ್ರಣ ಮಾಡೋಕೆ ನಮ್ಮ ಕೈಯಲ್ಲಿ ಆಗಲಿಲ್ಲ. ಇಬ್ಬರು ತಾರೆಯರಾಗಿದ್ದರಿಂದ, ಸಹಜವಾಗಿಯೇ ಸಾಕಷ್ಟು ಸ್ನೇಹಿತರು, ಸಂಬಂಧಿಕರು ಇರ್ತಾರೆ. ಹೀಗಾಗಿಯೇ ಅನಿವಾರ್ಯವಾಗಿ ನಾವು ಇಟಲಿಯಲ್ಲಿ ಮದ್ವೆಯಾದ್ವಿ ಎಂದು ಕೊಹ್ಲಿ ಹೇಳಿದ್ದಾರೆ.
ಇಷ್ಟೇ ಅಲ್ಲದೆ, ಮದ್ವೆ ಬಳಿಕ ರಿಸೆಪ್ಷನ್ನಲ್ಲಿ ಜನಜಂಗುಳಿ ನೋಡಿದ ವಿರುಷ್ಕಾ ಫ್ಯಾಮಿಲಿ ಸದಸ್ಯರು, ಇಟಲಿಯಲ್ಲಿ ಮದ್ವೆಯಾಗಿದ್ದೇ ಒಳ್ಳೇದಾಯ್ತು, ಒಂದ್ವೇಳೆ ಭಾರತದಲ್ಲಿ ಮದ್ವೆ ಆಗಿದ್ರೆ ನಮ್ಮ ಕಥೆ ಅಷ್ಟೇ ಅಂತ ನಿಟ್ಟುಸಿರು ಬಿಟ್ಟಿದ್ರಂತೆ.. ಒಟ್ನಲ್ಲಿ, ಕೊನೆಗೂ ಇಟಿಲಿ ಮದ್ವೆ ಸೀಕ್ರೆಟ್ಅನ್ನ ಕೊಹ್ಲಿ ಬಹಿರಂಗ ಪಡಿಸಿದ್ದಾರೆ .
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?