Featured
ವಿಚಿತ್ರ.. ಅಚ್ಚರಿಯಾದರೂ ಸತ್ಯ..! ವ್ಯಕ್ತಿಯ ತಲೆ ಮೇಲೆ ಕೊಂಬು ಬಂದಿದೆ..!

ರೈಸಿಂಗ್ ಕನ್ನಡ : ನೀವು ನೋಡ್ತಿರೋ ಫೋಟೋ ಅಕ್ಷರಶಃ ಸತ್ಯ. ಯಾವುದೇ ಗ್ರಾಫಿಕ್ಸ್ ಅಥವಾ ಗಿಮಿಕ್ ಮಾಡಿರೋದಲ್ಲ. ಇವರ ಹೆಸರು ಶ್ಯಾಮ್ಲಾಲ್. ವಯಸ್ಸು 74 ವರ್ಷ. ಮಧ್ಯ ಪ್ರದೇಶದ ಭೋಪಾಲ್ನವರು. ಹೀಗೆ, ತಲೆ ಮೇಲೆ ಕೊಂಬು ಬೆಳೆದಿದ್ದು, ಇಡೀ ವೈದ್ಯಕೀಯ ಲೋಕವೇ ಅಚ್ಚರಿ ಪಡ್ತಿದೆ. ಜೊತೆಗೆ ಜನತೆ ಭಯಭೀತರಾಗಿದ್ದಾರೆ.
ಇಷ್ಟಕ್ಕೂ ಏನಾಗಿದೆ ಅಂತ ವಿಷಯಕ್ಕೆ ಬರೋದಾದ್ರೆ, 74 ವರ್ಷ ಶ್ಯಾಮ್ಲಾಲ್ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಇವರ ತಲೆ ಮೇಲೆ ಗಾಯವಾಗಿತ್ತು. ಅದೇ ಗಾಯ ಕೆಲ ದಿನಗಳ ಬಳಿಕ ಹೀಗೆ ಕೊಂಬು ರೀತಿಯಲ್ಲಿ ಬೆಳೆದು ನಿಂತಿದೆ. ಆರಂಭದಲ್ಲಿ ಸಣ್ಣದಾಗಿದ್ದ ಈ ಕೊಂಬನ್ನ ಶ್ಯಾಮ್ಲಾಲ್ ಮನೆಯವರು ಕಟ್ ಮಾಡ್ತಿದ್ರು. ಎಷ್ಟೇ ಕಟ್ ಮಾಡಿದ್ರೂ, ಅದು ಬೆಳೆಯುತ್ತಲೇ ಇತ್ತು. ಜೊತೆಗೆ ಕಟ್ ಮಾಡಿದ್ರೆ, ಮತ್ತಷ್ಟು ಬೇಗ ಬೇಗ ಈ ಕೊಂಬು ರೀತಿಯ ಗಾಯ ಬೆಳೆಯುತ್ತಿದೆ.
ಕೊನೆಗೆ ಕೊಂಬಿನ ಕಷ್ಟ ತಾಳಲಾರದೆ ವೈದ್ಯರ ಬಳಿಕ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ವೈದ್ಯರು ಸರ್ಜರಿ ಮಾಡಿ, ಈ ಕೊಂಬನ್ನು ತೆಗೆದುಹಾಕಿದ್ದಾರೆ. ವೈದ್ಯ ಭಾಷೆಯಲ್ಲಿ ಇದನ್ನ ಸೆಬಾಸಿಯಸ್ ಹಾರ್ನ್ ಎಂದ್ರೆ, ಸಾಮಾನ್ಯರು ಇದನ್ನ ಡೆವಿಲ್ ಹಾರ್ನ್ ಎಂದು ಕರೀತಾರೆ. ಒಟ್ನಲ್ಲಿ, ವೈದ್ಯರಿಂದ ಶ್ಯಾಮ್ಲಾಲ್ಗೆ ಸದ್ಯಕ್ಕೆ ರಿಲೀಫ್ ಸಿಕ್ಕಿದೆ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?