Featured
ವಾದಿರಾಜ ಮಠದಲ್ಲಿ ಅಣ್ಣಾಮಲೈ, ಪರಮಾತ್ಮನ ದರ್ಶನದ ಜೊತೆ ಆಧ್ಯಾತ್ಮ..?
ಶಿರಸಿ: ಸೋದೆ ( ಸೋಂದಾ) ವಾದಿರಾಜ ಮಠಕ್ಕೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಆಗಮಿಸಿ ಕುತೂಹಲ ಮೂಡಿಸಿದ್ದಾರೆ.
ಸ್ನೇಹಿತರೊಂದಿಗೆ ಆಗಮಿಸಿದ ಅಣ್ಣಮಲೈ ಮಠದ ಮಕ್ಕಳೊಂದಿಗೆ ಕಾಲ ಕಳೆದರು, ಮಠದ ಆವರಣದಲ್ಲಿ ಸುತ್ತು ಹಾಕಿ ಪರಂಪರೆಯ ಬಗ್ಗೆ ತಿಳಿದುಕೊಂಡರು
ಗೆಳೆಯರೆಲ್ಲರೂ ಶ್ರೀ ವಿಶ್ವ ವಲ್ಲಭತೀರ್ಥ ಶ್ರೀಪಾದರಿಂದ ಮಂತ್ರಾಕ್ಷತೆ ಪಡೆದು, ಕೆಲವು ಸಮಯ ಆಧ್ಯಾತ್ಮದ ಬಗ್ಗೆ ಚರ್ಚೆ ಮಾಡಿದರು.
ಕರ್ನಾಟಕದ ಸಿಂಗಂ ಅಂತ ಕರೆಸಿಕೊಂಡಿದ್ದ ಟಫ್ ಕಾಪ್ ಅಣ್ಣಾಮಲೈ ಇತ್ತೀಚೆಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಮುಂದಿನ ನಡೆಯ ಬಗ್ಗೆ ಕುತೂಹಲ ಉಳಿಸಿದ್ದಾರೆ
ಹಲವರ ಅಭಿಪ್ರಾಯದಲ್ಲಿ ಅಣ್ಣಾಮಲೈ ಆರ್ ಎಸ್ ಎಸ್ ಸೇರಬಹುದು ಎಂದು ಹೇಳಲಾಗುತ್ತಿದೆ, ಇನ್ನು ಕೆಲವರು ಬಿಜೆಪಿ ಸೇರಿ ದಕ್ಷಿಣ ಭಾರತದಲ್ಲಿ ಪಕ್ಷ ಕಟ್ಟಲು ನೆರವಾಗಬಹುದು ಎಂದು ಹೇಳುತ್ತಾರೆ.
Continue Reading
Advertisement
You may like
Click to comment