ಜ್ಯೋತಿಷ್ಯ
ವರಮಹಾಲಕ್ಷ್ಮೀ ಹಬ್ಬವನ್ನ ಕನ್ನಡ ನಟಿಯರು ಹೇಗೆ ಆಚರಿಸ್ತಾರೆ ಗೊತ್ತಾ..?
![](https://risingkannada.com/wp-content/uploads/2019/08/lakshmi-cinema.jpeg)
ಬೆಂಗಳೂರು : ವರಮಹಾಲಕ್ಷ್ಮಿ ಹಬ್ಬ ಅಂದ್ರೆ ಲಕ್ಷ್ಮೀ ಪೂಜೆ ಅನ್ನೋದು ಎಲ್ಲರಿಗೂ ಗೊತ್ತು. ಲಕ್ಷ್ಮೀ ಅಂದ್ರೆ, ಸಂಪತ್ತು ಮಾತ್ರ ಅಲ್ಲ.. ಲಕ್ಷ್ಮೀ ಅಂದ್ರೆ ಹೆಣ್ಣು.. ಹೀಗಾಗಿನೇ ವರಲಕ್ಷ್ಮೀ ಹಬ್ಬ ಹೆಣ್ಣು ಮಕ್ಕಳಿಗೆ ವಿಶೇಷವಾದ ಹಬ್ಬ.. ಮನೆಗೆ ಹೆಣ್ಣು ಯಾವಾಗಲು ನಂದಾದೀಪವೇ ಸರಿ.. ಅದರಂತೆ ವರಮಹಾಲಕ್ಷ್ಮೀ ಹಬ್ಬವನ್ನ ಕನ್ನಡದ ಹಲವು ನಟಿಯರು ಸಂಭ್ರಮದಿಂದ ಪ್ರತಿವರ್ಷ ಆಚರಿಸ್ತಾರೆ. ಯಾವ ಯಾವ ನಟಿಯರು ವರಲಕ್ಷ್ಮೀ ಹಬ್ಬವನ್ನ ವಿಶೇಷವಾಗಿ ಆಚರಿಸ್ತಾರೆ ಅಂತ ನೋಡೋದಾದ್ರೆ..
ಪ್ರಿಯಾಂಕ ಉಪೇಂದ್ರ ತಪ್ಪದೇ ಪ್ರತಿವರ್ಷ ವರಮಹಾಲಕ್ಷ್ಮೀ ಹಬ್ಬವನ್ನ ಆಚರಿಸ್ತಾರೆ. ಮನೆಯಲ್ಲಿ ಮಹಾಲಕ್ಷ್ಮೀಯನ್ನ ಕೂರಿಸಿ, ದಂಪತಿ ಸಮೇತ ಪೂಜೆ ಮಾಡ್ತಾರೆ. ಪ್ರಿಯಾಂಕ ಜೊತೆ ನಟ, ರಾಜಕಾರಣಿ ಉಪೇಂದ್ರ ಕೂಡ ಪೂಜೆಯಲ್ಲಿ ಭಾಗಿಯಾಗೋದು ವಿಶೇಷ..
ವರಮಹಾಲಕ್ಷ್ಮೀ ಹಬ್ಬ ಆಚರಿಸೋ ಲಿಸ್ಟ್ನಲ್ಲಿ ರಾಧಿಕಾ ಪಂಡಿತ್ ಕೂಡ ಸೇರ್ತಾರೆ. ಪ್ರತಿವರ್ಷ ಯಶ್ ಜೊತೆ ಹಬ್ಬ ಆಚರಿಸ್ತಿದ್ದ ರಾಧಿಕಾ, ಇನ್ಮುಂದೆ ಯಶ್ ಜೊತೆ ಮಗಳ ಜೊತೆಯೂ ಸೆಲಬ್ರೇಟ್ ಮಾಡ್ತಾರೆ.
ನಟಿ ಹರಿಪ್ರಿಯಾ ಕೂಡ ಪ್ರತಿವರ್ಷ ವರಮಹಾಲಕ್ಷ್ಮೀ ಹಬ್ಬವನ್ನ ಆಚರಿಸ್ತಾರೆ.. ಟ್ರೆಡಿಷನಲ್ ಡ್ರೆಸ್ ಹಾಕಿಕೊಂಡು, ವಿಶೇಷವಾಗಿ ಪೂಜೆ ಮಾಡ್ತಾರೆ ಹರಿಪ್ರಿಯಾ. ಈ ವರ್ಷ ಹರಿಪ್ರಿಯಾಗೆ ಹಬ್ಬದ ದಿನ ಡಬಲ್ ಸಂಭ್ರಮ. ಯಾಕಂದ್ರೆ, ವರಲಕ್ಷ್ಮೀ ಹಬ್ಬದ ದಿನವೇ ಕುರುಕ್ಷೇತ್ರ ಸಿನಿಮಾ ಬಿಡುಗಡೆ ಆಗ್ತಿದ್ದು, ದರ್ಶನ್ ಜೊತೆ ಹರಿಪ್ರಿಯಾ ಕೂಡ ನಟಿಸಿದ್ದಾರೆ. ಸೋ ಹರಿಪ್ರಿಯಾಗೆ ಈ ಹಬ್ಬ ಡಬಲ್ ಖುಷಿ ಕೊಡ್ತಿದೆ..
ಹರಿಪ್ರಿಯಾ ಜೊತೆ ಕುರುಕ್ಷೇತ್ರದಲ್ಲಿ ನಟಿಸಿರೋ ಮೇಘಾನ ರಾಜ್ ಕೂಡ ವರಲಕ್ಷ್ಮಿ ಹಬ್ಬವನ್ನ ಮಿಸ್ ಮಾಡದೇ ಆಚರಿಸ್ತಾರೆ. ಮೇಘಾನಗೂ ಈ ಹಬ್ಬ ಡಬಲ್ ಸಂಭ್ರಮಕ್ಕೆ ಕಾರಣವಾಗಿದೆ.
ನಟಿ ರಾಧಿಕಾ ಕುರಮಾರಸ್ವಾಮಿ ಕೂಡ ವರಲಕ್ಷ್ಮಿ ಹಬ್ಬವನ್ನ ಮಿಸ್ ಮಾಡದೇ ಸೆಲಬ್ರೇಟ್ ಮಾಡ್ತಾರೆ. ಮನೆಯಲ್ಲೇ ಲಕ್ಷ್ಮೀ ದೇವಿಗೆ ವಿಶೇಷ ಅಲಂಕಾರ ಮಾಡಿ, ಪೂಜಿಸ್ತಾರೆ.
ಇನ್ನು, ಹರ್ಷಿಕಾ ಪೂಣಚ್ಚ, ರಾಗಿಣಿ, ಕೃತಿ ಕರಬಂಧ, ನಟಿ ಹಾಗೂ ರಾಜಕಾರಣಿಗಳಾದ ತಾರಾ ಅನುರಾಧ, ಶೃತಿ, ಮಾಳವೀಕ, ಶಿಲ್ಪಾ ಗಣೇಶ್, ನಟಿ ಅಮೂಲ್ಯ ಸೇರಿದಂತೆ ಬಹುತೇಕ ಸ್ಯಾಂಡಲ್ವುಡ್ ತಾರೆಯರು ವರಮಹಾಲಕ್ಷ್ಮೀ ಹಬ್ಬವನ್ನ ಸೆಲಬ್ರೇಟ್ ಮಾಡ್ತಾರೆ.
ನೀವೂ ಕೂಡ ವರಮಹಾಲಕ್ಷ್ಮಿ ಹಬ್ಬವನ್ನ ಆಚರಿಸಿ, ಲಕ್ಷ್ಮೀಯನ್ನ ಮನೆ ತುಂಬಿಸಿಕೊಳ್ಳಿ..
![](https://risingkannada.com/wp-content/uploads/2020/04/RISING-KANNADA-logo-150px.jpg)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?