Featured
ಲಂಡನ್ ಏರ್ಪೋರ್ಟ್ನಲ್ಲಿ ರಜನಿಕಾಂತ್ ಪುತ್ರಿಗೆ ಆಗಿದ್ದೇನು..? ಶಾಕಿಂಗ್ ಶಾಕಿಂಗ್..!
![](https://risingkannada.com/wp-content/uploads/2019/09/soundarya.jpg)
ಲಂಡನ್ : ಇದು ನಿಜಕ್ಕೂ ಶಾಕಿಂಗ್ ನ್ಯೂಸ್. ವಿಮಾನದಲ್ಲಿ ಪ್ರಯಾಣಿಸೋ ಎಲ್ಲರೂ ಓದಲೇಬೇಕಾದ ಸ್ಟೋರಿ. ಅದರಲ್ಲೂ ವಿದೇಶಿ ಪ್ರವಾಸ ಮಾಡೋವ್ರಿಗೆ ಶಾಕಿಂಗ್ ನ್ಯೂಸೇ ಸರಿ. ಇಷ್ಟಕ್ಕು ಆಗಿದ್ದೇನಪ್ಪ ಅಂದ್ರೆ, ಲಂಡನ್ ಪ್ರವಾಸ ಹೋಗಿದ್ದ ಸೂಪರ್ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯ ರಜನಿಕಾಂತ್ ದಂಪತಿ ಲಗೇಜ್ ಕಳ್ಳತನವಾಗಿದೆ.
ಹೌದು, ಈ ಘಟನೆ ನಡೆಸಿದ್ದು ಲಂಡನ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನ್ನೋದೇ ವಿಶೇಷ. ಸೌಂದರ್ಯ ರಜನಿಕಾಂತ್ ತನ್ನ ಪತಿ ಜೊತೆ ಲಂಡನ್ ಏರ್ಪೋರ್ಟ್ನಲ್ಲಿ ಕ್ಯಾಬ್ಗಾಗಿ ಕಾಯ್ತಿದ್ರು. ಈ ವೇಳೆ, ತಮ್ಮ ಲಗೇಜ್ಅನ್ನ ಕಳ್ಳರು ಕ್ಷಣಾರ್ಧದಲ್ಲೇ ಎಸ್ಕೇಪ್ ಮಾಡಿದ್ದಾರೆ. ಈ ಕುರಿತು ತಕ್ಷಣ ಸೌಂದರ್ಯ ದೂರು ನೀಡಿದ್ರು. ಮೇಲ್ ರೀಪ್ಲೇ ಬಂತಾದ್ರೂ, ಲಗೇಜ್ ಸಿಗಲಿಲ್ಲ. ಸಿಸಿಟಿವಿ ಪುಟೇಜ್ ಚೆಕ್ ಮಾಡಿ ಅಂದ್ರೂ, ಏರ್ಲೈನ್ಸ್ನವರು ಚೆಕ್ ಮಾಡಲಿಲ್ಲ ಎಂದು ಆಕ್ರೋಶವನ್ನ ಹೊರ ಹಾಕಿದ್ದಾರೆ.
ಇಷ್ಟೊಂದು ಬೇಜಾವಾಬ್ದಾರಿಯಾಗಿ ಇದ್ರೆ ಹೇಗೆ..? ಏರ್ಲೈನ್ಸ್ ಅಥವಾ
ಏರ್ಪೋರ್ಟ್ ಹೀಗಾದ್ರೆ ಹೇಗೆ. ಅದರಲ್ಲೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಈ ರೀತಿಯಾದ್ರೆ,
ನಮ್ಮಂಥವರ ಗತಿ ಏನು..? ನಮಗಾದ ಸ್ಥಿತಿ, ಬೇರೆಯವರಿಗೆ ಆಗಬಾರದು ಎಂದು ಟ್ವಿಟ್ಟರ್ನಲ್ಲಿ ತಮ್ಮ ನೋವನ್ನ,
ಆಕ್ರೋಶವನ್ನ ಹಂಚಿಕೊಂಡಿದ್ದಾರೆ . We're sorry to learn about this, Soundarya. Please share your booking reference and email address updated on the booking via a DM so we can look into this. Thanks. https://t.co/67ooSY3Pnf— Emirates Support (@EmiratesSupport) September 5, 2019
ಇಷ್ಟೆಲ್ಲಾ ವಿಚಾರವನ್ನ ಟ್ವಿಟ್ಟರ್ನಲ್ಲಿ ಬರೆದುಕೊಂಡ ಮೇಲೆ, ಎಮಿರೇಟ್ಸ್ ಏರ್ಲೈನ್ಸ್ ಸಂಸ್ಥೆ ಟ್ವಿಟ್ಟರ್ನಲ್ಲಿ ರೀಪ್ಲೆ ಮಾಡಿದ್ದು ಕ್ಷಮೆ ಕೋರಿದೆ. ಅಲ್ಲದೆ, ಈ ಕುರಿತು ಸೂಕ್ತ ಕ್ರಮಕೈಗೊಳ್ಳೋ ಭರವಸೆ ನೀಡಿದೆ.ಅದೇನೇ ಆಗ್ಲಿ, ವಿಮಾನ ನಿಲ್ದಾಣಗಳಲ್ಲಿ ಹುಷಾರಾಗಿರಿ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?