Featured
ರೂಪಾಯಿ ಇಡ್ಲಿ ಅಜ್ಜಿಯ ಬದ್ಧತೆಗೆ ದೇಶವೇ ಶರಣು, ಮಾನವೀಯತೆಯ ಸೆಲೆ ಈ ಹಿರಿಜೀವ
![](https://risingkannada.com/wp-content/uploads/2019/09/IDLI2.jpg)
ಕೊಯಮತ್ತೂರ್: ದಿನೇ ದಿನೇ ಆಹಾರ ಉತ್ಪನ್ನಗಳ ಬೆಲೆ ಗಗನಕ್ಕೇರುತ್ತಿದೆ, ಅಗತ್ಯ ವಸ್ತುಗಳು ಕೈಗೆಟುಕುತ್ತಿಲ್ಲ, ಹೋಟೆಲ್‌ನಲ್ಲಿ ಊಟ ಮಾಡುವುದಿರಲಿ ಒಂದು ಲೋಟ ಟೀ ಕುಡಿಯೋದು ನಮಗೆ ಕಷ್ಟವಾಗುತ್ತಿದೆ. ಎಲ್ಲಿ ಹೋದರೂ ನೋಟ್‌ಗಳದ್ದೇ ಕಾರುಬಾರು, ಚಿಲ್ಲರೆ ಕಾಸಿಗೆ ಬೆಲೆ ಇಲ್ಲ ಎಂದು ಗುಣಗುತ್ತಿರುವಾಗ ಇಲ್ಲೊಂದು ಅಪರೂಪದ ವ್ಯಕ್ತಿತ್ವ ನಮ್ಮನ್ನ ಬೆರಗುಗೊಳಿಸುತ್ತಿದೆ, ಜೀವನ ಸಂಧ್ಯಾಕಾಲದಲ್ಲಿರುವ ಅಜ್ಜಿ ಹಸಿದವರ ಪಾಲಿಗೆ ಬೆಳ್ಳಿಕಿರಣವಾಗಿದೆ.
ವಡಿವೇಲಮ್ ಪಾಳಯಂನಲ್ಲಿ ಚಿಕ್ಕ ಗುಡಿಸಲಿನೊಳಗೆ ಇಡ್ಲಿ ಕ್ಯಾಂಟೀನ್ ನಡೆಸುತ್ತಿರುವ ಕಮಲಾಥಲ್ ಗೆ ಈಗ ೮೦ ವರ್ಷದ ಆಸುಪಾಸು. ಈ ಅಜ್ಜಿಯನ್ನ ರೂಪಾಯಿ ಇಡ್ಲಿ ಅಜ್ಜಿ ಎಂದು ಜನರು ಪ್ರೀತಿಯಿಂದ ಕರೆಯುತ್ತಾರೆ, ಕಾರಣ ಅಜ್ಜಿ ಒಂದು ರೂಪಾಯಿಗೆ ಇಡ್ಲಿ, ಚಟ್ನಿ ಹಾಗೂ ಸಾಂಬಾರ್ ಕೊಡುತ್ತದೆ.
ಅರೆ..! ಒಂದು ರೂಪಾಯಿಗೂ ಇಡ್ಲಿ ಸಿಗುತ್ತಾ ಅಂತ ನೀವು ಆಶ್ವರ್ಯ ಪಡಬಹುದು, ಇದು ಸತ್ಯ..! ಅಜ್ಜಿ ನಲವತ್ತು ವರ್ಷ ಇಡ್ಲಿ ಸಾಂಬಾರ್ ಮಾಡಿಕೊಂಡೇ ಜೀವನ ಸಾಗಿಸಿದೆ ಆದರೆ ಅಜ್ಜಿ ಇಡ್ಲಿ ದರ ಮಾತ್ರ ಒಂದೇ ರೂಪಾಯಿಗೆ ಸೀಮಿತವಾಗಿದೆ ಎಂದರೆ ನಿಜಕ್ಕೂ ಆಶ್ಚರ್ಯ.
ಸುತ್ತಮುತ್ತಲಿನ ಪ್ರದೇಶದಲ್ಲಿ ರೂಪಾಯಿ ಇಡ್ಲಿ ಅಜ್ಜಿ ತುಂಬಾ ಪ್ರಸಿದ್ಧಿ ಪಡೆದಿದೆ, ಯಾವಾಗ ಅಜ್ಜಿ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವಾಯ್ತೋ ಆಗ ಮಾಧ್ಯಮಗಳೂ ಸಹ ಅಜ್ಜಿ ನೋಡಲು ಮುಗಿಬಿದ್ದವು.
![](https://risingkannada.com/wp-content/uploads/2019/09/EEMnK5JUYAA34WF-1024x772.jpg)
ಮೊದಲು ಮಹಿಂದ್ರಾ ಕಂಪನಿಯ ಮಾಲೀಕ ಆನಂದ್ ಮಹೀಂದ್ರಾ ಟ್ವೀಟ್ ಮಾಡಿ, ಈ ಅಜ್ಜಿಯ ಬದ್ಧತೆಯನ್ನ ಮೆಚ್ಚಲೇಬೇಕು, ಯಾರಿಗಾದರೂ ಈ ಅಜ್ಜಿ ಪರಿಚಯ ಇದ್ದರೆ ಹೇಳಿ, ನಾನು ಹಣ ತೊಡಗಿಸುತ್ತೇನೆ ಹಾಗೂ ಉಚಿತವಾಗಿ ಅಡುಗೆ ಅನಿಲ ನೀಡುವ ವ್ಯವಸ್ಥೆ ಮಾಡುತ್ತೇನೆ ಎಂದರು.
ಆನಂದ್ ಮಹೀಂದ್ರಾ ನಂತರ, ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ಟ್ವೀಟ್ ಮಾಡಿ ಅನಿಲ ಸಂಪರ್ಕದ ವ್ಯವಸ್ಥೆ ಮಾಡಿದರು, ಅಷ್ಟರಲ್ಲಾಗಲೇ ಅಜ್ಜಿಯ ಸುದ್ದಿ ರಾಷ್ಟ್ರವ್ಯಾಪಿ ಆಯ್ತು.
ಕಮಲಾಥಲ್ ಪಾಟಿ ( ಅಜ್ಜಿ)ಗೆ ಹಿಂದು ಮುಂದು ಯಾರೂ ಇಲ್ಲ, ತನಗೆ ಸಿಗುವ ೨೦೦ ರೂಪಾಯಿಯಲ್ಲೇ ಸಂತೃಪ್ತಿ ಪಟ್ಟುಕೊಳ್ಳುತ್ತೆ, ಅಜ್ಜಿ ಬೆಳಗ್ಗೆ ೫:೩೦ಕ್ಕೆ ಎದ್ದು ಎಲ್ಲಾ ವ್ಯವಸ್ಥೆ ಮಾಡಿಕೊಂಡು, ಸೌದೆ ಒಲೆಯಲ್ಲೇ ನೂರಾರು ಜನರಿಗೆ ಇಡ್ಲಿ ಸಾಂಬಾರ್ ಮಾಡುತ್ತೆ, ಇಡ್ಲಿಯನ್ನ ಒಂದು ರೂಪಾಯಿಗೆ ಮಾರುತ್ತೆ, ಯಾಕೆ ಹೆಚ್ಚು ಹಣ ಪಡೆಯೋದಿಲ್ಲ ಎಂದು ಕೇಳಿದರೆ, ನನಗ್ಯಾರೂ ಇಲ್ಲ, ಕೋಟ್ಯಧಿಪತಿ ಆಗುವ ಕನಸೂ ಇಲ್ಲ, ಹಾಗೇನಾದರೂ ಇದ್ದಿದ್ರೆ ಇಪ್ಪತ್ತು ವರ್ಷಗಳ ಹಿಂದೆಯೇ ಆಗ್ತಿದ್ದೆ ಎಂದು ಹೇಳುತ್ತೆ.
ಇಂತಹ ಹಿರಿಯ ಜೀವಗಳು ಆಗಾಗ ನಮ್ಮನ್ನೆಲ್ಲಾ ಬಡಿದೆಬ್ಬಿಸುವ ಕೆಲಸ ಮಾಡುತ್ತಿರುತ್ತವೆ, ನಾವು ಮಾತ್ರ ಯಾವುದನ್ನೂ ಮೈಗೂಡಿಸಿಕೊಳ್ಳದೇ ಸ್ವಾರ್ಥಿಗಳಂತೆ ಸಾಗುತ್ತೇವೆ,