Featured
ರಾಧಿಕಾ ಪಂಡಿತ್ ಎರಡನೇ ಮಗು ಹೆರಿಗೆಗೆ ಡೇಟ್ ಫಿಕ್ಸ್.! ಹಬ್ಬದ ಖುಷಿಯಲ್ಲಿ ನಟಿ ರಾಧಿಕಾ ಬಿಚ್ಚಿಟ್ಟ ಅಚ್ಚರಿಯೇನು..?

ರೈಸಿಂಗ್ ಕನ್ನಡ ಸಿನಿಮಾ : ಗೌರಿ ಗಣೇಶ ಹಬ್ಬಕ್ಕೂ ಹೆಣ್ಣು ಮಕ್ಕಳಿಗೂ ಅವಿನಾಭಾವ ಸಂಬಂಧ. ಯಾರೇ ಹೆಣ್ಣು ಮಕ್ಕಳಾದ್ರೂ, ತಮ್ಮ ತವರುಮನೆ ನನೆನಪಲ್ಲಿ ಬಂದು ಹೋಗುತ್ತೆ. ಇನ್ನು, ಪುಟ್ಟ ಪುಟ್ಟ ಹೆಣ್ಣು ಮಕ್ಕಳಿದ್ದರೆ ಅವರಿಗೆ ಸೀರೆ, ಲಂಗ, ಬ್ಲೌಸ್ ಹಾಕಿ ಮಕ್ಕಳನ್ನು ಅಲಂಕಾರ ಮಾಡಿ ಪುಟ್ಟ ಗೌರಮ್ಮನೇ ಅಂತ ಮಂದಹಾಸ ಬೀರುತ್ತಾರೆ. ಇಂಥದ್ದೇ ಖುಷಿ, ಸಂಭ್ರಮವನ್ನ ಆಚರಿಸಿದವ್ರು ಯಶ್-ರಾಧಿಕಾ ದಂಪತಿ. ಯೆಸ್, ರಾಧಿಕಾ-ಯಶ್ರ ಪುಟ್ಟ ಕಂದಮ್ಮ ಐರಾಳಿಗೆ ಮೊದಲ ವರ್ಷದ ಗಣೇಶ ಚತುರ್ಥಿ ಹಬ್ಬವಾಗಿದ್ದು ಆ ದಂಪತಿಗಳು ಅರಸಿ ಹಾರೈಸಿದ್ದಾರೆ.
ಮುದ್ದು ಮುದ್ದಾದ ಐರಾಳಿಗೆ ದೊಡ್ಡ ರೇಷ್ಮೆ ಜರಿಯ ಪುಟ್ಟ ಲಂಗ, ಬ್ಲೌಸ್ ತೊಡಿಸಿ ಪುಟ್ಟ ಕೈಗಳಿಗೆ ಬಳೆ ತೊಡಿಸಿ, ಕುತ್ತಿಗೆಗೆ ಅವಳಿಗಷ್ಟೆ ಹೋಲುವ ಪುಟ್ಟ ಸರ ಹಾಕಿ ಸಿಂಗಾರ ಮಾಡಿ ಐರಾಳ ಭಾವಚಿತ್ರದ ಜೊತೆ ಯಶ್ ದಂಪತಿಗಳು ಸಹ ಪೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಜೊತೆಗೆ ಐರಾಳ ವಿವಿಧ ಭಂಗಿಯ ಪೋಟೋ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಟ್ಟದ್ದಾರೆ.
ಐರಾ ಎಂದರೆ ಮೊದಲೇ ಲಕ್ಮಿಎಂದರ್ಥ.
ಜೊತೆಗೆ ಗೌರಮ್ಮನ ಅಲಂಕಾರ ಕೇಳಬೇಕೆ. ಐರಾಳನ್ನ ನಮ್ಮ ಮನೆಯ ಪುಟಾಣಿ ಗೌರಮ್ಮ ಅಂದೇ ಬಿಟ್ಟರು ತಾಯಿ
ರಾಧಿಕಾ ಪಂಡಿತ್.
ಅಕ್ಟೋಬರ್ನಲ್ಲಿ ಎರಡನೇ ಮಗು..!
ಹಬ್ಬದ ಖುಷಿಯಲ್ಲಿದ್ದ ರಾಧಿಕಾ, ತಾನು ಈಗ ಏಳು ತಿಂಗಳು ಗರ್ಭಿಣಿ ಅದಕ್ಕಾಗಿ ಹೊರಗಡೆ ಹೆಚ್ಚು ಓಡಾಡುವುದಿಲ್ಲ. ಪೋಟೋ ಶೂಟ್ ಕೂಡ ಮಾಡಲಿಲ್ಲ. ಡಾಕ್ಟರ್ಸ್ ಅಕ್ಟೋಬರ್ ಕೊನೆ ವಾರ ಅಥವಾ ನವಂಬರ್ ಮೊದಲ ವಾರ ಹೆರಿಗೆಗೆ ಡೇಟ್ ಕೊಟ್ಟಿದ್ದಾರೆ. ಅದ್ದರಿಂದ ಪೂಜೆಯಲ್ಲಿ ಕೂಡ ನಾನು ಭಾಗಿಯಾಗಲು ಸಾಧ್ಯವಾಗಲಿಲ್ಲ ಎಂದು ರಾಧಿಕಾ ಪಂಡಿತ್ ಹೇಳಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?