ರಾಜ್ಯ
ರಾಜ್ ಕುಮಾರ್ ಜೊತೆಗಿನ ಅಪರೂಪದ ಫೋಟೋ ಹಂಚಿಕೊಂಡ ಪುನೀತ್..

ರೈಸಿಂಗ್ ಕನ್ನಡ :
ಡಾ.ರಾಜಕುಮಾರ್ ಜೊತೆಗೆ ಪ್ರವಾಸ ತೆರಳಿದ್ದಾಗಿನ ಅಪರೂಪದ ಚಿತ್ರವನ್ನು ನಟ ಪುನೀತ್ ರಾಜ್ಕುಮಾರ್ ಹಂಚಿಕೊಂಡಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ಸಾಮಾಜಿಕ ಜಾಲತಾಣದಲ್ಲಿ ಆಗೊಮ್ಮೆ ಈಗೊಮ್ಮೆ ಆ್ಯಕ್ಟಿವ್ ಆಗಿರ್ತಾರೆ. ಅಪರೂಪಕ್ಕೆ ವಿಶೇಷ ಪೋಸ್ಟ್ಗಳನ್ನ ಹಂಚಿಕೊಳ್ಳುತ್ತಾರೆ. ತಂದೆ ಡಾ.ರಾಜಕುಮಾರ್ ಜೊತೆಗೆ ಪ್ರವಾಸ ತೆರಳಿದ್ದಾಗಿನ ಅಪರೂಪದ ಚಿತ್ರವನ್ನು ಇದೀಗ ಹಂಚಿಕೊಂಡಿದ್ದಾರೆ. ಈ ಫೋಟೋ ಎಲ್ಲರ ಗಮನ ಸೆಳೆದಿದೆ.
1988ರಲ್ಲಿ ನಯಾಗರ ಫಾಲ್ಸ್ಗೆ ಭೇಟಿ ನೀಡಿದ್ದಾಗ ತೆಗೆದ ಚಿತ್ರವನ್ನು ಅವರು ಹಂಚಿಕೊಂಡಿದ್ದಾರೆ. ‘ಅಪ್ಪಾಜಿಯವರ ಜೊತೆ 1988 ರಲ್ಲಿ ನಯಾಗರ ಫಾಲ್ಸ್ ನಲ್ಲಿ ಕಳೆದ ಆ ಮಧುರ ಕ್ಷಣಗಳು, ಇಂದಿಗೂ ಸವಿನೆನಪು ಎಂದು ಕ್ಯಾಪ್ಶನ್ ನೀಡಿರುವ ಪುನೀತ್ ಫೋಟೋದೊಂದಿಗೆ ಟ್ವೀಟ್ ಮಾಡಿದ್ದಾರೆ.
ಪುನೀತ್ ಹಂಚಿಕೊಂಡಿರುವ ಚಿತ್ರ ವೈರಲ್ ಆಗಿದ್ದು, ಪುನೀತ್ ಬಾಲ್ಯ ಹಾಗೂ ರಾಜಕುಮಾರ್ ಅವರನ್ನು ಅಭಿಮಾನಿಗಳು ನೆನಪಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ರಾಜಕುಮಾರ್ ಕುಳಿತಿದ್ದು, ಪುನೀತ್ ಅವರತ್ತ ನೋಡುತ್ತಿದ್ದಾರೆ. ಪುನೀತ್ ಜೇಬಿನಲ್ಲಿ ಕೈ ಇಟ್ಟುಕೊಂಡು ನಿಸರ್ಗವನ್ನು ವೀಕ್ಷಿಸುತ್ತಿದ್ದಾರೆ. ತಂದೆ- ಮಗುವಿನ ಈ ಅಪರೂಪದ ಕ್ಷಣವನ್ನು ಪುನೀತ್ ಹಂಚಿಕೊಂಡಿದ್ದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?