Connect with us

Featured

ರಾಜೀವ್ ಗಾಂಧಿಯಿಂದ ಮೋದಿ ವರೆಗೆ : ಎಲ್ಲರನ್ನೂ ಕಾಡಿದೆ ವ್ಯಾಕ್ಸಿನ್ ಪಾಲಿಟಿಕ್ಸ್..!

ರೈಸಿಂಗ್ ಕನ್ನಡ :- ಇಡೀ ಪ್ರಪಂಚ ಇವತ್ತು ಕೊರೋನಾ ವ್ಯಾಕ್ಸಿನ್ಗಾಗಿ ಕಾತರದಿಂದ ಕಾಯ್ತಿದ್ರೆ, ಭಾರತದಲ್ಲಿ ಮಾತ್ರ ಕೊರೋನಾ ಲಸಿಕೆ ರಾಜಕೀಯ ವಸ್ತುವಾಗಿ ಮಾರ್ಪಟ್ಟಿದೆ.. ಬಿಜೆಪಿ ಒಂದ್ ಕಡೆ ಆತ್ಮನಿರ್ಭರ್ ಅಂತ ಹೇಳ್ತಿದ್ರೆ, ಕಾಂಗ್ರೆಸ್ ಸೇರಿ ಪ್ರತಿಪಕ್ಷಗಳು ಆತ್ಮನಿರ್ಭರ್ಗಿಂತ ಪ್ರಾಣ ಮುಖ್ಯ ಅಂತಿದ್ದಾರೆ. ಇದೇ ವ್ಯಾಕ್ಸಿನ್ ವಿಚಾರ ದೊಡ್ಡ ಮಟ್ಟದ ರಾಜಕೀಯಕ್ಕೆ ಕಾರಣವಾಗಿದೆ. ಹಾಗೆ ನೋಡಿದ್ರೆ, ವ್ಯಾಕ್ಸಿನ್ ವಿಚಾರದಲ್ಲಿ ರಾಜಕೀಯ ಇದೇ ಮೊದಲಲ್ಲ.. ರಾಜೀವ್ ಗಾಂಧಿಯಿಂದ ಹಿಡಿದು ಮೋದಿ ವರೆಗೆ ವ್ಯಾಕ್ಸಿನ್ ರಾಜಕೀಯ ನಡೆಯುತ್ತಲೇ ಇದೆ.. ಹಾಗಿದ್ರೆ, ಏನಿದು ವ್ಯಾಕ್ಸಿನ್ ರಾಜಕೀಯ ಅಂತ ಒಂದ್ ವರದಿ ಇದೆ, ನೋಡಿ ಬರೋಣ..

ಕೊರೋನಾಗೆ ರಾಮಬಾಣ ಆಗುತ್ತಾ ಕೋವಿಶೀಲ್ಡ್ & ಕೋವ್ಯಾಕ್ಸಿನ್..?
ತುರ್ತು ಬಳಕೆಗೆ ಕೋವಿಶೀಲ್ಡ್, ಕೋವ್ಯಾಕ್ಸಿನ್ಗೆ ಸಿಕ್ತು ಅನುಮತಿ..!

ಯೆಸ್, ಇಡೀ ವಿಶ್ವವನ್ನೇ ಕಾಡ್ತಿರೋ ಕೊರೋನಾಗೆ ಲಸಿಕೆ ಬರೋದು ಯಾವಾಗ..? ಕೊರೋನಾ ಹೋಗೋದು ಯಾವಾಗ ಅನ್ನೋ ಕಾತರ, ಆತಂಕ ಜನರನ್ನ ಕಾಡ್ತಿದೆ. ಯೂರೋಪ್ ದೇಶಗಳು ಈಗಾಗಲೇ ತುರ್ತು ಬಳಕೆಗೆ ಫೈಝರ್ ಅನ್ನೋ ಲಸಿಕೆ ಬಳಕೆಗೆ ಗ್ರೀನ್ ಸಿಗ್ನಲ್ ಕೊಟ್ಟಿವೆ. ಈ ನಡುವೆ, ಭಾರತ ಕೂಡ ಎರಡು ಲಸಿಕೆಗಳನ್ನ ತುರ್ತು ಬಳಕೆಗೆ ಅನುಮತಿ ನೀಡಿದೆ. ಈ ಸಂಬಂಧ DCGI, ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಹಾಗೂ ಪುಣೆಯ ಸೆರಂನ ಕೋವಿಶೀಲ್ಡ್ ಲಸಿಕೆಗಳಿಗೆ ಗ್ರೀನ್ಸಿಗ್ನಲ್ ಕೊಟ್ಟಿದೆ. ಈ ಎರಡು ಲಸಿಕೆಗಳು ಭಾರತದಲ್ಲೇ ತಯಾರಾಗ್ತಿರೋದು ವಿಶೇಷ..

Advertisement

ಆತ್ಮನಿರ್ಭರ್ ಹೆಸರಲ್ಲಿ ಪ್ರಾಣಕ್ಕೆ ಸಂಚಕಾರ..!
3ನೇ ಹಂತದ ಪರೀಕ್ಷೆ ನಡೆಸದೇ ಅನುಮತಿ ಕೊಟ್ರಾ..?

ಸದ್ಯ, ದೇಶದಲ್ಲಿ ನಡೆಯುತ್ತಿರೋ ಚರ್ಚೆ ಜೊತೆಗೆ ಪಾಲಿಟಿಕ್ಸ್ ಇದು. ಆತ್ಮನಿರ್ಭರ್ ಹೆಸರಲ್ಲಿ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ಗೆ ಅನುಮತಿ ನೀಡಿರೋದು ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ. ಕೋವ್ಯಾಕ್ಸಿನ್ ಲಸಿಕೆ, ಇನ್ನೂ 3ನೇ ಹಂತದ ಪರೀಕ್ಷೆಯನ್ನೇ ಪಾಸ್ ಆಗಿಲ್ಲ. ಹೀಗಿದ್ರೂ, ತುರ್ತು ಬಳಕೆಗೆ ಅನುಮತಿ ನೀಡಿದ್ದು ಯಾಕೆ ಅಂತ ಕಾಂಗ್ರೆಸ್ ನಾಯಕರು ಸೇರಿದಂತೆ ಬಿಜೆಪಿ ವಿರೋಧಿ ಪಕ್ಷಗಳು ಪ್ರಶ್ನೆ ಮಾಡಿದೆ. ಕಾಂಗ್ರೆಸ್ನ ಶಶಿ ತರೂರ್, ಜೈರಾಮ್ ರಮೇಶ್, ಎಸ್ಪಿ ಲೀಡರ್ ಅಖಿಲೇಶ್ ಯಾದವ್, ಎಡಪಕ್ಷಗಳ ಸೀತಾರಾಮ್ ಯೆಚೂರಿ ಸೇರಿ ಹಲವರು ಮೋದಿ ಸರ್ಕಾರವನ್ನ ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್, ವಿಪಕ್ಷಗಳಿಗೆ ಭಾರತದ ವೈದ್ಯರ ಮೇಲೆ ನಂಬಿಕೆ ಇಲ್ವಾ.?
ವಿಪಕ್ಷಗಳ ಟೀಕೆಗೆ ಬಿಜೆಪಿ ನಾಯಕರ ಆಕ್ರೋಶ..!

Advertisement

ಹೀಗೊಂದು ಎಮೋಷನಲ್ ಕಾರ್ಡ್ ಈಗ ಬಿಜೆಪಿ ನಾಯಕರು ಪ್ಲೇ ಮಾಡ್ತಿದ್ದಾರೆ. ಕಾಂಗ್ರೆಸ್ ಹಾಗೂ ವಿಪಕ್ಷಗಳಿಗೆ ಭಾರತೀಯರ ಮೇಲೆ, ಭಾರತದ ಮೇಲೆ ನಂಬಿಕೆ ಇಲ್ಲ. ಇವ್ರಿಗೆ ವಿದೇಶಿ ವಸ್ತುಗಳೇ ಬೇಕಾ ಅಂತ ಪ್ರಶ್ನೆ ಮಾಡ್ತಿದ್ದಾರೆ. ಸ್ವತಃ ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ ಸೇರಿ ಹಲವು ಬಿಜೆಪಿಗರು ಕಾಂಗ್ರೆಸಿಗರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ..

ಎಲ್ಲಾ ವೈಜ್ಞಾನಿಕ ಕ್ರಮಗಳನ್ನ ಅನುಸರಿಸಿಯೇ ಲಸಿಕೆ..!
ಭಾರತ್ ಬಯೋಟೆಕ್ ಎಂಡಿಯಿಂದ ರಾಜಕೀಯಕ್ಕೆ ಸ್ಪಷ್ಟನೆ..!

ಇಷ್ಟೆಲ್ಲದರ ಮಧ್ಯೆ, ಭಾರತ್ ಬಯೋಟೆಕ್ ಎಂಡಿ ಕೃಷ್ಣ ಎಲ್ಲಾ, ಸ್ಪಷ್ಟನೆ ನೀಡಿದ್ದಾರೆ. ಲಸಿಕೆ ವಿಚಾರದಲ್ಲಿ ರಾಜಕೀಯ ಬೇಡ. ನಾವು ಎಲ್ಲಾ ವೈಜ್ಞಾನಿಕ ಕ್ರಮಗಳನ್ನ ಅನುಸರಿಸಿಯೇ ಲಸಿಕೆ ಕಂಡುಹಿಡಿದಿದ್ದೇವೆ. ಭಾರತೀಯ ವೈದ್ಯರು ಕೂಡ ಅರ್ಹರು. ನಮ್ಮ ಸಂಸ್ಥೆ ಈಗಾಗಲೇ 16 ಲಸಿಕೆಗಳನ್ನ ತಯಾರಿಸಿದೆ. ಕೊವ್ಯಾಕ್ಸಿನ್ ಲಸಿಕೆ ಪ್ರಯೋಗ ಈಗಾಗಲೇ 12 ರಾಷ್ಟ್ರಗಳಲ್ಲಿ ಆಗಿದೆ ಎಂದಿದ್ದಾರೆ. ಅಲ್ದೆ, ಭಾರತೀಯ ವೈದ್ಯರನ್ನ ಪ್ರಶ್ನೆಸುವಷ್ಟು ಸುಲಭವಾಗಿ, ಬ್ರಿಟನ್, ಅಮೆರಿಕಾ ವೈದ್ಯರನ್ನ ಪ್ರಶ್ನೆ ಮಾಡ್ತೀರಾ ಅಂತನೂ ರಾಜಕಾರಣಿಗಳಿಗೆ ಕಟುವಾಗಿಯೇ ಕೇಳಿದ್ದಾರೆ.

Advertisement

ರಾಜೀವ್ ಗಾಂಧಿಗೂ ಕಾಡಿತ್ತು ವ್ಯಾಕ್ಸಿನ್ ರಾಜಕೀಯ..!
1987ರಲ್ಲಿ ವ್ಯಾಕ್ಸಿನ್ ಆ್ಯಕ್ಷನ್ ಪ್ರೊಗ್ರಾಂ ವಿವಾದ..!

ವ್ಯಾಕ್ಸಿನ್ ವಿಚಾರವಾಗಿ ರಾಜಕೀಯ ಆಗ್ತಿರೋದು ಇದೇ ಮೊದಲಲ್ಲ. ರಾಜೀವ್ ಗಾಂಧಿ ಪ್ರಧಾನಿ ಆಗಿದ್ದಾಗ 1987ರಲ್ಲಿ ಅಮೆರಿಕಾ ಜೊತೆ ವ್ಯಾಕ್ಸಿನ್ ಆ್ಯಕ್ಷನ್ ಪ್ರೋಗ್ರಾಂ ಅಲಿಯಾಸ್ VAP ಒಪ್ಪಂದ ಮಾಡಿಕೊಂಡಿದ್ರು. ಆಗಲೂ ಇದೇ ರೀತಿ ರಾಜಕೀಯವಾಗಿತ್ತು. ಆಗಿನ ಪ್ರತಿಪಕ್ಷಗಳು, ವಿಜ್ಞಾನಿಗಳು ಸೇರಿ VAP ಒಪ್ಪಂದವನ್ನ ವಿರೋಧಿಸಿದ್ರು. ಆದ್ರೆ, ಮುಂದಿನ ದಿನಗಳಲ್ಲಿ VAP ಸಕ್ಸಸ್ ಆಯ್ತು. VAP ಒಪ್ಪಂದದ ಫಲವಾಗಿಯೇ ಏಷ್ಯಾದ ರಾಷ್ಟ್ರಗಳಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಅತಿಸಾರ ಬೇಧಿಗೆ ಸಲಿಕೆ ಕಂಡುಹಿಡಿಯಲಾಯ್ತು. ಮಕ್ಕಳನ್ನ ಕಾಡುವ ಅತಿಸಾರ ಬೇಧಿಗೆ ಲಸಿಕೆ ಬಂತು. ಸ್ವತಃ ಪ್ರಧಾನಿ ಮೋದಿಯೇ 2015ರಲ್ಲಿ ಇದನ್ನ ಲಾಂಚ್ ಮಾಡಿದ್ರು.

ಒಟ್ನಲ್ಲಿ ರಾಜಕೀಯ ಏನೇ ಇರಲಿ, ಜನರಿಗೆ ಒಳ್ಳೇದಾಗ್ಬೇಕು. ಸದ್ಯ ಕೊವ್ಯಾಕ್ಸಿನ್ ಲಸಿಕೆ ವಿಚಾರದಲ್ಲಿ ಕೆಲವು ಬಿಜೆಪಿ ಲೀಡರ್ಸ್, ಬಿಜೆಪಿ ಸಚಿವರು ಕೂಡ ಪರೋಕ್ಷವಾಗಿ ಅಸಮಾಧಾನ ಹೊರಹಾಕ್ತಿದ್ದಾರೆ.. ಯಾಕಂದ್ರೆ, ಆತ್ಮನಿರ್ಭರ್ಗಿಂತಲೂ ಪ್ರಾಣ, ಜೀವ ಮುಖ್ಯ ಅಲ್ವೇ ಅನ್ನೋ ವಾದ ಮಂಡಿಸ್ತಿದ್ದಾರೆ.. ಮುಂದಿನ ದಿನಗಳಲ್ಲಿ ಈ ವ್ಯಾಕ್ಸಿನ್ ರಾಜಕೀಯ ಎಲ್ಲಿಗೆ ತಲುಪುತ್ತೋ ಕಾದುನೋಡೋಣ..

Advertisement
ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ