Featured
ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸಂಚು ರೂಪಿಸಿದ್ದು ಇವನೇ..?
ರೈಸಿಂಗ್ ಕನ್ನಡ :- ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಕೊಲೆಗೆ ಸಂಚು ರೂಪಿಸಲಾಗಿದೆ ಎಂಬ ಬೆಚ್ಚಿಬೀಳಿಸುವ ಸುದ್ದಿಯೊಂದು ಹೊರಬಿದ್ದಿದೆ. ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸೈಕಲ್ ರವಿ ವಿಚಾರಣೆ ವೇಳೆ ಈ ಬೆಚ್ಚಿಬೀಳಿಸೋ ಸತ್ಯವನ್ನು ಬಾಯಿಬಿಟ್ಟಿದ್ದ. ಬಳಿಕ ಖುದ್ದು ರಾಕಿಂಗ್ ಸ್ಟಾರ್ ಈ ವಿಷಯಗಳಿಗೆ ತೆರೆ ಎಳೆದಿದ್ದರು.
ಕುಖ್ಯಾತ ರೌಡಿ ಶೀಟರ್ ಸ್ಲಂ ಭರತ್ ಪೋಲೀಸರ ಎನ್ ಕೌಂಟರ್ ಗೆ ಬಲಿಯಾಗಿದ್ದಾನೆ. ಇದೇ ಭರತ್ ಈ ಹಿಂದೆ ಸುಪಾರಿ ಕಿಲ್ಲರ್ ಗಳ ಜೊತೆ ಸೇರಿ ಯಶ್ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಮಾತುಗಳು ಕೇಳಿ ಬರುತ್ತೆವೆ. ಗುರುವಾರ ನಸುಕಿನ ಜಾವ ಸ್ಲಂ ಭರತನನ್ನು ಕರೆದೊಯ್ಯುತ್ತಿದ್ದಾಗ ಆತನ ಸ್ನೇಹಿತರು ಪೋಲೀಸರ ಮೇಲೆ ಹಲ್ಲೆ ನಡೆಸಿ ಸಿನೀಮ ರೀತಿಯಲ್ಲಿ ಬಿಡಿಸಿಕೊಂಡು ಹೋಗಿದ್ದರು.
ರೌಡಿ ಶೀಟರ್ ಭರತನನ್ನು ಬೆನ್ನತ್ತಿದ್ದ ರಾಜಗೋಪಾಲ ನಗರ ಪೋಲಿಸರು ಕೊನೆಗೂ ರೌಡಿ ಭರತನನ್ನು ಎನ್ ಕೌಂಟರ್ ಮಾಡಿ ಪರಲೋಕಕ್ಕೆ ಕಳುಹಿಸಿದ್ದರು. ಈ ಕೊಲೆಯೊಂದಿಗೆ ಸ್ಲಂ ಭರತನ ಹಿಸ್ಟರಿಗಳು ಒಂದೊಂದಾಗಿ ಹೊರಬೀಳುತ್ತಿವೆ. ಆರಂಭದಿಂದಲೂ ಸೈಕಲ್ ರವಿ ಜೊತೆ ಉತ್ತಮ ಒಡನಾಟವನ್ನು ಸ್ಲಂ ಭರತ್ ಹೊಂದಿದ್ದ. ರವಿಯ ಬಂಧನದ ಬಳಿಕ ಸ್ಯಾಂಡಲ್ ವುಡ್ ನಟನ ಹತ್ಯೆ ಸ್ಕೆಚ್ ಹಾಕಿರುವ ವಿಚಾರವೊಂದು ಬಹಿರಂಗವಾಗಿತ್ತು.
ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬುದು ಕೇವಲ ವದಂತಿಯಷ್ಟೆ. ಇಂತಹ ಸುದ್ದಿಯಿಂದ ನನ್ನ ಮನೆಯವರು , ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ಕಿರಿಕಿರಿಯಾಗುತ್ತಿದೆ. ಪದೇ ಪದೇ ಮಾಧ್ಯಮಗಳಲ್ಲಿ ಈ ಕುರಿತು ಸುದ್ದಿ ನೋಡಿದಾಗ ನನ್ನನ್ನು ಇಷ್ಟಪಡುವವರ ಮೇಲೆ ಬೇರೆ ರೀತಿಯ ಪರಿಣಾಮ ಉಂಟು ಬೀರುತ್ತದೆ. ಯಾರು ಅಷ್ಟು ಸುಲುಭವಾಗಿ ನನ್ನನ್ನು ಏನೂ ಮಾಡಲು ಆಗುವುದಿಲ್ಲ. ಹತ್ಯೆ ಮಾಡಲು ನಾನೇನು ಕುರಿ ಕೋಳಿಯಲ್ಲ. ಸತ್ಯಾಸತ್ಯತೆಯನ್ನು ಪೋಲಿಸರು ಪತ್ತೆ ಮಾಡುತ್ತಾರೆ ಎಂದು ಸುದ್ದಿಗೊಷ್ಟಿಯಲ್ಲಿ ಯಶ್ ಹೇಳಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?