Featured
ರಶ್ಮಿಕಾ ತೊಡೆ ಮೇಲೆ ಕಾಲು ಹಾಕಿದ ವಿಜಯ್ ದೇವರಕೊಂಡ : ಏನ್ ಗುರು ಇದೆಲ್ಲಾ..?
![](https://risingkannada.com/wp-content/uploads/2019/08/rashmika-vijay.jpg)
ಹೈದರಾಬಾದ್ : ಕರ್ನಾಟಕದ ಕ್ರಶ್ ಅಂತಲೇ ಫೇಮಸ್ ಆಗಿ, ಸದ್ಯ ತೆಲುಗು ಸಿನಿಮಾಗಳಲ್ಲಿ ಮಿಂಚುತ್ತಿರೋ ರಶ್ಮಿಕಾ ಮಂದಣ್ಣ ಮತ್ತೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇತ್ತೀಚೆಗಷ್ಟೇ ಕನ್ನಡ ಮಾತನಾಡಲು ಸ್ವಲ್ಪ ಕಷ್ಟವಾಗುತ್ತೆ ಅಂತ ಕಿರಿಕ್ ಮಾಡ್ಕೊಂಡಿದ್ದ ಕಿರಿಕ್ ಬೆಡಗಿ, ಈಗ ಹೊಸತೊಂದು ವಿವಾದಕ್ಕೆ ಸಿಲುಕಿದ್ದಾರೆ.
ಡಿಯರ್ ಕಾಮ್ರೆಡ್ ಸಿನಿಮಾದ ಸಕ್ಸಸ್ನಲ್ಲಿರೋ ರಶ್ಮಿಕಾ-ವಿಜಯ್ ದೇವರಕೊಂಡ ಜೋಡಿ, ಈಗ ನೆಟ್ಟಿಗರ, ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಇಷ್ಟಕ್ಕೂ ಆಗಿದ್ದು ಇಷ್ಟು..!
ಕಳೆದ ವಾರ ತೆಲುಗಿನ ಚಾನೆಲ್ವೊಂದರಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಸಂದರ್ಶನ ಪ್ರಸಾರವಾಯ್ತು. ಈ ಸಂದರ್ಶನದಲ್ಲಿ ವಿಜಯ್ ದೇವರಕೊಂಡ, ತನ್ನ ಒಂದು ಕಾಲನ್ನ ನಟಿ ರಶ್ಮಿಕಾ ಕಾಲುಗಳ ಮೇಲೆ ಹಾಕ್ತಾರೆ. ಹೀಗೆ ರಶ್ಮಿಕಾ ಮೇಲೆ ಕಾಲು ಹಾಕುವ ವಿಜಯ್, ನನ್ನ ಕಾಲು ಒತ್ತು ಎಂದು ಹೇಳಿ ತಮಾಷೆ ಮಾಡ್ತಾರೆ. ಇದು ಸದ್ಯ ರಶ್ಮಿಕಾ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ.
ರಶ್ಮಿಕಾ ತೊಡೆಯ ಮೇಲೆ ಕಾಲಿಟ್ಟ ವಿಜಯ್ ದೇವರಕೊಂಡ..!
ಚಾನೆಲ್ನ ನಿರೂಪಕಿ ಹೀಗೊಂದು ಪ್ರಶ್ನೆ ಕೇಳ್ತಾರೆ, ಗೀತಾ ನಂತರ ಲಿಲ್ಲಿ.. ಹೇಗೆ ಅನ್ನಿಸ್ತು ಪಾತ್ರ ಎಂದಾಗ ಉತ್ತರಿಸೋ ರಶ್ಮಿಕಾ, ಜೀವನ ಅಂದ್ಮೇಲೆ ಎಲ್ಲ ರೀತಿಯ ಪಾತ್ರ ಮಾಡ್ಬೇಕು. ಈ ರೀತಿ ತಾತನ ಜೊತೆಯೂ ನಟಿಸಬೇಕು ಎಂದು ವಿಜಯ್ ದೇವರಕೊಂಡ ತೋರಿಸಿ ಹೇಳ್ತಾರೆ. ಇದಕ್ಕೆ ಪ್ರತಿಕ್ರಿಯಿಸೋ ವಿಜಯ್, ರಶ್ಮಿಕಾ ತೊಡೆಗಳ ಮೇಲೆ ಕಾಲು ಹಾಕಿ ಅಗೌರವ ತೋರಿಸ್ತಾರೆ. ಅಲ್ಲದೆ, ತಾತನ ಕಾಲು ಒತ್ತು ಎಂದು ಹೇಳ್ತಾರೆ. ಆಗ ವಿಜಯ್ ಕಾಲುಗಳನ್ನ ರಶ್ಮಿಕಾ ಕೆಳಗೆ ಹಾಕಿದ್ರೂ ಮತ್ತೆ ಕಾಲುಗಳನ್ನ ರಶ್ಮಿಕಾ ಮೇಲೆ ಹಾಕ್ತಾರೆ ವಿಜಯ್.
ರಶ್ಮಿಕಾ ಹಾಗೂ ವಿಜಯ್ ವರ್ತನೆಗೆ ಅಭಿಮಾನಿಗಳು, ನೆಟ್ಟಿಗರು ಕಿಡಿಕಾರಿದ್ದಾರೆ. ಈ ರೀತಿ ಸಾರ್ವಜನಿಕ ಸಂದರ್ಶನಗಳಲ್ಲಿ ತರಲೆ ಮಾಡುವುದು, ಅಸಭ್ಯವಾಗಿ ವರ್ತಿಸುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಅಲ್ಲದೆ, ರಶ್ಮಿಕಾ ವಿರುದ್ಧ ಆಕ್ರೋಶವನ್ನೂ ಹೊರ ಹಾಕಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?